ETV Bharat / sports

ಸತತ 2ನೇ ವಿಂಬಲ್ಡನ್​ ಗೆದ್ದ ಕಾರ್ಲೊಸ್​ ಅಲ್ಕರಜ್​: ನೊವಾಕ್​ಗೆ ಈಡೇರದ 25ನೇ ಗ್ರ್ಯಾನ್​ಸ್ಲಾಮ್​ ಕನಸು - WIMBLEDON MENS SINGLE FINAL - WIMBLEDON MENS SINGLE FINAL

ವಿಂಬಲ್ಡನ್​ ಫೈನಲ್​​ನಲ್ಲಿ ಕಾರ್ಲೊಸ್​ ಅಲ್ಕರಜ್​ ಮತ್ತೊಮ್ಮೆ ಅಜೇಯವಾಗಿ ಪ್ರಶಸ್ತಿ ಜಯಿಸಿದರು. 25ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ನೊವಾಕ್​ ಜೊಕೊವಿಕ್​ಗೆ ಮತ್ತೊಮ್ಮೆ ನಿರಾಸೆ ಉಂಟಾಯಿತು.

ಸತತ 2ನೇ ವಿಂಬಲ್ಡನ್​ ಗೆದ್ದ ಕಾರ್ಲೊಸ್​ ಅಲ್ಕರಜ್​
ಸತತ 2ನೇ ವಿಂಬಲ್ಡನ್​ ಗೆದ್ದ ಕಾರ್ಲೊಸ್​ ಅಲ್ಕರಜ್​ (AP)
author img

By ETV Bharat Karnataka Team

Published : Jul 14, 2024, 10:38 PM IST

Updated : Jul 14, 2024, 10:59 PM IST

ಲಂಡನ್​ (ಇಂಗ್ಲೆಂಡ್​): ವಿಂಬಲ್ಡನ್​​ ಪುರುಷರ ಫೈನಲ್​​ನಲ್ಲಿ ಟೆನಿಸ್​ ಲೋಕದ ಹೊಸ ಸೂಪರ್​ಸ್ಟಾರ್​ ಕಾರ್ಲೊಸ್​ ಅಲ್ಕರಾಜ್​ ಸತತ ಎರಡನೇ ಬಾರಿಗೆ ಚಾಂಪಿಯನ್​ ಆಗಿ ಹೊರಹೊಮ್ಮಿದರು. 24 ಗ್ರ್ಯಾನ್​​ಸ್ಲಾಮ್​ ಒಡೆಯ ನೊವಾಕ್​ ಜೊಕೊವಿಕ್​​ರನ್ನು 6-2, 6-2, 7-6 ನೇರ ಸೆಟ್​​ಗಳಿಂದ ಸೋಲಿಸುವ ಮೂಲಕ ಸುಲಭವಾಗಿ ಪ್ರಶಸ್ತಿ ಜಯಿಸಿದರು.

ಇಬ್ಬರು ಮದಗಜಗಳ ಮಧ್ಯೆ ರೋಚಕ ಪಂದ್ಯ ಇರಲಿದೆ ಎಂದು ಭಾವಿಸಿದ್ದ ಪಂದ್ಯದಲ್ಲಿ ಅಲ್ಕರಜ್​ ಏಕಮೇವ ಹಿಡಿತ ಸಾಧಿಸಿದರು. ಮೊದಲೆರಡು ಸೆಟ್​ಗಳಲ್ಲಿ ನೊವಾಕ್​ ಎಲ್ಲಿಯೂ ಕಠಿಣ ಸ್ಪರ್ಧೆ ನೀಡಲಿಲ್ಲ. ಹಿರಿಯ ಆಟಗಾರನ ಸರ್ವ್​ಗಳನ್ನು ಮುರಿಯುತ್ತಾ ಸಾಗಿದ 21 ರ ಹರೆಯದ ಅಲ್ಕರಜ್​ ಎರಡೂ ಸೆಟ್​ಗಳನ್ನು 6-2, 6-2 ರಲ್ಲಿ ಜಯಿಸಿದರು. ಅದಾಗಲೇ ಗೆಲುವಿನ ಸನಿಹದಲ್ಲಿದ್ದ ಆಟಗಾರನಿಗೆ ಮೂರನೇ ಸೆಟ್​ನಲ್ಲಿ ನೊವಾಕ್​ ತುಸು ಸ್ಪರ್ಧೆ ನೀಡಿದರು. ಇದರಿಂದ ಟ್ರೈಬ್ರೇಕರ್​​ನಲ್ಲಿ ಸತತ ಏಸ್​​ಗಳನ್ನು ಸಿಡಿಸುವ ಮೂಲಕ ಅಲ್ಕರಜ್​ ವಿಂಬಲ್ಡನ್​​ ಪ್ರಶಸ್ತಿಗೆ ಮುತ್ತಿಕ್ಕಿದರು.

