ETV Bharat / sports

ಐಪಿಎಲ್​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ಹೊಸ ಮೈಲಿಗಲ್ಲು: ರನ್​ ಮಷಿನ್ ಹೆಸರಿನಲ್ಲಿ ಮತ್ತೆರಡು ದಾಖಲೆ - Virat Kohli ipl record - VIRAT KOHLI IPL RECORD

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ವಿರಾಟ್​ ಕೊಹ್ಲಿ ತನ್ನ ದಾಖಲೆಗಳನ್ನು ಮುಂದುವರೆಸಿದ್ದು, ರಾಜಸ್ಥಾನ ರಾಯಲ್ಸ್​ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ
author img

By ETV Bharat Karnataka Team

Published : Apr 6, 2024, 10:33 PM IST

Updated : Apr 6, 2024, 10:55 PM IST

ಜೈಪುರ್ ​(ರಾಜಸ್ಥಾನ) : 17ನೇ ಆವೃತ್ತಿ ಇಂಡಿಯನ್​ ಪ್ರಿಮಿಯರ್​ ಲೀಗ್ (ಐಪಿಎಲ್​)​ನಲ್ಲಿ ಮೊದಲ ಶತಕ ಸಿಡಿಸಿರುವ ವಿರಾಟ್​ ಕೊಹ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ.

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ನಡೆಯುತ್ತಿರುವ ರಾಜಸ್ಥಾನ್​ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 34 ರನ್ ​ಗಳಿಸುತ್ತಿದ್ದಂತೆ ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ 7500 ರನ್​ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ಈವರೆಗೆ ಐಪಿಎಲ್​ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರನಾಗಿ ಕೊಹ್ಲಿ (8) ಮೊದಲ ಸ್ಥಾನದಲ್ಲಿದ್ದಾರೆ. ಐಪಿಎಲ್​ ಟೂರ್ನಿಯಲ್ಲಿ ಹಲವು ದಾಖಲೆಗಳನ್ನು ಬರೆದಿರುವ ವಿರಾಟ್​ ಕೊಹ್ಲಿ ತನ್ನ ದಾಖಲೆಗಳನ್ನು ಮುಂದುವರೆಸಿದ್ದಾರೆ.

ಐಪಿಎಲ್​ನಲ್ಲಿ ಅತಿ ಹೆಚ್ಚು ರನ್​ ಹೊಡೆದಿರುವ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 7500 ರನ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಪಂಜಾಬ್ ನಾಯಕ ಶಿಖರ್ ಧವನ್ ಇದುವರೆಗೆ 6755 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ 6545 ರನ್, ನಾಲ್ಕನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ 6280 ರನ್ ಮತ್ತು ಸುರೇಶ್ ರೈನಾ 5528 ರನ್ ಗಳಿಸಿದ್ದಾರೆ.

ಅಲ್ಲದೆ ಅತಿ ಹೆಚ್ಚು ಶತಕಗಳನ್ನು ದಾಖಲಿಸಿರುವರ ಸಾಲಿನಲ್ಲೂ ವಿರಾಟ್​ ಕೊಹ್ಲಿ 8 ಸೆಂಚುರಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ನಂತರ ಕ್ರಿಸ್ ಗೇಲ್ 6 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಜೋಸ್ ಬಟ್ಲರ್ 5 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

17ನೇ ಆವೃತ್ತಿ ಐಪಿಎಲ್​ನಲ್ಲಿ ಇದುವರೆಗೆ ವಿರಾಟ್ ಕೊಹ್ಲಿ ಪ್ರದರ್ಶನವನ್ನು ನೋಡುವುದಾದರೆ, ಆಡಿರುವ 4 ಪಂದ್ಯಗಳಲ್ಲಿ 67.67 ಸರಾಸರಿ ಮತ್ತು 140.97 ಸ್ಟ್ರೈಕ್ ರೇಟ್‌ನಲ್ಲಿ 2 ಅರ್ಧಶತಕ ಒಳಗೊಂಡಂತೆ 200 ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಒಟ್ಟಾರೆ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ 242* ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಆಡಿರುವ 234 ಇನ್ನಿಂಗ್ಸ್‌ಗಳಲ್ಲಿ 38 ರ ಸರಾಸರಿ ಮತ್ತು 130 ಸ್ಟ್ರೈಕ್ ರೇಟ್‌ನಲ್ಲಿ 7500* ರನ್ ಗಳಿಸಿದ್ದಾರೆ. ಅಲ್ಲದೆ ಈ ಲೀಗ್‌ನಲ್ಲಿ ವಿರಾಟ್ ಕೊಹ್ಲಿ 52 ಅರ್ಧಶತಕಗಳ ಜೊತೆಗೆ 8 ಶತಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ : ವಿರಾಟ್ ರೂಪ ತೋರಿದ​ ಕೊಹ್ಲಿ: ಎದುರಾಳಿ ರಾಜಸ್ಥಾನಕ್ಕೆ 184 ರನ್​ಗಳ ಟಾರ್ಗೆಟ್​ - IPL 2024

Last Updated : Apr 6, 2024, 10:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.