ETV Bharat / state

ಉದ್ಯಮಶೀಲತೆ ಹೆಚ್ಚಿಸಲು 100 ಉದ್ದಿಮೆಗಳಿಂದ 100 ಕಾಲೇಜುಗಳ ದತ್ತು: ಸಚಿವ ಪ್ರಿಯಾಂಕ್​ ಖರ್ಗೆ

ವಿದ್ಯಾರ್ಥಿಗಳಲ್ಲಿ ಇರುವ ಉದ್ಯಮಶೀಲತೆ ಕೊರತೆ ನೀಗಿಸುವ ಸಲುವಾಗಿ ಕಂಪನಿಗಳು ಕಾಲೇಜುಗಳನ್ನು ದತ್ತು ಪಡೆದು, ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿವೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ತಿಳಿಸಿದರು.

Minister Priyank Kharge press conference
ಸಚಿವ ಪ್ರಿಯಾಂಕ್​ ಖರ್ಗೆ ಸುದ್ದಿಗೋಷ್ಠಿ (ETV Bharat)
author img

By ETV Bharat Karnataka Team

Published : Nov 21, 2024, 5:34 PM IST

Updated : Nov 21, 2024, 8:02 PM IST

ಬೆಂಗಳೂರು: "ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು 100 ಕಾಲೇಜುಗಳನ್ನು ಬೆಂಗಳೂರಿನ 100 ಉದ್ದಿಮೆಗಳನ್ನು ದತ್ತು ಪಡೆಯಲಿದೆ" ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್​ ಖರ್ಗೆ ತಿಳಿಸಿದರು.

ಬೆಂಗಳೂರು ಟೆಕ್ ಸಮ್ಮಿಟ್​ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, "ರಾಜ್ಯ ಅತಿ ಹೆಚ್ಚು ಮಾನವ ಸಂಪನ್ಮೂಲ ಹೊಂದಿದೆ. ಆದರೆ ವಿದ್ಯಾರ್ಥಿಗಳಲ್ಲಿ ಉದ್ಯಮಿಶೀಲತೆ ಕೊರತೆ ಇರುವುದಾಗಿ ತಿಳಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು 100 ಕಾಲೇಜುಗಳನ್ನು ಬೆಂಗಳೂರಿನ 100 ಉದ್ದಿಮೆಗಳು ದತ್ತು ಪಡೆಯಲಿವೆ. ಅದರಿಂದ ಉದ್ಯಮಶೀಲತೆ ಹೆಚ್ಚಾಗಲಿದೆ. ಅವರಿಗೆ ತರಬೇತಿ ನೀಡುವ ಕೆಲಸ ಮಾಡಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದ ಒಳಗೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ನಿಪುಣ ಯೋಜನೆಯಿಂದ ಜಗತ್ತಿನಲ್ಲಿ ಅತ್ಯಂತ ನುರಿತ, ಉದ್ಯಮಶೀಲತೆ, ನಿಪುಣತೆ ಹೊಂದಿರುವ ಅಭ್ಯರ್ಥಿಗಳು ಕನ್ನಡಿಗರಾಗಲಿದ್ದಾರೆ" ಎಂದರು.

ಸಚಿವ ಪ್ರಿಯಾಂಕ್​ ಖರ್ಗೆ ಸುದ್ದಿಗೋಷ್ಠಿ (ETV Bharat)

