ETV Bharat / sports

ನನ್ನ ಮಗನ ವೃತ್ತಿಜೀವನ ಹಾಳು ಮಾಡಿದ ಧೋನಿಯನ್ನು ಎಂದಿಗೂ ಕ್ಷಮಿಸಲ್ಲ: ಮಾಜಿ ನಾಯಕನ ವಿರುದ್ಧ ಯುವಿ ತಂದೆ ಕಿಡಿ! - Yuvraj Singh father allegation - YUVRAJ SINGH FATHER ALLEGATION

ನನ್ನ ಮಗನ ಕ್ರಿಕೆಟ್​ ಕೆರಿಯರ್​ ಅನ್ನು ಹಾಳು ಮಾಡಿದ ಧೋನಿಯನ್ನು ಎಂದಿಗೂ ಕ್ಷಮಿಸಲ್ಲ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್​ ಅವರ ತಂದೆ ಗಂಭೀರ ಆರೋಪ ಮಾಡಿದ್ದಾರೆ.

ಯುವರಾಜ್​ ಸಿಂಗ್​ ಮತ್ತು ಎಮ್​ ಎಸ್​ ಧೋನಿ
ಯುವರಾಜ್​ ಸಿಂಗ್​ ಮತ್ತು ಎಮ್​ ಎಸ್​ ಧೋನಿ (IANS)
author img

By ETV Bharat Sports Team

Published : Sep 2, 2024, 4:43 PM IST

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಧೋನಿಯಿಂದಲೇ ತಮ್ಮ ಮಗನ ವೃತ್ತಿಜೀವನ ಹಾಳಾಗಿದ್ದು, ಮಗನಿಗೆ ದ್ರೋಹ ಬಗೆದಿರುವ ಧೋನಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಯೋಗರಾಜ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

ಯೂಟ್ಯೂಬ್​ ಚಾನೆಲ್​ ಸಂದರ್ಶನವೊಂದರಲ್ಲಿ ಮಾತನಾಡಿದ ಯೋಗರಾಜ್" ಧೋನಿ ಪ್ರಸಿದ್ಧ ಕ್ರಿಕೆಟರ್​ ಆಗಿರಬಹುದು. ಆದರೆ, ಅವರು ನನ್ನ ಮಗನಿಗೆ ಕ್ಷಮಿಸಲಾಗದ ಅನ್ಯಾಯ ಮಾಡಿದ್ದಾರೆ. ಎಲ್ಲವೂ ಈಗ ಬೆಳಕಿಗೆ ಬರುತ್ತಿದೆ. ಇನ್ನು 4 - 5 ವರ್ಷ ಕ್ರಿಕೆಟ್ ಆಡಬಹುದಾಗಿದ್ದ ನನ್ನ ಮಗನ ಕೆರಿಯರ್ ಅನ್ನು ಧೋನಿ ಹಾಳು ಮಾಡಿದ್ದಾರೆ. ನಾನು ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ. ನನ್ನ ಕುಟುಂಬದ ಸದಸ್ಯರ ಹತ್ತಿರ ಬರಲು ಬಿಡುವುದಿಲ್ಲ. ಧೋನಿ ಆತ್ಮಾವಲೋಕನ ಮಾಡಿಕೊಳ್ಳಲ್ಲಿ ಈ ಹಿಂದೆ ಸ್ಟಾರ್​ ಬ್ಯಾಟರ್​ಗಳಾದ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಹೇಳಿದ್ದರು, ಯುವರಾಜ್ ಸಿಂಗ್​ ನಂತಹ ಮತ್ತೊಬ್ಬ ಆಟಗಾರ ಎಂದಿಗೂ ಸಿಗಲ್ಲ ಎಂದಿದ್ದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ದೇಶಕ್ಕಾಗಿ ಆಡಿ ವಿಶ್ವಕಪ್ ಗೆದ್ದ ಯುವರಾಜ್‌ಗೆ ಸರ್ಕಾರ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಯೋಗರಾಜ್ ಹೇಳಿದರು.

ಭಾರತ 2007ರ ಟಿ-20 ವಿಶ್ವಕಪ್ ಮತ್ತು 2011ರ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಅವರಿಗೆ ಸಾಕಷ್ಟು ಮನ್ನಣೆ ಸಿಕ್ಕಿಲ್ಲ ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ. ಯುವಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದಿತ್ತು. ನಂತರ ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಿ ಮತ್ತೆ ಟೀಂ ಇಂಡಿಯಾ ಸೇರಿಕೊಂಡರು. ಆ ನಂತರ ಯುವಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ಏತನ್ಮಧ್ಯೆ, ಯುವಿ 2000 ಮತ್ತು 2017 ರ ನಡುವೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ ಎಲ್ಲ ಸ್ವರೂಪಗಳಲ್ಲಿ 402 ಪಂದ್ಯಗಳನ್ನು ಆಡಿದ್ದು 11,178 ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕಗಳು ಮತ್ತು 71 ಅರ್ಧ ಶತಕಗಳು ಸೇರಿವೆ. ಅವರು 2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದರು.

ಇದನ್ನೂ ಓದಿ: ಉದ್ದನೆಯ ಕೂದಲಿಗಾಗಿ ದಂಡ ಕಟ್ಟಿದ್ದ ವೇಗದ ಬೌಲರ್​ ಇಶಾಂತ್​ ಶರ್ಮಾಗೆ ಬರ್ತಡೇ ಸಂಭ್ರಮ - Ishant Sharma

ETV Bharat Logo

Copyright © 2025 Ushodaya Enterprises Pvt. Ltd., All Rights Reserved.