ETV Bharat / sports

ಮಹಿಳಾ ಪ್ರೀಮಿಯರ್ ಲೀಗ್: ಕೊನೆಯ ಎಸೆತದಲ್ಲಿ ಸಂಜನಾ ಸಿಕ್ಸರ್:​ ಡೆಲ್ಲಿ ವಿರುದ್ಧ ಮುಂಬೈ ಶುಭಾರಂಭ - WPL 2024

WPL 2024: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆ ಎಸೆತದಲ್ಲಿ ಗೆಲುವು ಕಂಡ ಮುಂಬೈ ಇಂಡಿಯನ್ಸ್ ತಂಡ​ ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಶುಭಾರಂಭ ಮಾಡಿದೆ.

WPL 2024: Mumbai Indians win by four-wicket win against Delhi Capitals
ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಸಂಜನಾ :​ ಡೆಲ್ಲಿ ವಿರುದ್ಧ ಮುಂಬೈಗೆ ಗೆಲುವಿನ ಶುಭಾರಂಭ
author img

By ANI

Published : Feb 24, 2024, 8:04 AM IST

ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸಿದ ಎಸ್​ ಸಂಜನಾ ಮುಂಬೈ ಇಂಡಿಯನ್ಸ್​ಗೆ 4 ವಿಕೆಟ್​​ ರೋಚಕ ಜಯ ತಂದಿತ್ತರು. 172 ರನ್​ ಗುರಿ ಬೆನ್ನಟ್ಟಿದ ಹಾಲಿ ಚಾಂಪಿಯನ್ಸ್ ಮುಂಬೈ ತಂಡ ಟೂರ್ನಿಯಲ್ಲಿ​ ಗೆಲುವಿನ ಆರಂಭ ಪಡೆಯಿತು.

ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್​ ಪ್ರೀತ್​ ಕೌರ್​ ಮೊದಲು ಬೌಲಿಂಗ್​ ಮಾಡುವ ನಿರ್ಧಾರ ಕೈಗೊಂಡರು. ಬ್ಯಾಟಿಂಗ್​ಗಿಳಿದ ಡೆಲ್ಲಿ ಕ್ಯಾಪಿಟಲ್ಸ್ ಮೂರು ರನ್​ ಆಗುವಷ್ಟರಲ್ಲೇ ಶಫಾಲಿ ವರ್ಮಾ (1) ವಿಕೆಟ್​ ಕಳೆದುಕೊಂಡಿತು. ಬಳಿಕ ನಾಯಕಿ ಲ್ಯಾನ್ನಿಂಗ್​ (31) ಹಾಗೂ ಅರ್ಧಶತಕ ಬಾರಿಸಿದ ಆಲಿಸ್ ಕ್ಯಾಪ್ಸಿ (75) ತಂಡಕ್ಕೆ ಆಸರೆಯಾದರು. ಬಳಿಕ ಅಂತಿಮ ಓವರ್​ಗಳಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ಜೆಪಿಮಾ ರೋಡ್ರಿಗಸ್​​ 42 (24 ಎಸೆತ) ಹಾಗೂ ಮರಿಜಾನ್ನೆ ಕಪ್ (16, 9 ಎಸೆತ) ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಡೆಲ್ಲಿ ತಂಡ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 171 ರನ್​ ಕಲೆ ಹಾಕಿತ್ತು.

