ETV Bharat / sports

RCB Vs KKR: ಆರ್​ಸಿಬಿ ವಿರುದ್ಧ ಗೆದ್ದು ಬೀಗಿದ ಕೆಕೆಆರ್ - IPL 2024 - IPL 2024

ಐಪಿಎಲ್​ ಟೂರ್ನಿಯ 10ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ​ ಆರ್​ಸಿಬಿ ಸೋಲು ಕಂಡಿದೆ.

virat-kohlis-fifty-guides-rcb-to-182-slash-6-against-kkr
RCB Vs KKR: ಆರ್​ಸಿಬಿ ವಿರುದ್ಧ ಗೆದ್ದು ಬೀಗಿದ ಕೆಕೆಆರ್
author img

By PTI

Published : Mar 29, 2024, 9:46 PM IST

Updated : Mar 29, 2024, 11:03 PM IST

ಬೆಂಗಳೂರು: ರಾಯಲ್ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ 17ನೇ ಐಪಿಎಲ್​ ಟೂರ್ನಿಯಲ್ಲಿ ಕೋಲ್ಕತ್ತಾ ತನ್ನ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದೆ. ಮತ್ತೊಂದೆಡೆ, ಬೆಂಗಳೂರು ತಂಡವು ತಾನಾಡಿದ ಮೂರು ಪಂದ್ಯಗಳಲ್ಲಿ ಎರಡನೇ ಸೋಲು ಅನುಭವಿಸಿದೆ.

ಇಲ್ಲಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್​ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ದುಕೊಂಡಿತ್ತು. ಇದರಿಂದ ಮೊದಲು ಬ್ಯಾಟಿಂಗ್​ ಇಳಿದಿದ್ದ ಆರ್​ಸಿಬಿ ಸ್ಟಾರ್​ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಅರ್ಧಶತಕದ ನೆರವಿನೊಂದಿಗೆ 182 ರನ್​ಗಳನ್ನು ಕಲೆ ಹಾಕಿತ್ತು. 183 ರನ್​ಗಳ ಗುರಿ ಬೆನ್ನಟ್ಟಿದ ಕೆಕೆಆರ್ ತಂಡ 16.5 ಓವರ್​ಗಳಲ್ಲಿ ಕೇವಲ ಮೂರು ವಿಕೆಟ್​ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಕೆಕೆಆರ್ ಪರವಾಗಿ ಅಗ್ರ ಕ್ರಮಾಂಕದ ಎಲ್ಲ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಫಿಲಿಪ್ ಸಾಲ್ಟ್ (30) ಮತ್ತು ಸುನಿಲ್ ನರೈನ್ (47) ಮೊದಲ ವಿಕೆಟ್​ಗೆ 86 ರನ್​ಗಳನ್ನು ಕಲೆ ಹಾಕಿಸಿ ಭದ್ರ ಅಡಿಪಾಯ ಹಾಕಿದರು. ನಂತರದಲ್ಲಿ ವೆಂಕಟೇಶ ಅಯ್ಯರ್ (50), ನಾಯಕ ಶ್ರೇಯಸ್ ಅಯ್ಯರ್ (39 ಅಜೇಯ) ಸಹ ಭರ್ಜರಿಯಾಗಿ ರನ್​ ಕಲೆ ಹಾಕಿ ತಂಡದ ಗೆಲುವಿಗೆ ಕಾರಣರಾದರು. ಆರ್​ಸಿಬಿ ಪರ ವಿಜಯಕುಮಾರ್ ವೈಶಾಕ್, ಯಶ್ ದಯಾಳ್, ಮಯಾಂಕ್ ದಾಗರ್ ತಲಾ ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಆರ್​ಸಿಬಿ ಪರ ವಿರಾಟ್ ಕೊಹ್ಲಿ 83 ರನ್​ಗಳನ್ನು ಬಾರಿಸಿ ಅದ್ಭುತ ಪ್ರದರ್ಶನ ನೀಡಿದರು. ಇದರೊಂದಿಗೆ ನಿಗದಿತ 20 ಓವರ್​ಗಳಲ್ಲಿ ಸವಾಲಿನ 182 ರನ್​ಗಳನ್ನು ಪೇರಿಸಲು ಆರ್​ಸಿಬಿ ತಂಡಕ್ಕೆ ಸಾಧ್ಯವಾಯಿತು. ವಿರಾಟ್ ಅವರೊಂದಿಗೆ ಇನ್ನಿಂಗ್ಸ್​ ಆರಂಭಿಸಿದ ನಾಯಕ ಫಾಫ್​ ಡು ಪ್ಲೆಸ್ಸಿಸ್ ಕೇವಲ 8 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ವೇಗಿ ಹರ್ಷಿತ್ ರಾಣಾ ಬೌಲಿಂಗ್​ನಲ್ಲಿ ಮಿಚೆಲ್ ಸ್ಟಾರ್ಕ್ ಕೈಯಲ್ಲಿ ಕ್ಯಾಚಿತ್ತು ಬೇಗನೆ ನಿರ್ಮಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಕ್ಯಾಮರೂನ್ ಗ್ರೀನ್ ಕೊಹ್ಲಿ ಅವರಿಗೆ ಉತ್ತಮ ಸಾಥ್​ ನೀಡಿದರು. ಇದೇ ವೇಳೆ, ಕೊಹ್ಲಿ ಅದ್ಭುತ ಹೊಡೆತಗಳ ಮೂಲಕ ರನ್​ಗಳನ್ನು ಕಲೆ ಹಾಕಿ 33 ಎಸೆತಗಳಲ್ಲಿ 50 ರನ್​ ಪೂರೈಸಿದರು.

