ETV Bharat / sports

2003ರ ವಿಶ್ವಕಪ್​ ಬಳಿಕ ಸ್ಕಾಟ್ಲೆಂಡ್​ ತಂಡದ ಪರ 12 ಪಂದ್ಯಗಳನ್ನಾಡಿದ್ದ ರಾಹುಲ್​ ದ್ರಾವಿಡ್​: ಕಾರಣ ಏನು? - RAHUL DRAVID CRICKET RECORD

ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಕೋಚ್​ ರಾಹುಲ್​ ದ್ರಾವಿಡ್​ 2003ರಲ್ಲಿ ಸ್ಕಾಟ್​ಲೆಂಡ್​ ಪರ 12 ಪಂದ್ಯಗಳನ್ನು ಆಡಿದ್ದರು.

RAHUL DRAVID  RAHUL DRAVID PLAYED FOR SCOTLAND  RAHUL DRAVID PLAYED SCOTLAND 2003  ರಾಹುಲ್​ ದ್ರಾವಿಡ್
Rahul Dravid (Getty Images)
author img

By ETV Bharat Sports Team

Published : Dec 7, 2024, 2:56 PM IST

Rahul Dravid Played For Scotland: ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ 'ದಿ ವಾಲ್​' ಖ್ಯಾತಿಯ ರಾಹುಲ್​ ದ್ರಾವಿಡ್​ ಕೂಡ ಒಬ್ಬರು. 1996 ರಿಂದ 2012ರ ಅವಧಿಯಲ್ಲಿ ಕ್ರಿಕೆಟ್​ನ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ದ್ರಾವಿಡ್​ 500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 24,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಲ್ಲದೆ, ಅವರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ 2024ರ ಟಿ20 ವಿಶ್ವಕಪ್ ಅನ್ನು ಸಹ ಗೆದ್ದುಕೊಂಡಿತ್ತು. ಆದರೆ ನಿಮಗೆ ಗೊತ್ತಾ? ರಾಹುಲ್​ ದ್ರಾವಿಡ್​ ಈ ಹಿಂದೆ 2003ರ ವಿಶ್ವಕಪ್​ ಬಳಿಕ ಸ್ಕಾಟ್ಲೆಂಡ್​ ತಂಡದ ಪರ 12 ಪಂದ್ಯಗಳನ್ನು ಆಡಿದ್ದರು. ಹೌದು, ಇದು ನಂಬಲಸಾಧ್ಯವಾದರೂ ನಿಜ.

ವಾಸ್ತವವಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟಗಾರರು ಎರಡು ದೇಶಗಳನ್ನು ಪ್ರತಿನಿಧಿಸಿರುವ ಅನೇಕ ಸಂದರ್ಭಗಳು ಕ್ರಿಕೆಟ್‌ನಲ್ಲಿ ನಡೆದಿವೆ. ಸಾಮಾನ್ಯವಾಗಿ ಆಟಗಾರರಿಗೆ ತಮ್ಮ ದೇಶದ ಪರ ಕ್ರಿಕೆಟ್​ ಆಡಲು ಹೆಚ್ಚು ಅವಕಾಶಗಳು ಸಿಗದೇ ಇದ್ದಾಗ ಮತ್ತೊಂದು ರಾಷ್ಟ್ರೀಯ ತಂಡಕ್ಕೆ ಸೇರಿಕೊಳ್ಳುತ್ತಾರೆ.

ಭಾರತದಲ್ಲಿ ಈ ರೀತಿ ಸಂಭವಿಸುವುದು ಬಹಳ ಅಪರೂಪ. ಅದರಲ್ಲೂ ಹೆಸರಾಂತ ಕ್ರಿಕೆಟಿಗರು ಮತ್ತೊಂದು ತಂಡವನ್ನು ಪ್ರತಿನಿಧಿಸುವುದು ವಿರಳವೇ ಸರಿ. ಆದರೆ 2003ರ ವಿಶ್ವಕಪ್​ ಬಳಿಕ ದಿಗ್ಗಜ ಬ್ಯಾಟರ್​ ರಾಹುಲ್​ ಡ್ರಾವಿಡ್​ ಸ್ಕಾಟ್ಲೆಂಡ್​ ತಂಡದ ಪರ ಆಡಿದ್ದರು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ.

2003ರ ಏಕದಿನ ವಿಶ್ವಕಪ್‌ ಗೆಲ್ಲುವ ತಂಡವಾಗಿ ಕಣಕ್ಕಿಳಿದಿದ್ದ ಭಾರತ ಉತ್ತಮ ಪ್ರದರ್ಶನ ತೋರಿ ಫೈನಲ್​ಗೆ ತಲುಪಿತ್ತು. ಆದರೆ ಅಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. ಆ ಪಂದ್ಯದ ನಂತರ ರಾಹುಲ್ ದ್ರಾವಿಡ್ ಸ್ಕಾಟ್ಲೆಂಡ್ ರಾಷ್ಟ್ರೀಯ ತಂಡಕ್ಕಾಗಿ 12 ಪಂದ್ಯಗಳನ್ನು ಆಡಿದರು. ವಿಶ್ವಕಪ್ ಪಂದ್ಯಾವಳಿಯ ಬಳಿಕ ಇವರು ಸ್ವಲ್ಪ ಸಮಯದ ವರೆಗೆ ವಿರಾಮ ತೆಗೆದುಕೊಂಡಿದ್ದರು. ಈ ವಿರಾಮದ ವೇಳೆ ದ್ರಾವಿಡ್ ಸ್ಕಾಟ್ಲೆಂಡ್ ಕ್ರಿಕೆಟ್ ತಂಡದ ಪರ 12 ಪಂದ್ಯಗಳನ್ನು ಆಡಿದ್ದರು.