ಮುಂಬೈಗೆ ಯಸ್ತಿಕಾ, ಕೌರ್​ ಬಲ: 172 ರನ್​ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್​ಗೆ​ ಎರಡನೇ ಎಸೆತದಲ್ಲೇ ಹೇಲಿ ಮ್ಯಾಥ್ಯೂಸ್ ಔಟಾಗುವ ಮೂಲಕ ಆಘಾತ ಎದುರಾಯಿತು. ಬಳಿಕ ವಿಕೆಟ್​ ಕೀಪಿಂಗ್​ ಬ್ಯಾಟರ್​ ಯಶ್ತಿಕಾ ಭಾಟಿಯಾ (57) ಅರ್ಧಶತಕ ಬಾರಿಸಿ ಆಸರೆಯಾದರು. ಇವರಿಗೆ 19 ರನ್​ ಗಳಿಸಿದ ನ್ಯಾಟ್ ಸ್ಕಿವರ್ - ಬ್ರಂಟ್ ಉತ್ತಮ ಸಾಥ್​ ನೀಡಿದರು. ಬಳಿಕ ಕ್ರೀಸ್​ಗೆ ಬಂದ ನಾಯಕಿ ಹರ್ಮನ್​ ಭರ್ಜರಿ ಅರ್ಧಶತಕ (55, 34 ಎಸೆತ) ದಾಖಲಿಸಿ ತಂಡವನ್ನು ಗೆಲುವಿನ ಸಮೀಪ ಕೊಂಡೊಯ್ದರು.

ಈ ನಡುವೆ ಅಮೆಲಿಯಾ ಕೆರ್ 24 ರನ್​ ಗಳಿಸಿ ನಾಯಕಿಗೆ ತಕ್ಕ ಸಾಥ್​ ನೀಡಿದ್ದರು. ಆದರೆ, ಕೆರ್​ ವಿಕೆಟ್​ ಪತನದ ಬಳಿಕ ಬಂದ ಪೂಜಾ ವಸ್ತ್ರೇಕರ್​​ ಕೇವಲ 1 ರನ್​ಗೆ ಔಟಾದರು. ಆಗ ಕ್ಯಾಪ್ಸಿ ಎಸೆದ ಅಂತಿಮ ಓವರ್​​ನಲ್ಲಿ ಗೆಲುವಿಗೆ 12 ರನ್​ ಅಗತ್ಯವಿತ್ತು. ತದನಂತರ 3 ಬಾಲ್​ಗೆ 9 ರನ್ ಬೇಕಿದ್ದಾಗ ಬೌಂಡರಿ ಬಾರಿಸಿದ ಹರ್ಮನ್​​ ಕೌರ್ ಗೆಲುವಿನ ಅಂತರವನ್ನು 2 ಎಸೆತಗಳಲ್ಲಿ 5 ರನ್​ಗೆ ತಂದರು. ಆದರೆ, 5ನೇ ಎಸೆತದಲ್ಲಿ ಕ್ಯಾಚ್​ ನೀಡಿ ಅವರು ಹೊರ ನಡೆದರು.

ಇದರಿಂದ ಪಂದ್ಯವು ಮತ್ತಷ್ಟು ರೋಚಕ ಅಂತ್ಯಕ್ಕೆ ತಲುಪಿತು. ಕೊನೆಯ ಎಸೆತದಲ್ಲಿ 5 ರನ್​ ಅಗತ್ಯವಿದ್ದಾಗ ಕ್ರೀಸ್​ಗೆ ಬಂದ ಎಸ್​ ಸಂಜನಾ ಕ್ರೀಸ್​ನಿಂದ ಮುಂದೆ ಬಂದು ಲಾಂಗ್​​​ ಆನ್​​ನತ್ತ ಭರ್ಜರಿ ಸಿಕ್ಸರ್​ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 4 ವಿಕೆಟ್ ಜಯ ಸಾಧಿಸಿದ ಮುಂಬೈ ಶುಭಾರಭ ಮಾಡಿದೆ. ಇಂದಿನ (ಶನಿವಾರ) ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಹಾಗೂ ಯುಪಿ ವಾರಿಯರ್ಸ್​ ತಂಡಗಳು ಮುಖಾಮುಖಿಯಾಗಲಿವೆ.

ಇದನ್ನೂ ಓದಿ: ಇಂಗ್ಲೆಂಡ್​ ವಿರುದ್ಧ 100 ಟೆಸ್ಟ್​ ವಿಕೆಟ್: ದಾಖಲೆ ಬರೆದ ಆರ್​ ಅಶ್ವಿನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.