ETV Bharat / sports

ರೈತರೊಂದಿಗೆ ಪ್ರತಿಭಟನೆಗೆ ಧುಮುಕಿದ ವಿನೇಶ್​ ಫೋಗಟ್: ಮಗಳಂತೆ ಕೊನೆವರೆಗೂ ಇರುವೆ ಎಂದ ಕುಸ್ತಿಪಟು - Vinesh Phogat - VINESH PHOGAT

ಹರಿಯಾಣದ ಶಂಭು ಗಡಿಯಲ್ಲಿ ವಿವಿಧ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕುಸ್ತಿಪಟು ವಿನೇಶ್​ ಫೋಗಟ್​ ಭಾಗಿಯಾಗಿ, ನಮ್ಮ ಹಕ್ಕುಗಳನ್ನು ಪಡೆಯುವವರೆಗೂ ಹಿಂತಿರುಗದಂತೆ ಹೇಳಿ ಬೆಂಬಲ ಸೂಚಿಸಿದ್ದಾರೆ.

ವಿನೇಶ್​ ಫೋಗಟ್​
ವಿನೇಶ್​ ಫೋಗಟ್​ (ANI)
author img

By ETV Bharat Sports Team

Published : Aug 31, 2024, 6:27 PM IST

ನವದೆಹಲಿ: ಹರಿಯಾಣ ಮತ್ತು ಪಂಜಾಬ್​ ನಡುವಿನ ಶಂಭು ಗಡಿಯಲ್ಲಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ 200ನೇ ದಿನಕ್ಕೆ ತಲುಪಿದೆ. ಕನಿಷ್ಠ ಬೆಂಬಲ ಬೆಲೆ ಮತ್ತು ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 200ನೇ ದಿನವಾದ ಇಂದು ಕುಸ್ತಿಪಟು ವಿನೇಶ್​ ಫೋಗಟ್​ ಶಂಭುಗಡಿಗೆ ತೆರಳಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಒಗ್ಗಟ್ಟು ಪ್ರದರ್ಶಿಸಿದರು. ಈ ವೇಳೆ ಹೊರಾಟಗಾರರು ಹೂಮಾಲೆ ಹಾಕಿ ಕುಸ್ತಿಪಟುವಿಗೆ ಸನ್ಮಾನಿಸಿದರು.

ಬಳಿಕ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿನೇಶ್​​ ಫೋಗಟ್​, ಕೃಷಿ ಕುಟುಂಬದಲ್ಲಿ ಹುಟ್ಟಿರುವುದು ನನ್ನ ಅದೃಷ್ಟ. ನಿಮ್ಮ ಮಗಳಂತೆ ಕೊನೆಯವರೆಗೂ ನಿಮ್ಮ ಪರವಾಗಿ ನಿಲ್ಲುತ್ತೇನೆ. ನಮ್ಮ ಹಕ್ಕುಗಳ ರಕ್ಷಣೆಗೆ ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ನಮ್ಮ ಹಕ್ಕಿಗಾಗಿ ನಾವೇ ಹೋರಾಡೋಣ. ನಮ್ಮ ಹಕ್ಕುಗಳನ್ನು ಪಡೆದ ಬಳಿಕವೇ ಮನೆಗಳಿಗೆ ಹಿಂದಿರುಗಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ರೈತರು 200 ದಿನಗಳಿಂದ ನಿರಂತರ ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ಗಮನ ಹರಿಸದೇ ಇರುವುದು ಆತಂಕಕಾರಿಯಾಗಿದೆ. ಸರ್ಕಾರ ಇನ್ನು ವಿಳಂಬ ಮಾಡದೇ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ತಮ್ಮ ಹಕ್ಕಿಗಾಗಿ ನಿರಂತರ ಹೋರಾಡುತ್ತಿರುವುದು ರೈತರು ಸ್ಫೂರ್ತಿದಾಯಕವಾಗಿದೆ. ರೈತರ ಬೆಂಬಲಕ್ಕೆ ನಿಲ್ಲುವುದು ನನ್ನ ಮುಖ್ಯ ಉದ್ದೇಶ ಎಂದರು.

ಬೆಳೆಗಳಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ರೈತರು ಫೆ.13 ರಿಂದ ಪಂಜಾಬ್​-ಹರಿಯಾಣದ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಟಿಭಟನಾ ರ್ಯಾಲಿ ಮೂಲಕ ದೆಹಲಿಗೆ ತೆರಳಲೂ ಯೋಜಿಸಿದ್ದ ರೈತ ಸಂಘಟನೆಗಳನ್ನು ಪೊಲೀಸರು ಶಂಭು ಗಡಿಯಲ್ಲಿ ತಡೆದರು. ಬೆಳೆಗೆ ಸೂಕ್ತ ಬೆಂಬಲ ಬೆಲೆ ಕುರಿತು ಕೇಂದ್ರ ಕಾನೂನಾತ್ಮಕವಾಗಿ ಭರವಸೆ ನೀಡುವವರೆಗೆ ಹೋರಾಟ ಕೈ ಬಿಡಲ್ಲ ಎಂದು ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಪ್ಯಾರಿಸ್​ ಒಲಿಂಪಿಕ್​​ನಲ್ಲಿ ಕುಸ್ತಿಪಟು ವಿನೇಶ್​ ಫೋಗಟ್​ 50 ಕೆಜಿ ಮಹಿಳೆಯರ ಕುಸ್ತಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಫೈನಲ್​ಗೆ ತಲುಪಿದ್ದರು. ಆದರೇ ಆಂತಿಮ ಪಂದ್ಯದಲ್ಲಿ 50 ಕೆಜಿಗಿಂತ 100 ಗ್ರಾಂ ಹೆಚ್ಚಿನ ತೂಕ ಹೊಂದಿದ್ದ ಕಾರಣ ಅವರನ್ನು ಅನರ್ಹಗೊಳಿಸಲಾಗಿತ್ತು. ಈ ವೇಳೆ ಅನೇಕ ರಾಜಕೀಯ ಗಣ್ಯರು ಮತ್ತು ಸಹ ಕುಸ್ತಿಪಟುಗಳು ವಿನೇಶ್​ಗೆ ಬೆಂಬಲ ಸೂಚಿಸಿದ್ದರು.

ಇದನ್ನೂ ಓದಿ: 6,6,6,6,6,6 ; ಯುವರಾಜ್​ ಸಿಂಗ್​ರಂತೆ ಒಂದೇ ಓವರ್​ನಲ್ಲಿ ಆರು ಸಿಕ್ಸರ್​ ಸಿಡಿಸಿದ ಭಾರತದ ಯುವ ಬ್ಯಾಟರ್ - Dehli Premier League

ETV Bharat Logo

Copyright © 2025 Ushodaya Enterprises Pvt. Ltd., All Rights Reserved.