ETV Bharat / state

ದಕ್ಷಿಣ ಭಾರತ ಉತ್ಸವ: ರಾಜ್ಯಕ್ಕೆ ಹರಿದು ಬಂತು ₹3,750 ಕೋಟಿ ರೂ. ಬಂಡವಾಳ - ಸಚಿವ ಹೆಚ್.ಕೆ.ಪಾಟೀಲ್ - Minister H K Patil

ದಕ್ಷಿಣ ಭಾರತ ಉತ್ಸವದ ಸಂದರ್ಭದಲ್ಲಿ ರಾಜ್ಯಕ್ಕೆ 3,750 ಕೋಟಿ ರೂ. ಬಂಡವಾಳ ಹರಿದು ಬಂದಿದೆ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.

ದಕ್ಷಿಣ ಭಾರತ ಉತ್ಸವ
ದಕ್ಷಿಣ ಭಾರತ ಉತ್ಸವ (ETV Bharat)
author img

By ETV Bharat Karnataka Team

Published : Jun 15, 2024, 5:12 PM IST

ಬೆಂಗಳೂರು: ದಕ್ಷಿಣ ಭಾರತ ಉತ್ಸವದ ಸಂದರ್ಭದಲ್ಲಿ ರಾಜ್ಯಕ್ಕೆ 3,750 ಕೋಟಿ ರೂ. ಬಂಡವಾಳ ಹರಿದು ಬಂದಿದೆ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು. ದಕ್ಷಿಣ ಭಾರತ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಕರ್ನಾಟಕದ 320 ಕಿ.ಮೀ ಉದ್ದದ ಕರಾವಳಿ ಕಡಲ ತೀರದಲ್ಲಿರುವ 40 ತಾಣಗಳನ್ನು ಗುರುತಿಸಲಾಗಿದೆ. ಈ ತಾಣಗಳನ್ನು ಅಭಿವೃದ್ಧಿಪಡಿಸಲು ಆಸಕ್ತಿ ವ್ಯಕ್ತಪಡಿಸಬೇಕೆಂದು ಅವರು ಕೈಗಾರಿಕೋದ್ಯಮಿಗಳನ್ನು ಕೋರಿದರು.

ಕರ್ನಾಟಕ ಪುರಾತತ್ವ ಕ್ಷೇತ್ರ ವಿಶೇಷ ಸ್ಥಾನದಲ್ಲಿದೆ. 25,000ಕ್ಕೂ ಹೆಚ್ಚು ಮಹತ್ವದ ಸ್ಮಾರಕಗಳು ಕರ್ನಾಟಕದಲ್ಲಿವೆ. ಆದರೆ ಈ ಎಲ್ಲಾ ಸ್ಥಾನಗಳ ಪೈಕಿ ಕೇವಲ 500 ತಾಣಗಳನ್ನು ಮಾತ್ರ ನಾವು ಸಂರಕ್ಷಿಸುತ್ತಿದ್ದೇವೆ. ಉಳಿದ ತಾಣಗಳ ಸಂರಕ್ಷಣೆಗೆ ಕಾಲಬದ್ಧ ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು, ದತ್ತು ಸ್ಮಾರಕ, ದತ್ತು ಯೋಜನೆ ಅಂತಹ ವಿಶೇಷ ಕಾರ್ಯಕ್ರಮಕ್ಕೆ ದಾನಿಗಳು ಸಹಕರಿಸಬೇಕೆಂದು ವಿನಂತಿಸಿದರು.

ಕರ್ನಾಟಕ ಹಲವಾರು ಶ್ರದ್ಧಾ ಕೇಂದ್ರಗಳನ್ನು ಹೊಂದುವ ಮೂಲಕ ಹಿರಿಯ ಸ್ಥಾನದಲ್ಲಿದೆ. ಮಂಗಳೂರು, ಉಡುಪಿ, ಕಾರವಾರದಿಂದ ಹಿಡಿದು ಸವದತ್ತಿ ರೇಣುಕಾ ಯಲ್ಲಮ್ಮ, ಚಾಮುಂಡೇಶ್ವರಿ, ಹುಲಿಗೆಮ್ಮ, ಹೊಳಲಮ್ಮ, ಬಾದಾಮಿ ಬನಶಂಕರಿ, ಗಾಣಗಾಪುರ ದತ್ತಮಂದಿರ, ಬೀದರ್ ಬಸವನಾಡು, ಕೂಡಲಸಂಗಮ ಸೇರಿದಂತೆ ಇಂತಹ ಪವಿತ್ರ ಸ್ಥಳಗಳಲ್ಲಿ ಕರ್ನಾಟಕ ಮೂಲಭೂತ ಸೌಲಭ್ಯ ಸೃಷ್ಟಿಸುವ ಪಿಪಿಪಿ ಮಾಡೆಲ್​ನಲ್ಲಿ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಣಯಿಸಿದೆ ಎಂದರು.

ಹಂಪಿ, ಪಟ್ಟದಕಲ್ಲು, ಬೇಲೂರು, ಹಳೇಬೀಡು, ಸೋಮನಾಥಪುರ, ಪಶ್ಚಿಮ ಘಟ್ಟಗಳ ನೈಸರ್ಗಿಕ ತಾಣಗಳು ಈಗಾಗಲೇ ವಿಶ್ವ ಪಾರಂಪರಿಕ ತಾಣಗಳೆಂದು ಯುನೆಸ್ಕೋದಿಂದ ಮಾನ್ಯತೆ ಪಡೆದಿವೆ. ಬೀದರ್​ನ ಕರೇಜ್ ಲಕ್ಕುಂಡಿ ಡೆಕ್ಕನ್ ಸಲ್ತನೇತಗಳನ್ನು ವಿಶ್ವ ಪಾರಂಪರಿಕ ತಾಣಗಳನ್ನಾಗಿ ಮಾಡಲು ಸೂಕ್ತ ಪ್ರಯತ್ನ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ಅರಣ್ಯ ಗುಡ್ಡಗಾಡು ಹೊಳ್ಳಕೊಳ್ಳ ನೈಸರ್ಗಿಕ ಸಂಪತ್ತಿಗೆ ಹೆಸರಾದದ್ದು. ಕರ್ನಾಟಕ ವನ್ಯಜೀವಿಗಳು ನೈಸರ್ಗಿಕ ರಮಣೀಯ ಸ್ಥಳಗಳ ಪ್ರದರ್ಶನ ವಿಶೇಷ ರೀತಿಯಲ್ಲಿ ಆಗಬೇಕಾಗಿದೆ. ಅದಕ್ಕಾಗಿ ವಿಶೇಷ ಪ್ರಯತ್ನ ಮಾಡಲು ಸರ್ಕಾರ ನಿರ್ಧರಿಸಿದೆ. ಸಾಹಸಿ ಪ್ರವಾಸೋದ್ಯಮ, ಶೈಕ್ಷಣಿಕ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮ ದಿನ, ಸಂತೋಷದಿಂದ ಬೇಸರ ಕಳೆಯುವ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ ಪಾರಂಪರಿಕ ತಾಣಗಳ ಅಧ್ಯಯನ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಬಂಡವಾಳ ಹೂಡಿಕೆದಾರರ ಆಕರ್ಷಣೆಗೆ ಶೀಘ್ರ ಪ್ರವಾಸೋದ್ಯಮ ನೀತಿ ಜಾರಿ: ಡಿಸಿಎಂ ಡಿ.ಕೆ.ಶಿವಕುಮಾರ್ - DCM DK Shivakumar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.