ಹೈದರಾಬಾದ್: ಬಹು ನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ನ (ಡಬ್ಲ್ಯುಪಿಎಲ್) ಎರಡನೇ ಆವೃತ್ತಿಯು ಫೆಬ್ರವರಿ 23 ರಿಂದ ಪ್ರಾರಂಭವಾಗಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ದಿನಾಂಕ ಪ್ರಕಟಿಸಿದ್ದು, ಫೆಬ್ರವರಿ 23 ರಿಂದ ಮಾರ್ಚ್ 17 ರವರೆಗೆ ಎರಡನೇ ಆವೃತ್ತಿ ನಡೆಯಲಿದೆ. ಐದು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಚುಟುಕು ಮಾದರಿಯ ಕ್ರಿಕೆಟ್ ಪಂದ್ಯಾವಳಿಯು 20 ಲೀಗ್ ಪಂದ್ಯಗಳು ಮತ್ತು ಎರಡು ನಾಕೌಟ್ ಪಂದ್ಯಗಳೂ ನಡೆಯಲಿವೆ.
-
🚨 NEWS 🚨
— Women's Premier League (WPL) (@wplt20) January 24, 2024 " class="align-text-top noRightClick twitterSection" data="
Bengaluru and Delhi to host TATA WPL 2024.
Details 🔽 #TATAWPLhttps://t.co/4DC8obZi5g
">🚨 NEWS 🚨
— Women's Premier League (WPL) (@wplt20) January 24, 2024
Bengaluru and Delhi to host TATA WPL 2024.
Details 🔽 #TATAWPLhttps://t.co/4DC8obZi5g🚨 NEWS 🚨
— Women's Premier League (WPL) (@wplt20) January 24, 2024
Bengaluru and Delhi to host TATA WPL 2024.
Details 🔽 #TATAWPLhttps://t.co/4DC8obZi5g
ಲೀಗ್ನ ಪಂದ್ಯಗಳು ಬೆಂಗಳೂರು ಮತ್ತು ದೆಹಲಿಯಲ್ಲಿ ನಡೆಯಲಿವೆ. ಮಾರ್ಚ್ 15 ರಂದು ಎಲಿಮಿನೇಟರ್ ಮತ್ತು ಫೈನಲ್ ಪಂದ್ಯ ಮಾರ್ಚ್ 17 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಎಲ್ಲ ಪಂದ್ಯಗಳು ಸಂಜೆ 7:30 ಪ್ರಾರಂಭವಾಗುತ್ತವೆ. ಮೊದಲ 11 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದ್ದು, ಉಳಿದ 9 ಲೀಗ್ ಪಂದ್ಯಗಳು ಮತ್ತು ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳು ದೆಹಲಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಚೊಚ್ಚಲ ಆವೃತ್ತಿಯಲ್ಲಿ ನೀರಸ ಪ್ರದರ್ಶನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತವರು ನೆಲವಾದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆಬ್ರವರಿ 24 ರಂದು ಯುಪಿ ವಾರಿಯರ್ಸ್ ವಿರುದ್ಧ ಮೊದಲ ಪಂದ್ಯವಾಡುವ ಮೂಲಕ ಆವೃತ್ತಿ ಆರಂಭಿಸಲಿದೆ. ಬಳಿಕ ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯ ಆಡಲಿದೆ.
ದೆಹಲಿ ಚರಣವು ಮಾರ್ಚ್ 5 ರಿಂದ ಪ್ರಾರಂಭವಾಗುತ್ತದೆ. ತವರಿನ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯವನ್ನು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಬೆಂಗಳೂರಿನಂತೆ ದೆಹಲಿ ಕೂಡ ಮಾರ್ಚ್ 13 ರವರೆಗೆ ಲೀಗ್ ಪಂದ್ಯಗಳನ್ನು ಪ್ರತಿದಿನ ಆತಿಥ್ಯ ವಹಿಸಿಕೊಳ್ಳಲಿದೆ. ಲೀಗ್ ಹಂತದ ಕೊನೆಯಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಪ್ರವೇಶಿಸಿದರೆ, ಎರಡನೇ, ಮೂರನೇ ಸ್ಥಾನ ಪಡೆದ ತಂಡ ಎಲಿಮಿನೇಟರ್ ಆಡಲಿದೆ. ಅಲ್ಲಿ ಗೆದ್ದವರು ಫೈನಲ್ ತಲುಪಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯ ಯಾವಾಗ, ಎಲ್ಲಿ?:
ದಿನಾಂಕ | ಸ್ಥಳ | ಎದುರಾಳಿ |
ಫೆಬ್ರವರಿ 24 | ಬೆಂಗಳೂರು | ಯುಪಿ ವಾರಿಯರ್ಸ್ |
ಫೆಬ್ರವರಿ 27 | ಬೆಂಗಳೂರು | ಗುಜರಾತ್ ಜೈಂಟ್ಸ್ |
ಫೆಬ್ರವರಿ 29 | ಬೆಂಗಳೂರು | ಡೆಲ್ಲಿ ಕ್ಯಾಪಿಟಲ್ಸ್ |
ಮಾರ್ಚ್ 2 | ಬೆಂಗಳೂರು | ಮುಂಬೈ ಇಂಡಿಯನ್ಸ್ |
ಮಾರ್ಚ್ 4 | ಬೆಂಗಳೂರು | ಯುಪಿ ವಾರಿಯರ್ಸ್ |
ಮಾರ್ಚ್ 6 | ದೆಹಲಿ | ಗುಜರಾತ್ ಜೈಂಟ್ಸ್ |
ಮಾರ್ಚ್ 10 | ದೆಹಲಿ | ಡೆಲ್ಲಿ ಕ್ಯಾಪಿಟಲ್ಸ್ |
ಮಾರ್ಚ್ 12 | ದೆಹಲಿ | ಮುಂಬೈ ಇಂಡಿಯನ್ಸ್ |
ಇದನ್ನೂ ಓದಿ: ಇಂಗ್ಲೆಂಡ್ ಕ್ರಿಕೆಟರ್ ಬಶೀರ್ಗೆ ಕೊನೆಗೂ ಸಿಕ್ಕ ವೀಸಾ: ಆದರೂ ಮೊದಲ ಟೆಸ್ಟ್ನಿಂದ ಔಟ್