ಈ ಸಮ್ಮಿಟ್​​ನಲ್ಲಿ 51 ದೇಶಗಳು ಭಾಗಿ: "ಬೆಂಗಳೂರು ಟೆಕ್​ ಸಮ್ಮಿಟ್​ನಲ್ಲಿ ಈ ಬಾರಿ 51 ದೇಶಗಳು ಪಾಲ್ಗೊಂಡಿವೆ. 521 ಸ್ಪೀಕರ್​ಗಳು ಮಾತನಾಡಿದ್ದಾರೆ. ಕಾನ್ಫರೆನ್ಸ್ ಡೆಲಿಗೇಟ್ಸ್ ಆಗಿ 5,210 ನೋಂದಣಿ ಮಾಡಿಸಿಕೊಂಡಿದ್ದಾರೆ. ಒಟ್ಟು ನೋಂದಣಿ ಮಾಡಿದ ಡಿಲಿಗೇಟ್ಸ್ 15,465. ಸಮ್ಮಿಟ್​ಗೆ 21,372 ಬಿಸಿನೆಸ್ ವಿಸಿಟರ್ಸ್ ನೋಂದಣಿ ಮಾಡಿಸಿಕೊಂಡಿದ್ದಾರೆ. ಸುಮಾರು 50,000 ಮಂದಿ ಎಕ್ಸಿಬಿಷನ್ ಮಳಿಗೆಗಳಿಗೆ ಭೇಟಿ ನೀಡಿದ್ದಾರೆ. 84 ಕಾನ್ಫರೆನ್ಸ್ ನಡೆದಿದೆ" ಎಂದು ಮಾಹಿತಿ ನೀಡಿದರು.

"ಮೊದಲ ಬಾರಿಗೆ ರಾಜ್ಯ ನಿರ್ದಿಷ್ಟ ಸ್ಪೇಸ್ ಟೆಕ್ನಾಲಜಿ ಕರಡು ನೀತಿ ಲೋಕಾರ್ಪಣೆ ಮಾಡಲಾಗಿದೆ. 2033ರಲ್ಲಿ ದೇಶ ಸ್ಪೇಸ್ ಟೆಕ್ನಾಲಜಿಯಲ್ಲಿ 44 ಬಿಲಿಯನ್ ಡಾಲರ್ ವಹಿವಾಟು ನಡೆಸಲಿದೆ. ಅದರಲ್ಲಿ ರಾಜ್ಯದ ಪಾಲು 50% ಹೊಂದುವ ಗುರಿ ಇಟ್ಟಿದ್ದೇವೆ. ಇನ್ನು ಜಿಸಿಸಿ ನೀತಿ ಲೋಕಾರ್ಪಣೆ ಮಾಡಿದ್ದು, 3.5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಇದೆ. ಆ ಮೂಲಕ ರಾಜ್ಯದಲ್ಲಿ 15 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದೆ. ಇದರಲ್ಲಿ ಬೆಂಗಳೂರೇತರ ಜಿಲ್ಲೆಗಳಿಗೆ ಆದ್ಯತೆ ನೀಡಲಾಗುವುದು. ನ್ಯಾನೋ ಜಿಸಿಸಿ ನೀತಿಯನ್ನು ರೂಪಿಸಲಾಗುತ್ತದೆ" ಎಂದು ತಿಳಿಸಿದರು.

ಮುಂದಿನ ವರ್ಷದಿಂದ ಸ್ಟಾರ್ಟ್ ಅಪ್ ಪ್ರಶಸ್ತಿ: ಸ್ಟಾರ್ಟ್ ಅಪ್ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಮುಂದಿನ ಬಿಟಿಎಸ್​ನಲ್ಲಿ ನೀಡಲಾಗುತ್ತದೆ. ಆ ಮೂಲಕ ರಾಜ್ಯದ ನವೋದ್ಯಮಗಳಿಗೆ ಉತ್ತೇಜನ ನೀಡಲಾಗುತ್ತದೆ. ಎಐನಲ್ಲಿ ಉತ್ಕೃಷ್ಟ ಕೇಂದ್ರವನ್ನು ಸ್ಥಾಪಿಸುವ ಘೋಷಣೆ ಮಾಡಿದ್ದೇವೆ. ಇದಕ್ಕಾಗಿ ಐಐಟಿ ಅಲ್ಯೂಮಿನಿಯಮ್ ಸಂಘದ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ.‌ ಇದರಿಂದ ಎಲ್ಲ ಐಐಟಿಗಳ ಜೊತೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ. ಬಿ-ಟು-ಬಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. 6,500 ಬಿ-ಟು-ಬಿ ಸಭೆಗಳನ್ನು ಮಾಡಿದ್ದೇವೆ. ರಾಜ್ಯ ಒಟ್ಟು 40% ಐಟಿ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. 4.11 ಲಕ್ಷ ಕೋಟಿ ರೂ. ಐಟಿ ರಫ್ತು ಮಾಡಿದ್ದೇವೆ. ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳಿಂದ ಸುಮಾರು 8,000 ಕೋಟಿ ರೂ.ಗೂ ಅಧಿಕ ರಫ್ತು ಮಾಡಲಾಗಿದೆ" ಎಂದರು.

