ETV Bharat / sports

ಚಾಂಪಿಯನ್ಸ್​ ಟ್ರೋಫಿ: ಟೀಂ ಇಂಡಿಯಾ ಜೊತೆ ಭದ್ರತಾ ತಂಡವೂ ಪಾಕಿಸ್ತಾನಕ್ಕೆ ಪ್ರಯಾಣ? - Champions Trophy - CHAMPIONS TROPHY

ಟೆಸ್ಟ್​ ಚಾಂಪಿಯನ್ಸ್​​ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸಲಿದೆಯೇ?, ಒಂದು ವೇಳೆ ಪ್ರವಾಸ ಹೋದರೂ ಭದ್ರತಾ ತಂಡದೊಂದಿಗೆ ಹೋಗುತ್ತದೆಯೇ? ಎಂಬ ವಿಚಾರಗಳು ಚರ್ಚೆಗೀಡು ಮಾಡಿವೆ.

ಭಾರತ ಮತ್ತು ಪಾಕಿಸ್ತಾನ ಆಟಗಾರರು
ಭಾರತ ಮತ್ತು ಪಾಕಿಸ್ತಾನ ಆಟಗಾರರು (ANI)
author img

By ETV Bharat Sports Team

Published : Sep 3, 2024, 1:58 PM IST

ನವದೆಹಲಿ: ಟೆಸ್ಟ್​ ಚಾಂಪಿಯನ್ಸ್ ಟ್ರೋಫಿ 2025 ಸಮೀಪಿಸುತ್ತಿದ್ದಂತೆ ಒಂದೆಡೆ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿರುವ ಕಾರಣ ಭಾರತ ಅಲ್ಲಿಗೆ ಪ್ರಯಾಣಿಸುತ್ತದಾ ಎಂಬ ಪ್ರಶ್ನೆಗಳೆದ್ದಿವೆ.

ಪಾಕ್​ ವರದಿಗಳ ಪ್ರಕಾರ, ಭಾರತದ ಪ್ರವಾಸ ಖಚಿತವಾಗಿದೆ. ಆದರೆ ಇತರೇ ಮಾಧ್ಯಮ ವರದಿಗಳಂತೆ, ಭಾರತ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ಆಡಲು ಬಯಸಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಸರ್ಕಾರ ಅನುಮತಿ ನೀಡಿದರೆ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದರು. ಒಂದು ವೇಳೆ ಭಾರತ, ಪಾಕಿಸ್ತಾನಕ್ಕೆ ತೆರಳಿದರೂ ಭದ್ರತಾ ತುಕಡಿಯೊಂದಿಗೆ ಹೋಗುವುದೇ ಎಂಬುದು ಅಭಿಮಾನಿಗಳ ಕುತೂಹಲ.

ಸಾಮಾನ್ಯವಾಗಿ, ಯಾವುದೇ ಒಂದು ತಂಡ ಹೊರ ದೇಶಕ್ಕೆ ಪ್ರವಾಸ ಕೈಗೊಳ್ಳುವ ಮೊದಲು ಭದ್ರತಾ ಸಮಸ್ಯೆಗಳು ಉಂಟಾದಾಗ, ತಂಡದೊಂದಿಗೆ ಭದ್ರತಾ ತುಕಡಿ ಕೂಡ ಪಂದ್ಯ ನಡೆಯುವ ಸ್ಥಳಕ್ಕೆ ತೆರಳುತ್ತವೆ. ಕ್ರಿಕೆಟ್ ಮೈದಾನಗಳು ಮತ್ತು ಭದ್ರತಾ ಸೌಲಭ್ಯಗಳ ಮೇಲ್ವಿಚಾರಣೆ ಮಾಡಿ ಬಳಿಕ ನಿರ್ಣಯ ಕೈಗೊಳ್ಳುತ್ತವೆ. ಈ ವೇಳೆ ಪ್ರವಾಸಿ ಆಟಗಾರರಿಗೆ ಆತಿಥೇಯ ದೇಶದಿಂದ ಹೆಚ್ಚಿನ ಭದ್ರತೆ ಒದಗಿಸಲಾಗುತ್ತದೆ. ಆದಾಗ್ಯೂ, ಯಾವುದೇ ದೇಶ ತನ್ನ ಕ್ರಿಕೆಟ್ ತಂಡದೊಂದಿಗೆ ಸೇನೆ ಅಥವಾ ಯಾವುದೇ ಸಶಸ್ತ್ರ ಪಡೆಗಳನ್ನು ಕಳುಹಿಸುವುದಿಲ್ಲ. ಆದರೆ ಪ್ರವಾಸಕ್ಕೂ ಮೊದಲು ತಪಾಸಣೆಗಾಗಿ ಭದ್ರತಾ ತಂಡವನ್ನು ಕಳುಹಿಸಿ ಪರಿಶೀಲಿಸಬಹುದು.

