ETV Bharat / state

ಚಾಮರಾಜನಗರ: ನಾಯಿಗಳ ಹಿಂಡು ದಾಳಿಗೆ 10 ಕುರಿಗಳು ಬಲಿ, ಎರಡಕ್ಕೆ ಗಾಯ - SHEEP KILLED

ನಾಯಿಗಳ ದಾಳಿಗೆ 10 ಕುರಿಗಳು ಬಲಿಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ನಾಯಿ ದಾಳಿಗೆ ಕುರಿ ಬಲಿ
ನಾಯಿ ದಾಳಿಗೆ ಕುರಿ ಬಲಿ (ETV Bharat)
author img

By ETV Bharat Karnataka Team

Published : May 20, 2024, 7:47 AM IST

ಚಾಮರಾಜನಗರ: ನಾಯಿಗಳ ಹಿಂಡು ದಾಳಿ ನಡೆಸಿ 10 ಕುರಿಗಳನ್ನು ಕೊಂದುಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಮಾಡ್ರಹಳ್ಳಿ ಗ್ರಾಮದ ನಾಗಮ್ಮ ಎಂಬವರು ತಮ್ಮ ಜಮೀನಿನಲ್ಲಿ ಕುರಿಗಳನ್ನು ಮೇಯಲು ಬಿಟ್ಟಿದ್ದ ವೇಳೆ ನಾಯಿಗಳ ಹಿಂಡು ದಾಳಿ ಮಾಡಿ 10 ಕುರಿಗಳನ್ನು ಕೊಂದುಹಾಕಿವೆ, ಎರಡು ಕುರಿಗಳನ್ನು ತೀವ್ರವಾಗಿ ಗಾಯಗೊಳಿಸಿವೆ.

ಕುರಿಗಳ ಮೇಲೆ ದಾಳಿ ಮಾಡಿದ್ದು ಸಾಕು ನಾಯಿಗಳಾ ಅಥವಾ ಬೀದಿ ನಾಯಿಗಳಾ ಎಂಬುದು ತಿಳಿದುಬಂದಿಲ್ಲ. ತನ್ನ ಬಳಿ ಇದ್ದ, 12 ಕುರಿಗಳಲ್ಲಿ 10 ಕುರಿಗಳು ಇಲ್ಲವಾಗಿವೆ, ತನಗೆ ಸೂಕ್ತ ಪರಿಹಾರ ಕೊಡಬೇಕೆಂದು ನಾಗಮ್ಮ ಮನವಿ ಮಾಡಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ನಾಗಮ್ಮ ದೂರು ಕೊಟ್ಟಿದ್ದಾರೆ.

ನ್ಯಾಯಾಲಯಕ್ಕೆ ನುಗ್ಗಿ ದಾಳಿ ನಡೆಸಿದ ಶ್ವಾನ: ಇತ್ತೀಚೆಗಷ್ಟೇ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನ್ಯಾಯಾಲಯದ ಆವರಣಕ್ಕೆ ಹುಚ್ಚು ನಾಯಿಯೊಂದು ನುಗ್ಗಿ ಆರು ಜನರನ್ನು ಕಚ್ಚಿತ್ತು. ಏಕಾಏಕಿ ನ್ಯಾಯಾಲಯಕ್ಕೆ ನುಗ್ಗಿದ್ದ ಶ್ವಾನ, ಕಂಡ ಕಂಡವರ ಮೇಲೆ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿತ್ತು.

ಇದನ್ನೂ ಓದಿ: ಹೆಚ್ಚುತ್ತಿರುವ ನಾಯಿ ದಾಳಿ ಪ್ರಕರಣಗಳು: ರಕ್ಷಣೆಗೆ ವಹಿಸಿ ಈ ಎಲ್ಲ ಮುನ್ನೆಚ್ಚರಿಕೆ ಕ್ರಮಗಳು - Heavy cases of dog bites

ETV Bharat Logo

Copyright © 2024 Ushodaya Enterprises Pvt. Ltd., All Rights Reserved.