5,000 ವಿದ್ಯಾರ್ಥಿಗಳಿಗೆ ಇಸ್ರೋ ತರಬೇತಿ: ಇಸ್ರೋ ಐದು ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಯೋಜಿಸಿದೆ. 10,000 ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತೆ ಇಸ್ರೋಗೆ ಮನವಿ ಮಾಡಿದ್ದೇವೆ. 10,000 ಸ್ಟಾರ್ಟ್ ಅಪ್​ಗಳನ್ನು ಬೆಂಗಳೂರು ಹೊರತಾದ ಜಿಲ್ಲೆಗಳಲ್ಲಿ ಆರಂಭಿಸಲು ಚಿಂತನೆ ಇದೆ. ಐದು ವರ್ಷಗಳಲ್ಲಿ ಕ್ಲಸ್ಟರ್ ನಿರ್ದಿಷ್ಟ ಕ್ಷೇತ್ರಗಳಿಗೆ ಆದ್ಯತೆ ನೀಡಿ ಸ್ಟಾರ್ಟ್ ಅಪ್ ಸ್ಥಾಪಿಸಲಾಗುವುದು" ಎಂದು ತಿಳಿಸಿದರು.

ಬೆಂಗಳೂರಲ್ಲಿ ಇಂಡಸ್ ಆಂತ್ರಪಿನರ್ಸ್​ ಸಮ್ಮಿಟ್: ಇಂಡಸ್ ಆಂತ್ರಪ್ರಿನರ್ಸ್ ಸಮ್ಮಿಟ್ ಈ ಬಾರಿ ಬೆಂಗಳೂರಲ್ಲಿ ನಡೆಯಲಿದೆ. ಡಿ.9- ಡಿ.12 ರಲ್ಲಿ ಬೆಂಗಳೂರು ಮತ್ತು ಮೈಸೂರಲ್ಲಿ ಸಮ್ಮೇಳನ ನಡೆಯಲಿದೆ. 10,000 ಜಾಗತಿಕ ಸ್ಟಾರ್ಟ್ ಅಪ್​ಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಇದು ಅಂತಾರಾಷ್ಟ್ರೀಯ ಮಟ್ಟದ ನವೋದ್ಯಮದ ಉತ್ಸವವಾಗಿದೆ. ಆ ಮೂಲಕ ರಾಜ್ಯದ ನೀತಿ, ರಾಜ್ಯದ ಮಾನವ ಸಂಪನ್ಮೂಲ ಶ್ರೇಷ್ಠವಾಗಿದೆ ಎಂಬುದನ್ನು ಪ್ರತಿಪಾದಿಸಿದೆ" ಎಂದು ಹೇಳಿದರು.

ಇದನ್ನೂ ಓದಿ: ಮೆಟ್ರೋ, ಬಸ್ ಎಲ್ಲಿ ಬೇಕಾದ್ರೂ ಬಳಸಿ ಇ-ಕಿಕ್ ಸ್ಕೂಟರ್: ಮಡಚಿ ಬ್ಯಾಗ್​ನಲ್ಲೂ ಇಡಬಹುದು!

Last Updated : Nov 21, 2024, 8:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.