ಮತ್ತೊಂದೆಡೆ, ಗ್ರೀನ್ ಸಹ ಅವಕಾಶ ಸಿಕ್ಕಾಗ ಬಾಲ್​ ಅನ್ನು ಬೌಂಡರಿಗೆ ರವಾನಿಸಿದರು. 22 ಎಸೆತಗಳಲ್ಲಿ ಎರಡು ಸಿಕ್ಸರ್​, ನಾಲ್ಕು ಬೌಂಡರಿಗಳ ಸಮೇತ 33 ರನ್​ ಬಾರಿಸಿ ವಿಕೆಟ್​ ಒಪ್ಪಿಸಿದರು. ನಂತರದಲ್ಲಿ ಬಂದ ಮ್ಯಾಕ್ಸ್​ವೆಲ್​ ಸಹ ಕೊಹ್ಲಿ ಅವರೊಂದಿಗೆ ಒಳ್ಳೆಯ ಜೊತೆಯಾಟ ನೀಡಿದರು. ಆದರೆ, ಅವರಿಗೆ ದೊಡ್ಡ ಮೊತ್ತ ಕಲೆ ಹಾಕಲು ಸಾಧ್ಯವಾಗಿಲ್ಲ. 28 ರನ್​ಗಳಿಗೆ ವಿಕೆಟ್ ನೀಡಿದರು. ಬಳಿಕ ಬಂದ ರಜತ್ ಪಾಟಿದಾರ್, ಅನುಜ್ ರಾವತ್​ ಕೇವಲ 3 ರನ್​ಗೆ ಪೆವಿಲಿಯನ್​ ಸೇರಿದರು.

ಇದೇ ವೇಳೆ, ಬಂದ ದಿನೇಶ್ ಕಾರ್ತಿಕ್​ ಬಿರುಸಿನ ಬ್ಯಾಟಿಂಗ್​ ಪ್ರದರ್ಶಿಸಿದರು. ಕೇವಲ 8 ಬಾಲ್​ಗಳನ್ನು ಎದುರಿಸಿದ ಈ ಆಟಗಾರ ಮೂರು ಸಿಕ್ಸರ್​ಗಳ ಸಮೇತವಾಗಿ 20 ರನ್​ ಬಾರಿಸಿ ರನ್​​ಔಟ್​​ ಆದರೆ, ಕೊಹ್ಲಿ 59 ಎಸೆತಗಳಲ್ಲಿ ತಲಾ ನಾಲ್ಕು ಸಿಕ್ಸರ್​, ಬೌಂಡರಿಗಳೊಂದಿಗೆ 83 ಸಿಡಿಸಿ ಅಜೇಯ ಆಟ ಪ್ರದರ್ಶಿಸಿದರು. ಅಂತಿಮವಾಗಿ 6 ವಿಕೆಟ್​ ನಷ್ಟಕ್ಕೆ ಆರ್​ಸಿಬಿ 182 ರನ್​ ಕಲೆ ಹಾಕಿತ್ತು. ಕೆಕೆಆರ್ ಪರ ಹರ್ಷಿತ್ ರಾಣಾ ಮತ್ತು ರಸೆಲ್​ ತಲಾ 2 ವಿಕೆಟ್​ ಪಡೆದರೆ, ನರೈನ್​ 1 ವಿಕೆಟ್​ ಪಡೆದರು.

ಇದನ್ನೂ ಓದಿ: 500 ಟಿ20 ಪಂದ್ಯಗಳನ್ನಾಡಿದ ಆಟಗಾರರ ಕ್ಲಬ್​ಗೆ ಸೇರಿದ ಸುನಿಲ್ ನರೈನ್

Last Updated : Mar 29, 2024, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.