ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಹಂಗಳಾಪುರ ಗ್ರಾಮದಲ್ಲಿ ಕಬ್ಬು ಕಟಾವು ಮಾಡುವ ವೇಳೆ ಎರಡು ಚಿರತೆ ಮರಿಗಳು ಪತ್ತೆಯಾಗಿವೆ. ಹಂಗಳ ಗ್ರಾಮದ ರೈತ ಮಹೇಶ್ ಎಂಬುವರ ಜಮೀನಿನಲ್ಲಿ ಈ ಚಿರತೆ ಮರಿಗಳು ಸಿಕ್ಕಿವೆ. ಇವುಗಳಲ್ಲಿ ಒಂದು ಹೆಣ್ಣು, ಮತ್ತೊಂದು ಗಂಡು. ಕಬ್ಬು ಕಟಾವು ಮಾಡುವ ವೇಳೆ ಚೀರಾಟದ ಶಬ್ದ ಕೇಳಿಸಿದೆ. ಗೂಡಿನಂತೆ ಮಾಡಿಕೊಂಡಿದ್ದ ಪ್ರದೇಶದ ಸುತ್ತಲೂ ಕಬ್ಬು ಕಟಾವು ಮಾಡಿ ಸುರಕ್ಷಿತವಾಗಿ ಮರಿಗಳನ್ನು ಹೊರಕ್ಕೆ ತೆಗೆದುಕೊಂಡ ಟೊಮೆಟೋ ಟ್ರೇನಲ್ಲಿ ಇಟ್ಟು ಬಳಿಕ ಅರಣ್ಯ ಇಲಾಖೆಗೆ ಕಾರ್ಮಿಕರು ಒಪ್ಪಿಸಿದ್ದಾರೆ.
ಚಿರತೆ ಮರಿಗಳಿಗೆ ಎರಡು ತಿಂಗಳು ಅಂದಾಜು ಮಾಡಲಾಗಿದೆ. ರೈತನ ಜಮೀನಿನಲ್ಲೇ ಚಿರತೆ ಮರಿಗಳನ್ನು ಬೋನಿನಲ್ಲಿಟ್ಟು ತಾಯಿ ಚಿರತೆ ಜೊತೆ ಸೇರಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ಇನ್ನು ಚಿರತೆ ಪತ್ತೆಗೆ ಕ್ಯಾಮೆರಾ ಅಳವಡಿಸಿದ್ದು, ರಾತ್ರಿ ತಾಯಿ ಚಿರತೆ ಬರುವ ನಿರೀಕ್ಷೆ ಇದೆ ಎಂದು ಆರ್ಎಫ್ಒ ಸತೀಶ್ ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ: ಅಪರೂಪದ ಪುನುಗು ಬೆಕ್ಕು ಪತ್ತೆ; ಚಿಕಿತ್ಸೆ ಕೊಡಿಸಿ ರಕ್ಷಿಸಿದ ಜನ - Civet Rescued