ETV Bharat / sports

ಇಂದಿನಿಂದ ವಿಂಬಲ್ಡನ್​​: ನೊವಾಕ್​ ಇನ್​, ಮರ್ರೆ ಔಟ್​, ಹಾಲಿ ಚಾಂಪಿಯನ್​ ಅಲ್ಕರಜ್​​ಗೆ ಸವಾಲು - Wimbledon

author img

By ETV Bharat Karnataka Team

Published : Jul 1, 2024, 7:28 AM IST

Updated : Jul 1, 2024, 8:18 AM IST

ಇಂದಿನಿಂದ ವಿಂಬಲ್ಡನ್​ ಟೆನಿಸ್​ ಟೂರ್ನಿ ಆರಂಭವಾಗಲಿವೆ. ಫ್ರೆಂಚ್​ ಟೂರ್ನಿಯಲ್ಲಿ ಗಾಯಗೊಂಡಿದ್ದ ನೊವಾಕ್ ಜೊಕೊವಿಕ್​ ಕಣಕ್ಕಿಳಿಯಲಿದ್ದಾರೆ.

ವಿಂಬಲ್ಡನ್​ ಟೆನಿಸ್​
ವಿಂಬಲ್ಡನ್​ ಟೆನಿಸ್​ (ETV Bharat)

ವಿಂಬಲ್ಡನ್(ಇಂಗ್ಲೆಂಡ್): ಟಿ-20 ವಿಶ್ವಕಪ್​ ಕ್ರಿಕೆಟ್ ಮುಗಿದ ಬೆನ್ನಲ್ಲೇ, ಇಂದಿನಿಂದ (ಸೋಮವಾರ) ವಿಂಬಲ್ಡನ್​ ಟೆನಿಸ್​ ಆರಂಭವಾಗುತ್ತಿದೆ. ಗಾಯಗೊಂಡು ಚೇತರಿಸಿಕೊಂಡಿರುವ 24 ಗ್ರ್ಯಾನ್​​ಸ್ಲಾಮ್​ ಪ್ರಶಸ್ತಿ ವಿಜೇತ ನೊವಾಕ್​ ಜೊಕೊವಿಕ್​ ಗ್ರಾಸ್​ಕೋರ್ಟ್​ ಗ್ರ್ಯಾನ್​​ಸ್ಲಾಮ್​ ಪಂದ್ಯಾವಳಿಯಲ್ಲಿ ಭಾಗವಹಿಸಿದರೆ, ಎರಡು ಬಾರಿಯ ಚಾಂಪಿಯನ್​ ಇಂಗ್ಲೆಂಡ್​ನ ಆ್ಯಂಡಿ ಮರ್ರೆ ಟೂರ್ನಿಯಿಂದ ಹೊರಗುಳಿದಿದ್ದಾರೆ.

25 ನೇ ಗ್ರ್ಯಾನ್​ಸ್ಲಾಮ್​ ಮೇಲೆ ನೊವಾಕ್​ ಕಣ್ಣು
25 ನೇ ಗ್ರ್ಯಾನ್​ಸ್ಲಾಮ್​ ಮೇಲೆ ನೊವಾಕ್​ ಕಣ್ಣು (AP)

ಈಚೆಗೆ ಮುಗಿದ ಫ್ರೆಂಚ್​ ಓಪನ್​ ಚಾಂಪಿಯನ್​ ಆಗಿರುವ ಮತ್ತು ವಿಂಬಲ್ಡನ್​ ಹಾಲಿ ಚಾಂಪಿಯನ್​​ ಕಾರ್ಲೋಸ್ ಅಲ್ಕರಜ್ ಮತ್ತೊಂದು ಗ್ರ್ಯಾನ್​​​ಸ್ಲಾಮ್​ ಮೇಲೆ ಕಣ್ಣಿಟ್ಟಿದ್ದಾರೆ. ಎಟಿಪಿ ಟೆನಿಸ್​​ನಲ್ಲಿ ಅಗ್ರ ಶ್ರೇಯಾಂಕದಲ್ಲಿರುವ ಜನ್ನಿಕ್ ಸಿನ್ನರ್, ಜೊಕೊವಿಕ್​​ ಅವರು ಅಲ್ಕರಜ್​​ಗೆ ಸವಾಲಾಗುವ ನಿರೀಕ್ಷೆ ಇದೆ.

