ನವದೆಹಲಿ: ಇಲ್ಲಿನ ಐತಿಹಾಸಿಕ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮಳೆ ಪೀಡಿತ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕ್ರಿಕೆಟ್ ಇತಿಹಾಸದ ಪುಟದಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಈ ಪಂದ್ಯದಲ್ಲಿ 35ರನ್ ಪೂರೈಸಿದ ತಕ್ಷಣ, ವಿರಾಟ್ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದರು ದೊಡ್ಡ ದಾಖಲೆಗಳನ್ನು ಮಾಡಿದರು.
27,000 ರನ್: ಹೌದು ವಿರಾಟ್ ಕೊಹ್ಲಿ , ಕಾನ್ಪುರ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 47 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ 35ನೇ ರನ್ ಗಳಿಸಿದ ತಕ್ಷಣ ವಿರಾಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27 ಸಾವಿರ ರನ್ ಪೂರೈಸಿದರು. ಸಚಿನ್ ತೆಂಡೂಲ್ಕರ್ ನಂತರ ಈ ಮೈಲಿಗಲ್ಲನ್ನು ತಲುಪಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
FASTEST TO COMPLETE 27,000 RUNS IN INTERNATIONAL CRICKET:
— Johns. (@CricCrazyJohns) September 30, 2024
Virat Kohli - 594* innings.
Sachin Tendulkar - 623 innings. pic.twitter.com/3ryIG1cAsz
ವಿರಾಟ್ ಸಾಧನೆ ಮಾಡಲು 594 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 27,000 ರನ್ ಪೂರೈಸಿದ ಆಟಗಾರರಾದರು. ಇದೇ ಸಾಧನೆ ಮಾಡಲು ಸಚಿನ್ ತೆಂಡೂಲ್ಕರ್ 623 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡರು. ಆದರೆ, ಶಕೀಬ್ ಅಲ್ ಹಸನ್ ಎಸೆತದ ವೇಳೆ ದೊಡ್ಡ ಬೌಂಡರಿ ಬಾರಿಸಲು ಯತ್ನಿಸಿ ವಿಕೆಟ್ ಕಳೆದುಕೊಂಡರು. ವಿರಾಟ್ 35 ಎಸೆತಗಳಲ್ಲಿ 47 ರನ್‌ಗಳ ಇನ್ನಿಂಗ್ಸ್ ಆಡಿದ ಕೇವಲ 3 ರನ್‌ಗಳಿಂದ ಅರ್ಧಶತಕ ಗಳಿಸುವುದನ್ನು ತಪ್ಪಿಸಿಕೊಂಡರು. ಈ ವೇಳೆ, ವಿರಾಟ್ 4 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.
Another day at office, another milestone breached!@imVkohli now has 27000 runs in international cricket 👏👏
— BCCI (@BCCI) September 30, 2024
He is the fourth player and second Indian to achieve this feat!#INDvBAN @IDFCFIRSTBank pic.twitter.com/ijXWfi5v7O