ಕಿಕ್ಕಿರಿದು ತುಂಬಿದ್ದ ಫೈನಲ್​ ಪಂದ್ಯವು 2 ಗಂಟೆ 27 ನಿಮಿಷಗಳ ಕಾಲ ನಡೆಯಿತು. ವಿಶ್ವದ ನಂ.1 ಆಟಗಾರ ತಮ್ಮ 21 ನೇ ವಯಸ್ಸಿನಲ್ಲಿ ನಾಲ್ಕು ಗ್ರ್ಯಾನ್​ಸ್ಲಾಮ್​ ಗೆದ್ದ ನಾಲ್ಕನೇ ಆಟಗಾರ ಎನಿಸಿಕೊಂಡರು. ಇದಕ್ಕೂ ಮೊದಲು ಮ್ಯಾಟ್ಸ್ ವಿಲಾಂಡರ್, ಜಾರ್ನ್ ಬೋರ್ಗ್ ಮತ್ತು ಬೋರಿಸ್ ಬೆಕರ್ ಅವರು ಚಿಕ್ಕ ವಯಸ್ಸಿನಲ್ಲಿ 4 ಪ್ರಶಸ್ತಿ ಗೆದ್ದಿದ್ದರು.

ಸತತ ಎರಡನೇ ವಿಂಬಲ್ಡನ್​​: 2023ರ ವಿಂಬಲ್ಡನ್​ ಫೈನಲ್​​ನಲ್ಲಿ ಅಲ್ಕರಜ್​ ಮತ್ತು ನೊವಾಕ್​ ಎದುರಾಗಿದ್ದರು. ಅಂದು ಹಿರಿಯ ಆಟಗಾರನಿಗೆ ಕಾರ್ಲೊಸ್​ ಸೋಲುಣಿಸಿದ್ದರು. ಈ ವರ್ಷವೂ ಅದೇ ಫಲಿತಾಂಶ ಬಂದಿತು. ಸೆಂಟರ್​ ಕೋರ್ಟ್​ನಲ್ಲಿ ಏಕಾಂಗಿಯಾಗಿ ಮೆರೆದ ಸ್ಪೇನ್​ ಆಟಗಾರ, 4ನೇ ಪ್ರಶಸ್ತಿಗೆ ಮುತ್ತಿಟ್ಟರು. ಸತತ ಎರಡು ಗ್ರ್ಯಾನ್​ಸ್ಲಾಮ್​ ಗೆದ್ದ ಮೊದಲ ಸ್ಪ್ಯಾನಿಷ್ ಆಟಗಾರ ಎಂದೆನಿಸಿಕೊಂಡರು. ಜೊಕೊವಿಕ್ ಗೆದ್ದಿದ್ದರೆ, ರೋಜರ್ ಫೆಡರರ್ 8 ಪ್ರಶಸ್ತಿಗಳ ದಾಖಲೆಯನ್ನು ಸರಿಗಟ್ಟುತ್ತಿದ್ದರು.

ಪ್ರಶಸ್ತಿಯ ಮೊತ್ತ: ಸತತ ಎರಡನೇ ವಿಂಬಲ್ಡನ್​ ಗೆದ್ದ ಎರಡನೇ ಸ್ಪೇನ್​ ಆಟಗಾರ ಎಂಬ ಹಿರಿಮೆಗೂ ಪಾತ್ರನಾದ ಅಲ್ಕರಜ್​ ಈ ಗೆಲುವಿನೊಂದಿಗೆ 27,00000 ಪೌಂಡ್ (28.6 ಕೋಟಿ ರೂಪಾಯಿ) ನಗದು ಬಹುಮಾನ ಪಡೆದರು. ರನ್ನರ್​ ಅಪ್​​ ನೊವಾಕ್​ ಜೊಕೊವಿಕ್ 14,00000 ಪಭಂಡ್​ ಅಂದರೆ ಸುಮಾರು 14 ಕೋಟಿ ರೂಪಾಯಿ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ: ವಿಂಬಲ್ಡನ್​ ಟೆನಿಸ್​ ಲೋಕಕ್ಕೆ ಹೊಸ ರಾಣಿ: ಪೌಲಿನಿ ಸೋಲಿಸಿ ಪ್ರಶಸ್ತಿಗೆ ಮುತ್ತಿಟ್ಟ ಬಾರ್ಬೊರಾ ಕ್ರೆಚಿಕೊವಾ - Wimbledon final

Last Updated : Jul 14, 2024, 10:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.