ಧರ್ಮಶಾಲಾ (ಹಿಮಾಚಲ ಪ್ರದೇಶ): ಆರ್‌ಸಿಬಿ ಸ್ಟಾರ್ ಬ್ಯಾಟ್ಸ್ಮನ್, ಭಾರತೀಯ ಕ್ರಿಕೆಟ್ನ ಸವ್ಯಸಾಚಿ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಇತಿಹಾಸವನ್ನು ಬರೆದಿದ್ದಾರೆ. ಟಿ-20ಯಲ್ಲಿ 400 ಸಿಕ್ಸರ್‌ಗಳನ್ನು ಸಿಡಿಸಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಗುರುವಾರದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದೀಗ ಭಾರತದ ಪ್ರಸ್ತುತ ನಾಯಕ ರೋಹಿತ್ ಶರ್ಮಾ ಅವರ ಗುಂಪನ್ನು ಸೇರಿಕೊಂಡಿದ್ದಾರೆ. ರೋಹಿತ್ ಶರ್ಮಾ T20 ಕ್ರಿಕೆಟ್‌ನಲ್ಲಿ 506 ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲೀಗ ವಿರಾಟ್ ಕೊಹ್ಲಿ ಕೂಡಾ ಸೇರಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 1000 ರನ್‌ಗಳನ್ನು ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಒತ್ತಡದಲ್ಲಿ ಸ್ಥಿರ ಪ್ರದರ್ಶನ ನೀಡುವ ಅವರ ಸಾಮರ್ಥ್ಯವು ಯುವ ಪೀಳಿಗೆಯ ಬ್ಯಾಟ್ಸ್‌ಮನ್‌ಗಳಿಗೆ ಮಾದರಿಯಾಗಿದೆ.
ಇದಲ್ಲದೇ, ಕೊಹ್ಲಿಯ ಸಾಧನೆಗಳು ಅವರ ವೈಯಕ್ತಿಕ ಪ್ರತಿಭೆಯನ್ನು ಮಾತ್ರವಲ್ಲದೆ ದೇಶೀಯ ಮತ್ತು ಅಂತರಾಷ್ಟ್ರೀಯ T20 ಸ್ಪರ್ಧೆಗಳಲ್ಲಿ ಅವರ ಅಮೂಲ್ಯ ಕೊಡುಗೆಗಳನ್ನು ಎತ್ತಿ ತೋರಿಸುವಂತೆ ಮಾಡಿದೆ.
ಇದನ್ನು ಓದಿ: ಕೊಹ್ಲಿ, ಪಾಟಿದಾರ್ ಅಬ್ಬರದ ಅರ್ಧಶತಕ: ಪಂಜಾಬ್ಗೆ 242 ರನ್ ಗುರಿ ನೀಡಿದ ಆರ್‌ಸಿಬಿ - IPL 2024