India vs Australia Gabba Test: ಬಾರ್ಡರ್ - ಗವಾಸ್ಕರ್ ಟ್ರೋಫಿ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ.
ಮಳೆ ಪೀಡಿತ ಈ ಪಂದ್ಯದಲ್ಲೂ ಆಸ್ಟ್ರೇಲಿಯಾ ಭರ್ಜರಿ ಪ್ರದರ್ಶನ ತೋರಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್‌ಗಳಿಸಿದೆ. ಇದಕ್ಕುತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 44 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ಅನುಭವಿ ಬ್ಯಾಟರ್ ಆದ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಅಲ್ಪ ರನ್ಗಳಿಸಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ನಿವೃತ್ತಿ ಕೂಗು ಕೇಳಿ ಬಂದಿದೆ.
With due respect Kohli saab please retire from test cricket. 🙏💔 #INDvsAUS pic.twitter.com/2DcpNjgeva
— Lokesh Saini🚩 (@LokeshVirat18K) December 16, 2024
ಅಭಿಮಾನಿಗಳಿಂದ ನಿವೃತ್ತಿಗೆ ಒತ್ತಾಯ: ಕೊಹ್ಲಿ ಕಳಪೆ ಪ್ರದರ್ಶನದಿಂದಾಗಿ ರೋಸಿ ಹೋದ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಭಾರತೀಯ ಕ್ರಿಕೆಟ್ ಸುಧಾರಣೆಗಾಗಿ ನೀವೂ ನಿವೃತ್ತಿ ತೆಗೆದುಕೊಳ್ಳುವುದು ಒಳ್ಳೆಯದು ಎಂದಿದ್ದಾರೆ. ಹೀಗಾದರೇ ವಿರಾಟ್, ಸಚಿನ್ ದಾಖಲೆ ಸಮೀಪಕ್ಕೂ ಹೋಗಲು ಸಾಧ್ಯವಿಲ್ಲ ಎಂದು ಬಳಕೆದಾರರು ಬರೆದುಕೊಂಡಿದ್ದಾರೆ. ಮತ್ತೊಬ್ಬರು 'ವಿರಾಟ್ ಕೊಹ್ಲಿ ರನ್ ಗಳಿಸುವ ಹಸಿವನ್ನು ಕಳೆದುಕೊಂಡಿದ್ದಾರೆ. ಬೇರೆ ಕಾರಣವಿಲ್ಲ' ಎಂದು ಟೀಕಿಸಿದ್ದಾರೆ.
Josh Hazlewood gets Virat Kohli!
— cricket.com.au (@cricketcomau) December 16, 2024
The Australians are up and about on Day Three. #AUSvIND pic.twitter.com/sq6oYZmZAz
3ರನ್ ಗಳಿಸಿ ಔಟ್: ಕೊಹ್ಲಿ ಗಬ್ಬಾ ಟೆಸ್ಟ್‌ನ ಮೂರನೇ ದಿನದಂದು ಬ್ಯಾಟಿಂಗ್‌ಗೆ ಬಂದರು. ಇದಕ್ಕೂ ಮೊದಲು ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (4) ಮತ್ತು ಶುಭ್‌ಮನ್ ಗಿಲ್ (1) ಅವರ ವಿಕೆಟ್‌ಗಳನ್ನು ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ, ಕೆಎಲ್ ರಾಹುಲ್ ಜೊತೆಗೆ ಕೊಹ್ಲಿ ಇನ್ನಿಂಗ್ಸ್ ನಿಭಾಯಿಸಲು ಸಹಾಯ ಮಾಡುತ್ತಾರೆ ಎಂದೇ ಅಭಿಮಾನಿಗಳು ಭರವಸೆ ಹೊಂದಿದ್ದರು. ಆದರೆ, 3 ರನ್ ಗಳಿಸಿದ್ದ ಕೊಹ್ಲಿ ಹೇಜಲ್‌ವುಡ್ ಎಸೆದ ಎಸೆತದಲ್ಲಿ ಅಗ್ಗವಾಗಿ ವಿಕೆಟ್ ನೀಡಿ ಹೊರ ನಡೆದರು.
Like this tweet if you think Virat Kohli should Retire 😡🤬 pic.twitter.com/sS8dFopbTD
— Honest RCB Fan💚💚 (@HonestRCBFan18) December 16, 2024
3ನೇ ಟೆಸ್ಟ್: ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್ ಗಳಿಸಿತ್ತು. ಆಸೀಸ್ ಪರ ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿತು. ಇದಕ್ಕುತ್ತರವಾಗಿ ಭಾರತ 51 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು 3ನೇ ದಿನದಾಟ ಮುಗಿಸಿದೆ. ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ 3ನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
Virat Kohli has lost the hunger to score runs. No other reason 💔 pic.twitter.com/TQrLViSQhJ
— Dinda Academy (@academy_dinda) December 16, 2024
ಇದನ್ನೂ ಓದಿ: ಕೇವಲ 3 ರನ್ಗಳಿಸಿ ಔಟಾದರೂ ದೊಡ್ಡ ದಾಖಲೆ ಬರೆದ ವಿರಾಟ್ ಕೊಹ್ಲಿ!; ಯಾವುದು ಆ ರೆಕಾರ್ಡ್