ಪ್ರವಾಸಕ್ಕೂ ಮುನ್ನ ಭದ್ರತಾ ತಂಡ ಕಳುಹಿಸಿರುವ ದೇಶಗಳು:

ನ್ಯೂಜಿಲೆಂಡ್, ಪಾಕಿಸ್ತಾನ ಪ್ರವಾಸ 2024: ಟಿ20 ಸರಣಿಗಾಗಿ ಏಪ್ರಿಲ್‌ ತಿಂಗಳಲ್ಲಿ ಕಿವೀಸ್​​ ತಂಡ ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸಿತ್ತು. ಆದರೆ ಇದಕ್ಕೂ ಮುನ್ನ ನ್ಯೂಜಿಲೆಂಡ್ ಕ್ರಿಕೆಟ್‌ನ ಭದ್ರತಾ ನಿಯೋಗವು ಪಾಕಿಸ್ತಾನಕ್ಕೆ ತಲುಪಿ ಪಂದ್ಯ ನಡೆಯುವ ಲಾಹೋರ್, ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್​ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಇಂಗ್ಲೆಂಡ್ ಭಾರತ ಪ್ರವಾಸ: 2008ರಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವಿನ ಎರಡು ಟೆಸ್ಟ್​ ಸರಣಿಗಾಗಿ ಭಾರತ ಆತಿಥ್ಯ ವಹಿಸಿಕೊಂಡಿತ್ತು. ಈ ವೇಳೆ ಇಂಗ್ಲೆಂಡ್​ನ ಭದ್ರತಾ ತಜ್ಞ ರೆಗ್ ಡಿಕಾಸನ್, ಪಂದ್ಯ ನಡೆಯುವ ಮೈದಾನ ಮತ್ತು ಹೋಟೆಲ್​ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

2001ರ ಸರಣಿ ವೇಳೆ ಇಂಗ್ಲೆಂಡ್ ಭಾರತದ ಪ್ರವಾಸದ ಸಮಯದಲ್ಲಿ, ಬಿಸಿಸಿಐ ಭಾರತವು ಪ್ರವಾಸಿ ತಂಡಕ್ಕೆ ಯಾವುದೇ ವಿಶೇಷ ರಕ್ಷಣಾ ಸಾಧನಗಳನ್ನು ಒದಗಿಸುವುದಿಲ್ಲ ಎಂದು ಹೇಳಿತ್ತು. ಈ ವೇಳೆ ಇಂಗ್ಲೆಂಡ್ ತಂಡ ಭದ್ರತೆಗಾಗಿ ಮ್ಯಾಥ್ಯೂ ಕಿಲ್‌ಬ್ರೈಡ್ ಮತ್ತು ಡೌಗ್ಲಾಸ್ ಡಿಕ್ ಎಂಬ ಇಬ್ಬರು ಉನ್ನತ ಅಧಿಕಾರಿಗಳನ್ನು ಕ್ರಿಕೆಟ್ ತಂಡದೊಂದಿಗೆ ಕರೆತಂದಿದ್ದರು. ಬಳಿಕ ಭಾರತ ಸರ್ಕಾರ ಇಂಗ್ಲೆಂಡ್ ತಂಡಕ್ಕೆ ರಕ್ಷಣೆ ನೀಡಿತ್ತು.

ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್​: ಜಾವೆಲಿನ್​ ಥ್ರೋನಲ್ಲಿ ದಾಖಲೆಯ ಚಿನ್ನ ಗೆದ್ದ ಸುಮಿತ್​ - Sumit Antil Won Gold

ETV Bharat Logo

Copyright © 2024 Ushodaya Enterprises Pvt. Ltd., All Rights Reserved.