ಮಹಿಳಾ ವಿಭಾಗದಲ್ಲಿ ನಂ.1 ಶ್ರೇಯಾಂಕದ ಇಗಾ ಸ್ವಿಯಾಟೆಕ್, ನಂ.2 ಶ್ರೇಯಾಂಕದ ಕೊಕೊ ಗೌಫ್, 3ನೇ ಶ್ರೇಯಾಂಕದ ವಿಕ್ಟೋರಿಯಾ ಸಬಲೆಂಕಾ, 2022 ವಿಂಬಲ್ಡನ್​ ಚಾಂಪಿಯನ್ ಎಲೆನಾ ರೈಬಕೆನಾ ಅವರು ಕಣಕ್ಕಿಳಿಯಲಿದ್ದಾರೆ. ಹುಲ್ಲುಹಾಸಿನ ಕೋರ್ಟ್​ಗಳಲ್ಲಿ ಮಹಿಳೆಯರು ಮೂರು ಸೆಟ್​​ನ ಪಂದ್ಯಗಳನ್ನು ಆಡಿದರೆ, ಪುರುಷರು 5 ಸೆಟ್‌ಗಳ ಪಂದ್ಯಗಳನ್ನು ಆಡಲಿದ್ದಾರೆ. ಪಂದ್ಯಾವಳಿ 14 ದಿನಗಳ ಕಾಲ ನಡೆಯಿದೆ. ಮಹಿಳೆಯರಲ್ಲಿ ಇಗಾ ಸ್ವಿಯಾಟೆಕ್, ಪುರುಷರಲ್ಲಿ ಜನ್ನಿಕ್ ಸಿನ್ನರ್ ಟೂರ್ನಿಯ ಆರಂಭಕ್ಕೂ ಮುನ್ನ ಅಗ್ರ ಶ್ರೇಯಾಂಕ ಹೊಂದಿದ್ದಾರೆ.

ಹಾಲಿ ಚಾಂಪಿಯನ್​ ಅಲ್ಕರಜ್​
ಹಾಲಿ ಚಾಂಪಿಯನ್​ ಅಲ್ಕರಜ್​ (AP)

ಯಾವಾಗ ಫೈನಲ್?: ಜುಲೈ 1,2 ರಂದು ಮೊದಲ ಸುತ್ತಿನ ಪಂದ್ಯಗಳು, ಜುಲೈ 3, 4 ರಂದು ಎರಡನೇ ಸುತ್ತು, ಜುಲೈ 5, 6 ರಂದು ಮೂರನೇ ಸುತ್ತು, ಜುಲೈ 7, 8 ರಂದು ನಾಲ್ಕನೇ ಸುತ್ತು, ಜುಲೈ 9, 10 ರಂದು ಕ್ವಾರ್ಟರ್‌ಫೈನಲ್‌ ಪಂದ್ಯಗಳು, ಜುಲೈ 11 ರಂದು ಮಹಿಳೆಯರ ಸೆಮಿಫೈನಲ್‌, ಜುಲೈ 12 ರಂದು ಪುರುಷರ ಸೆಮಿಫೈನಲ್‌, ಜುಲೈ 13 ರಂದು ಮಹಿಳೆಯರ ಫೈನಲ್ ನಡೆದರೆ, ಜುಲೈ 14 ರಂದು ಪುರುಷರ ಫೈನಲ್ ನಡೆಯಲಿದೆ.

