ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ರ‍್ಯಾಂಕ್ ತಡೆಹಿಡಿದಿದ್ದ/ನೀಡದೇ ಇದ್ದ ಸುಮಾರು 1,500 ಮಂದಿ ಮೊದಲ ದಿನವೇ ತಮ್ಮ ಅಂಕಗಳನ್ನು ಅಪ್‌ಡೇಟ್ ಮಾಡಿಕೊಂಡಿದ್ದು, ನಾಳೆ ಸ್ಪಾಟ್ ರ‍್ಯಾಂಕ್ ನೀಡಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಪಿಯುಸಿಯಲ್ಲಿ ನೀಡುವ ವಿಶಿಷ್ಟ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿರುವಂತಹ ಸುಮಾರು 3000 ಅಭ್ಯರ್ಥಿಗಳಿಗೆ ರ‍್ಯಾಂಕ್ ಘೋಷಣೆ ಆಗಿರಲಿಲ್ಲ. ಅವರಿಗೆ ಅಪ್‌ಡೇಟ್ ಮಾಡಿಕೊಳ್ಳಲು ಪ್ರತ್ಯೇಕ ಲಿಂಕ್ ಅನ್ನು ಕೆಇಎ ಸೋಮವಾರ ಬಿಡುಗಡೆ ಮಾಡಿತ್ತು. ಬೆಳಿಗ್ಗೆಯಿಂದಲೇ ಸರಾಗವಾಗಿ ಅಂಕಗಳನ್ನು ಅಪ್‌ಡೇಟ್ ಮಾಡಿಕೊಂಡಿದ್ದಾರೆ. ಎಲ್ಲರಿಗೂ ನಾಳೆ ರ‍್ಯಾಂಕ್ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಿಇಟಿ ರ‍್ಯಾಂಕ್ ತಡೆ ವಿವಾದ: ಅಂಕ ದಾಖಲಿಸಿ ರ‍್ಯಾಂಕ್ ಪಡೆಯುವ ಅವಕಾಶ ನೀಡಿದ ಕೆಇಎ - CET Rank Controversy