ETV Bharat / sports

ಚಾಂಪಿಯನ್ಸ್​ ಟ್ರೋಫಿಗೆ ಅರ್ಹತೆ ಪಡೆಯಲು ವಿಫಲವಾದ ವಿಶ್ವಕಪ್​ ವಿಜೇತ ತಂಡಗಳು: ಅಭಿಮಾನಿಗಳಿಗೆ ಭಾರೀ ನಿರಾಸೆ! - champions trophy qualified teams - CHAMPIONS TROPHY QUALIFIED TEAMS

ವಿಶ್ವಕಪ್​ ವಿಜೇತ ಎರಡು ತಂಡಗಳು 2025ರ ಚಾಂಪಿಯನ್ಸ್​ ಟ್ರೋಫಿಗೆ ಅರ್ಹತೆ ಪಡೆಯಲು ವಿಫಲವಾಗಿವೆ. ಆ ತಂಡಗಳು ಯಾವವು ಎಂಬುದರ ಮಾಹಿತಿ ಈ ಸದ್ದಿಯಲ್ಲಿದೆ.

ವಿರಾಟ್​ ಕೊಹ್ಲಿ ಮತ್ತು ಸರ್ಫರಾಜ್​ ಅಹ್ಮದ್​
ವಿರಾಟ್​ ಕೊಹ್ಲಿ ಮತ್ತು ಸರ್ಫರಾಜ್​ ಅಹ್ಮದ್​ (AFP Photos)
author img

By ETV Bharat Sports Team

Published : Sep 15, 2024, 8:47 PM IST

ನವದೆಹಲಿ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಪಾಕ್​ ಕ್ರಿಕೆಟ್​ ಮಂಡಳಿಯು ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗಿಯಾಗಲಿವೆ. ಆದ್ರೆ 9ನೇ ಆವೃತ್ತಿಯ ಈ ಟೂರ್ನಿಗೆ ಎರಡು ದೊಡ್ಡ ತಂಡಗಳು ಅರ್ಹತೆ ಪಡೆಯದೇ ಇರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ದಿಗ್ಗಜ ಆಟಗಾರರನ್ನು ಹೊಂದಿದ್ದ ಈ ತಂಡಗಳು ಹಿಂದೆ ವಿಶ್ವ ಚಾಂಪಿಯನ್​ ಆಗಿಯೂ ಟ್ರೋಫಿ ಎತ್ತಿ ಹಿಡಿದಿದ್ದವು. ಅಂತಹ ತಂಡಗಳು ಅರ್ಹತೆ ಪಡೆಯದೆ ಹೊರಗುಳಿದಿವೆ. ಹಾಗಾದ್ರೆ ಆ ಎರಡು ತಂಡಗಳು ಯಾವುವು ಅನ್ನೋದನ್ನು ತಿಳಿಯೋಣ..

ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯದ ತಂಡಗಳು

ವೆಸ್ಟ್ ಇಂಡೀಸ್: ಈ ಪಟ್ಟಿಯಲ್ಲಿರುವ ದೊಡ್ಡ ತಂಡ ವೆಸ್ಟ್ ಇಂಡೀಸ್ ಆಗಿದೆ. 1975 ಮತ್ತು 1979 ರ ಏಕದಿನ ವಿಶ್ವಕಪ್ ಚಾಂಪಿಯನ್ ಮತ್ತು ಎರಡು ಬಾರಿ ಟಿ20 ವಿಶ್ವ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ತಂಡ 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿಲ್ಲ. ಈ ಹಿಂದೆ ಕೆರಿಬಿಯನ್ ತಂಡ 2004ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ವಶಪಡಿಸಿಕೊಂಡಿತ್ತು. ಆದರೆ ಕಳಪೆ ಪ್ರದರ್ಶನದಿಂದಾಗಿ ಈ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಇದು ಕೆರೆಬಿಯನ್​ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ವೆಸ್ಟ್​ ಇಂಡೀಸ್​ ತಂಡ
ವೆಸ್ಟ್​ ಇಂಡೀಸ್​ ತಂಡ (IANS)

ಶ್ರೀಲಂಕಾ: 2002ರ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತದೊಂದಿಗೆ ಜಂಟಿ ವಿಜೇತವಾಗಿದ್ದ ಶ್ರೀಲಂಕಾ ತಂಡ ಕೂಡ ಈ ಟೂರ್ನಿಗೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ. ಇದು 1996ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಇಂತಹ ಬಲಿಷ್ಠ ತಂಡವನ್ನು ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ನೋಡಲಾಗುವುದಿಲ್ಲ. ಈ ಎರಡೂ ತಂಡಗಳನ್ನು ಹೊರತುಪಡಿಸಿ ಸ್ಕಾಟ್ಲೆಂಡ್​, ನೆದರ್ಲ್ಯಾಂಡ್ಸ್​ ಮತ್ತು ಜಿಂಬಾಬ್ವೆ ತಂಡಗಳು ಕೂಡ ಅರ್ಹತೆ ಪಡೆಯುವಲ್ಲಿ ವಿಫಲವಾಗಿವೆ.

ಚಾಂಪಿಯನ್ಸ್ ಟ್ರೋಫಿ ಅರ್ಹತೆ ಮಾನದಂಡ: ಚಾಂಪಿಯನ್ಸ್ ಟ್ರೋಫಿಗೆ ಒಟ್ಟು 8 ತಂಡಗಳು ಅರ್ಹತೆ ಪಡೆಯುತ್ತವೆ. ಈ ಆವೃತ್ತಿಯ ಅರ್ಹತೆಯನ್ನು 2023ರ ಏಕದಿನ ವಿಶ್ವಕಪ್​ನೊಂದಿಗೆ ಹೊಂದಿಕೆ ಮಾಡಲಾಗಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ 8 ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದುಕೊಳ್ಳುತ್ತವೆ.

ಶ್ರೀಲಂಕಾ ತಂಡ
ಶ್ರೀಲಂಕಾ ತಂಡ (IANS)

ಕಳೆದ ವರ್ಷ ಭಾರತ ಆತಿಥ್ಯ ವಹಿಸಿದ್ದ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಅಂಕಪಟ್ಟಿಯಲ್ಲಿ ಟಾಪ್-8ರಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗದೆ 9ನೇ ಸ್ಥಾನಕ್ಕೆ ತಲುಪಿತು. ಇದರ ಹೊರತಾಗಿ ವೆಸ್ಟ್ ಇಂಡೀಸ್, ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ಜಿಂಬಾಬ್ವೆ ತಂಡಗಳು ಈ ಬಾರಿಯ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಈ ಎಲ್ಲಾ ತಂಡಗಳು 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ವಿಫಲವಾಗಿವೆ. ಆದರೆ ವಿಶ್ವಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಅಫ್ಘಾನಿಸ್ತಾನವು ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದುಕೊಂಡಿದೆ.

ಇದನ್ನೂ ಓದಿ: ಕೈತಪ್ಪಿದ ಡೈಮಂಡ್​ ಲೀಗ್​ ಟ್ರೋಫಿ: ಎಕ್ಸ್​-ರೇ ಸಮೇತ ಅಸಲಿ ಕಾರಣ ತಿಳಿಸಿದ ನೀರಜ್​ ಚೋಪ್ರಾ - Neeraj Chopra

ETV Bharat Logo

Copyright © 2024 Ushodaya Enterprises Pvt. Ltd., All Rights Reserved.