ETV Bharat / sports

ಭಾರತ ಶ್ರೀಲಂಕಾ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೂ ಸೂಪರ್​ ಓವರ್​ ಏಕೆ ಆಯೋಜಿಸಲಿಲ್ಲ ಗೊತ್ತಾ?: ಅದಕ್ಕೆ ಇದೇ ಕಾರಣ - india vs sri lanka

ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡರೂ ಫಲಿತಾಂಶಕ್ಕಾಗಿ ಸೂಪರ್​ ಓವರ್ ಏಕೆ ಆಡಿಸಲಿಲ್ಲ ಗೊತ್ತಾ? ಈ ಬಗ್ಗೆ ಐಸಿಸಿ ನಿಯಮಗಳು ಏನು ಹೇಳುತ್ತವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ​

ಭಾರತ ಶ್ರೀಲಂಕಾ ಪಂದ್ಯ
ಭಾರತ ಶ್ರೀಲಂಕಾ ಪಂದ್ಯ (AP)
author img

By ETV Bharat Sports Team

Published : Aug 3, 2024, 2:25 PM IST

ಕೊಲಂಬೊ (ಶ್ರೀಲಂಕಾ): ಭಾರತ ಮತ್ತು ಶ್ರೀಲಂಕಾ ನಡುವಿನ ದ್ವೀಪಕ್ಷಿಯ ಏಕದಿನ ಸರಣಿಯ (ODI) ಮೊದಲ ಪಂದ್ಯ ಶುಕ್ರವಾರ ಕೊಲಂಬೊ ಮೈದನಾದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ್ದ ಶ್ರೀಲಂಕಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 230 ರನ್​ಗಳನ್ನು ಕಲೆಹಾಕಿತ್ತು. 231 ರನ್​ಗಳ ಗುರಿ ಬೆನ್ನಟ್ಟಿದ ಭಾರತ ಪ್ರತ್ಯುತ್ತರವಾಗಿ 47.5 ಓವರ್​ಗಳಲ್ಲಿ 230 ರನ್​ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಪಂದ್ಯವೂ ಡ್ರಾನಲ್ಲಿ ಕೊನೆಗೊಂಡಿತು. ಬಳಿಕ ಯಾವುದೇ ಸೂಪರ್​ ಓವರ್​ ನಡೆಸದೇ ಪಂದ್ಯವನ್ನು ಮುಕ್ತಾಯಗೊಳಿಸಲಾಯಿತು.

ಇದನ್ನೂ ಓದಿ:ಸುಳ್ಯದ ಅರಣ್ಯದೊಳಗಿದೆ ಒಂದು ವಿಸ್ಮಯಕಾರಿ ಬಾವಿ: ಏನಿದರ ವಿಶೇಷತೆ? - An amazing well in Sulya

ಸೂಪರ್ ಓವರ್ ಏಕೆ ಆಡಿಸಲಿಲ್ಲ?: ಕ್ರಿಕೆಟ್‌ನಲ್ಲಿ, ಎರಡೂ ತಂಡಗಳ ಸ್ಕೋರ್ ಸಮವಾದಾಗ(ಡ್ರಾ) ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಸೂಪರ್ ಓವರ್​ ಆಡಿಸಲಾಗುತ್ತದೆ. ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಸೂಪರ್​ ಓವರ್​ ನಡೆಸಲಾಗುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಯಾವುದೇ ಫಲಿತಾಂಶವಿಲ್ಲದೇ ಪಂದ್ಯ ಡ್ರಾನಲ್ಲಿ ಕೊನೆಗೊಳಿಸಲಾಯಿತು.

ಇದನ್ನೂ ಓದಿ:ಜೋಗ ಜಲಪಾತದ ರಾಜ, ರಾಣಿ, ರೋರರ್, ರಾಕೆಟ್ ಹೆಸರು ಹೇಗೆ ಬಂತು ನಿಮಗೆ ಗೊತ್ತಾ! - Jog Waterfalls

ಐಸಿಸಿ ನಿಯಮಗಳು ಏನು ಹೇಳುತ್ತವೆ?: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಮಗಳ ಪ್ರಕಾರ, ಏಕದಿನ ದ್ವಿಪಕ್ಷೀಯ ಸರಣಿಯಲ್ಲಿ (ಎರಡು ದೇಶಗಳ ನಡುವಿನ ಸರಣಿ) ಪಂದ್ಯ ಡ್ರಾಗೊಂಡರೆ ಫಲಿತಾಂಶವನ್ನು ನಿರ್ಧರಿಸಲು ಸೂಪರ್ ಓವರ್ ಅನ್ನು ಆಯೋಜಿಸಲಾಗುವುದಿಲ್ಲ. ಆದರೆ ಏಕದಿನ ಮಾದರಿಯ ಪ್ರತಿಷ್ಠಿತ ಟೂರ್ನಿಗಳಲ್ಲಿ ಅಂದರೇ ಬಹುರಾಷ್ಟ್ರಗಳು ಭಾಗವಹಿಸುವ ಪಂದ್ಯಗಳಲ್ಲಿ ಮಾತ್ರ ಪಂದ್ಯಗಳು ಡ್ರಾ ಗೊಂಡರೇ ಸೂಪರ್ ಓವರ್ ನಡೆಯಲಿದೆ. ಹಾಗಾಗಿ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಸೂಪರ್​ ಓವರ್​ ನಡೆಸಲಾಗುವುದಿಲ್ಲ. ಟಿ20 ದ್ವಿಪಕ್ಷೀಯ ಸರಣಿಗಳಿಗೆ ಈ ನಿಯಮ ಅನ್ವಯ ಆಗುವುದಿಲ್ಲ. ಮತ್ತು T20 ಮಾದರಿಯಲ್ಲಿ ಯಾವುದೇ ಪಂದ್ಯ ಟೈ ಆಗಿದ್ದರೂ, ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಿಸಲಾಗುತ್ತದೆ.

ಇದನ್ನೂ ಓದಿ: ಹ್ಯಾಟ್ರಿಕ್​ ಪದಕ ನಿರೀಕ್ಷೆಯಲ್ಲಿದ್ದ ಮನು ಭಾಕರ್​​ಗೆ ನಿರಾಸೆ: 25 ಮೀ ಪಿಸ್ತೂಲ್​​ ಫೈನಲ್​ನಿಂದ ಎಲಿಮಿನೇಟ್​ - Paris Olympics 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.