ಗಾಯಗೊಂಡಿರುವ ಇಂಗ್ಲೆಂಡ್​ನ ಆ್ಯಂಡಿ ಮರ್ರೆ ಟೂರ್ನಿಯಿಂದ ಔಟ್​
ಗಾಯಗೊಂಡಿರುವ ಇಂಗ್ಲೆಂಡ್​ನ ಆ್ಯಂಡಿ ಮರ್ರೆ ಟೂರ್ನಿಯಿಂದ ಔಟ್​ (AP)

ಬಹುಮಾನದ ಮೊತ್ತ ಹೆಚ್ಚಳ: 2024 ರ ವಿಂಬಲ್ಡನ್‌ ಪಂದ್ಯಾವಳಿಯ ಬಹುಮಾನದ ಮೊತ್ತವು 64 ಮಿಲಿಯನ್​ ಡಾಲರ್​ಗೆ ಹೆಚ್ಚಿಸಲಾಗಿದೆ. ಕಳೆದ ವರ್ಷಕ್ಕಿಂತ ಸುಮಾರು ಶೇಕಡಾ 12 ರಷ್ಟು ಹೆಚ್ಚು. ಇಬ್ಬರು ಸಿಂಗಲ್ಸ್ ಚಾಂಪಿಯನ್‌ಗಳು ತಲಾ 3.45 ಮಿಲಿಯನ್​ ಡಾಲರ್​ ಪಡೆಯಲಿದ್ದಾರೆ.

ಮರ್ರೆ ಔಟ್, ನೊವಾಕ್​ ಇನ್: ಆಟಗಾರರ ಪಂದ್ಯಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಕೊನೆಯ ಕ್ಷಣದಲ್ಲಿ ಆ್ಯಂಡಿ ಮರ್ರೆ ಕಣದಿಂದ ಹಿಂದೆ ಸರಿದಿದ್ದಾರೆ. ಅವರು ಮೊಣಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅಭ್ಯಾಸದ ನಡೆಸಿದರೂ ಅವರು ಪೂರ್ಣವಾಗಿ ಫಿಟ್​ ಆಗಿಲ್ಲ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ವಿಂಬಲ್ಡನ್​ ಗ್ರ್ಯಾನ್​ಸ್ಲಾಮ್​ ಟೂರ್ನಿಯಲ್ಲಿ ತಾವು ಭಾಗವಹಿಸುತ್ತಿಲ್ಲ. ಬಲಗಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಪೂರ್ಣ ಪ್ರಮಾಣದಲ್ಲಿ ಕಣಕ್ಕಿಳಿಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

25ನೇ ಪ್ರಶಸ್ತಿ ಮೇಲೆ ಕಣ್ಣು: 37 ವರ್ಷದ ಸರ್ಬಿಯಾದ ಆಟಗಾರ ನೊವಾಕ್​ ಜೊಕೊವಿಕ್​ 25ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಫ್ರೆಂಚ್​ ಓಪನ್​​ನ ಕ್ವಾರ್ಟರ್​ ಫೈನಲ್​ ವೇಳೆ ಗಾಯಗೊಂಡು ಅವರು ಟೂರ್ನಿಯಿಂದ ಹೊರಬಿದ್ದಿದ್ದರು. ಇದೀಗ ಪೂರ್ಣವಾಗಿ ಗುಣಮುಖರಾಗಿದ್ದಾರೆ. ಕಳೆದ ವರ್ಷ ಇಲ್ಲಿ ನಡೆದ ಫೈನಲ್​ನಲ್ಲಿ ಕಾರ್ಲೋಸ್‌ ಅಲ್ಕರಾಜ್‌ ವಿರುದ್ಧ ಸೋತು ರನ್ನರ್‌ ಅಪ್ ಸ್ಥಾನ ಪಡೆದಿದ್ದರು.

ನೇರಪ್ರಸಾರ: ಹಾಟ್​ಸ್ಟಾರ್​, ಇಎಸ್​​ಪಿಎನ್​, ಸ್ಪೋರ್ಟ್​ ಚಾನಲ್​ಗಳಲ್ಲಿ ಪಂದ್ಯವನ್ನು ನೇರಪ್ರಸಾರ ವೀಕ್ಷಿಸಬಹುದು.

ಇದನ್ನೂ ಓದಿ: ಟಿ-20 ಚಾಂಪಿಯನ್​ ಭಾರತ ತಂಡಕ್ಕೆ ₹ 125 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ - BCCI Announces Prize Money

Last Updated : Jul 1, 2024, 8:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.