ETV Bharat / sports

WPL 2024 : ಮುಂಬೈ ಇಂಡಿಯನ್ಸ್ ಮಣಿಸಿ ಫೈನಲ್​ಗೆ ಲಗ್ಗೆ ಇಟ್ಟ ಬೆಂಗಳೂರು ವನಿತೆಯರು​ - WPL 2024

ಎಲಿಮಿನೇಟರ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಬೆಂಗಳೂರು ವನಿತೆಯರು ಮಹಿಳಾ ಐಪಿಎಲ್​ ಫೈನಲ್​ ತಲುಪಿದ್ದಾರೆ.

wpl-2024-royal-challengers-bangalore-women-beat-mumbai-indians-women-to-enter-final
WPL 2024 : ಮುಂಬೈ ಇಂಡಿಯನ್ಸ್ ಮಣಿಸಿ ಬೆಂಗಳೂರು ವನಿತೆಯರು​ ಫೈನಲ್​ಗೆ ಲಗ್ಗೆ
author img

By ETV Bharat Karnataka Team

Published : Mar 15, 2024, 11:03 PM IST

Updated : Mar 16, 2024, 9:57 AM IST

ನವದೆಹಲಿ: ಬಿಗುವಿನ ಬೌಲಿಂಗ್​ ದಾಳಿ ನಡೆಸಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವನಿತೆಯರು ಮುಂಬೈ ಇಂಡಿಯನ್ಸ್​ ವಿರುದ್ಧ 5ರನ್​ಗಳ ಗೆಲುವಿನೊಂದಿಗೆ ಮಹಿಳಾ ಐಪಿಎಲ್​ ಟೂರ್ನಿಯಲ್ಲಿ ಫೈನಲ್​ ತಲುಪಿದ್ದಾರೆ.

ಅರುಣ್​ ಜೇಟ್ಲಿ ಮೈದಾನದಲ್ಲಿ ನಡೆದ ಎಲಿಮಿನೇಟರ್​ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಮಂಧಾನ ಪಡೆ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. ಮೊದಲ ಇನ್ನಿಂಗ್ಸ್​ನಲ್ಲಿ ಆರ್‌ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ಸೋಫಿ ಡಿವೈನ್ (10) ಮತ್ತು ಸ್ಮೃತಿ ಮಂಧಾನ (10), ದಿಶಾ ಕಸಟ್​ (0) ಒಬ್ಬರ ಹಿಂದೊಬ್ಬರಂತೆ ವಿಕೆಟ್​ ಒಪ್ಪಿಸಿ ಪೆವಿಲಿಯನ್ ಸೇರಿದರು. ಈ ವೇಳೆ ತಂಡಕ್ಕೆ ಆಸರೆಯಾದ ಎಲ್ಲಿಸ್ ಪೆರ್ರಿ 50 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್​ ಸಮೇತ 66 ರನ್​ ಕಲೆಹಾಕಿದರು. ಉಳಿದಂತೆ ರಿಚಾ ಘೋಷ್ (14), ಮೊಲನೂ (11) ಮತ್ತು ಜಾರ್ಜಿಯಾ (ಅಜೇಯ 18) ಕೂಡ ತಂಡದ ಸ್ಕೋರ್​ಗೆ ಕೊಡುಗೆ ನೀಡಿದರು. ಬೌಲಿಂಗ್​ನಲ್ಲಿ ಮುಂಬೈ ಪರ ಹ್ಯಾಲಿ, ನ್ಯಾಟ್ ಸೀವರ್ ಮತ್ತು ಇಶಾಕ್ ತಲಾ ಎರಡು ವಿಕೆಟ್ ಪಡೆದರು.