RAHUL DRAVID  RAHUL DRAVID PLAYED FOR SCOTLAND  RAHUL DRAVID PLAYED SCOTLAND 2003  ರಾಹುಲ್​ ದ್ರಾವಿಡ್
Rahul Dravid (Getty Images)

ವಾಸ್ತವವಾಗಿ, ಆ ಸಮಯದಲ್ಲಿ ಸ್ಕಾಟ್ಲೆಂಡ್‌ನಲ್ಲಿ ಕ್ರಿಕೆಟ್ ಅನ್ನು ಉತ್ತೇಜಿಸಲು ಮತ್ತು ಕ್ರೀಡೆಯನ್ನು ಅಭಿವೃದ್ಧಿಪಡಿಸಲು ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿಯ ಸಿಇಒ ಗ್ವೈನ್ ಜೋನ್ಸ್ ನಿರ್ಧರಿಸಿದ್ದರು. ಇದಕ್ಕಾಗಿ ಭಾರತದ ಅಂದಿನ ಕೋಚ್ ಆಗಿದ್ದ ಜಾನ್ ರೈಟ್ ಅವರನ್ನು ಸಂಪರ್ಕಿಸಿ ಸ್ಕಾಟ್ಲೆಂಡ್​ನಲ್ಲಿ ಕ್ರಿಕೆಟ್​ ಉತ್ತೇಜಿಸಲು ಭಾರತದ ಆಟಗಾರರು ತಮ್ಮ ತಂಡದಲ್ಲಿ ಕೆಲ ಪಂದ್ಯಗಳನ್ನು ಆಡುವಂತೆ ಕೇಳಿಕೊಂಡಿದ್ದರು. ಈ ವೇಳೆ ರಾಹುಲ್​ ದ್ರಾವಿಡ್​ ಇದಕ್ಕೆ ಒಪ್ಪಿಗೆ ಸೂಚಿಸಿ 12 ಪಂದ್ಯಗಳನ್ನು ಆಡಿದ್ದರು.

ಸ್ಕಾಟ್ಲೆಂಡ್ ಪರ ರಾಹುಲ್ ದ್ರಾವಿಡ್ ದಾಖಲೆ: ಸ್ಕಾಟ್ಲೆಂಡ್ ಪರ ಆಡಿದ್ದ ದ್ರಾವಿಡ್ ಮೊದಲ ಪಂದ್ಯದಲ್ಲಿ ಕೇವಲ 25 ರನ್ ಗಳಿಸಿ ಔಟಾಗಿದ್ದರು. ಪಾಕಿಸ್ತಾನ ವಿರುದ್ಧದ ತನ್ನ ಎರಡನೇ ಪಂದ್ಯದಲ್ಲಿ, ಶೂನ್ಯಕ್ಕೆ ನಿರ್ಗಮಿಸಿದ್ದರು. ಆದಾಗ್ಯೂ, ಸೋಮರ್‌ಸೆಟ್ ವಿರುದ್ಧದ ಮೂರನೇ ಪಂದ್ಯದಲ್ಲಿ ದ್ರಾವಿಡ್ 97 ಎಸೆತಗಳಲ್ಲಿ 120 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಸ್ಕಾಟ್ಲೆಂಡ್ ಪರ ಒಟ್ಟು 12 ODI ಪಂದ್ಯಗಳನ್ನು ಆಡಿದ್ದ ಅವರು ಇದರಲ್ಲಿ 66.66 ಸರಾಸರಿಯಲ್ಲಿ 600 ರನ್ ಗಳಿಸಿದ್ದರು. ಅದಾಗ್ಯೂ 11 ಪಂದ್ಯಗಳಲ್ಲಿ ಸ್ಕಾಟ್ಲೆಂಡ್​ ಸೋಲನುಭವಿಸಿತ್ತು.

ಇದನ್ನೂ ಓದಿ: ಟೆಸ್ಟ್​ನಲ್ಲಿ 5 ಲಕ್ಷ ರನ್​ ಪೂರ್ಣಗೊಳಿಸಿದ ಇಂಗ್ಲೆಂಡ್​: ವಿಶ್ವದ ಏಕೈಕ ತಂಡವಾಗಿ ದಾಖಲೆ; 3ನೇ ಸ್ಥಾನದಲ್ಲಿದೆ ಭಾರತ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.