136 ರನ್​ಗಳ ಸಾಧಾರಣ ಗುರಿ ಪಡೆದ ಮುಂಬೈ ಎರಡನೇ ಇನ್ನಿಂಗ್ಸ್​ನಲ್ಲಿ ಉತ್ತಮ ಆರಂಭ ಪಡೆಯಿತು. ಆರಂಭಿಕ ಬ್ಯಾಟರ್​ಗಳ ಯಾಸ್ತಿಕಾ ಭಾಟಿಯಾ ಮತ್ತು ಹ್ಯಾಲಿ ಮ್ಯಾಥ್ಯೂಸ್ ಜತೆಯಾಗಿ 27 ರನ್​ಗಳ ಕಲೆ ಹಾಕುವ ಮೂಲಕ ಗೆಲುವಿನ ಸೂಚನೆ ನೀಡಿದರು. ಈ ವೇಳೆ ಶ್ರೇಯಾಂಕಾ ಪಾಟೀಲ್ ಎಸೆತದಲ್ಲಿ 15 ರನ್ ಗಳಿಸಿದ್ದ ಮ್ಯಾಥ್ಯೂಸ್​ರ ವಿಕೆಟ್​ ಪಡೆಯುವ ಮೂಲಕ ಇಬ್ಬರ ಆಟಕ್ಕೆ ಬ್ರೇಕ್​ ಹಾಕಿದರು. ಮೂರನೆ ವಿಕೆಟ್​ಗೆ ಕ್ರೀಸ್​ಗಿಳಿದ ಬ್ರಂಟ್​, ಯಾಸ್ತಿಕ ಜತೆಗೂಡಿ 23ರನ್​ಗಳ ಜೊತೆಯಾಟವಾಡಿ ತಂಡದ ಸ್ಕೋರ್​​ 50ರ ಗಡಿಗೆ ಕೊಂಡೊಯದು ಮತ್ತೊಮ್ಮೆ ತಂಡದ ಗೆಲುವಿನ ಸುಳಿವು ನೀಡಿದರು. ಈ ವೇಳೆ ಪೆರ್ರಿ ಎಸೆತದಲ್ಲಿ 19 ರನ್ ​ಗಳಿಸಿದ್ದ ಯಾಸ್ತಿಕ ವಿಕೆಟ್​ ಒಪ್ಪಿಸಿದರೆ, 11ನೇ ಓವರ್​ನಲ್ಲಿ ಬ್ರಂಟ್​ ಕೂಡ ವಿಕೆಟ್​ ಒಪ್ಪಿಸಿ ಪೆವಿಲಯನ್​ ಸೇರಿದರು.

ಈ ವೇಳೆಗೆ ಮುಂಬೈ ಸ್ಕೋರ್ 68/3 ಆಗಿತ್ತು. ಈ ಹಂತದಲ್ಲಿ ಹರ್ಮನ್‌ಪ್ರೀತ್ (33; 30 ಎಸೆತಗಳಲ್ಲಿ 4×4) ಮತ್ತು ಅಮೆಲಿಯಾ ಜೆತೆಗೂಡಿ ಸ್ಕೋರ್ ಹೆಚ್ಚಿಸಿ ತೊಡಗಿದರು. ಸಾಧ್ಯವಾದಾಗಲೆಲ್ಲಾ ಬೌಂಡರಿಗಳನ್ನು ಬಾರಿಸಿದ್ದರಿಂದ ಗೆಲುವಿನ ಅಂತರವು 24 ಎಸೆತಗಳಲ್ಲಿ 32ಕ್ಕೆ ತಲುಪಿತು. ಉತ್ತಮವಾಗಿ ಬ್ಯಾಟಿಂಗ್​ ನಡೆಸಿದ್ದ ಹರ್ಮನ್ ಶ್ರೇಯಾಂಕ್​ ಪಾಟೀಲ್​ಗೆ ವಿಕೆಟ್​ ಒಪ್ಪಿಸಿದರೆ, ನಂತ ಬಂದ ಸಜನಾ ಕೂಡ ಕ್ರೀಸ್​ನಲ್ಲಿ ಹೆಚ್ಚುಹೊತ್ತು ಉಳಿಯದೆ ನಿರ್ಗಮಿಸಿದರು. ಪರಿಣಾಮ ಪಂದ್ಯ ತಿರುವು ಪಡೆಯಿತು. ಕೊನೆಯ ಓವರ್‌ನಲ್ಲಿ 12 ರನ್‌ಗಳ ಅಗತ್ಯವಿದ್ದಾಗ, ಮೊದಲ 3 ಎಸೆತಗಳಲ್ಲಿ ಕೇವಲ 4 ರನ್ ಗಳಿಸಲಾಯಿತು. ನಾಲ್ಕನೇ ಎಸೆತದಲ್ಲಿ ಪೂಜಾ (4) ಔಟಾದರೇ ಮುಂದಿನ ಎರಡು ಎಸೆತಗಳಲ್ಲೂ ಬೌಂಡರಿ ಗಳಿಸಲು ಸಾಧ್ಯವಾಗದೇ ಮುಂಬೈ 5ರನ್​ಗಳಿಂದ ಸೋಲಿಗೆ ಶರಣಾಯಿತು.

ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್​ನಿಂದ ಐಎಸ್​​ಪಿಎಲ್​ ವರೆಗೆ; ಸವಾಲುಗಳನ್ನು ಮೆಟ್ಟಿ ನಿಂತ ಕ್ರಿಕೆಟರ್​ ಆಕಾಶ್ ಗೌತಮ್

Last Updated : Mar 16, 2024, 9:57 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.