ನವದೆಹಲಿ: ಶನಿವಾರ ಪ್ಯಾರಿಸ್ನಿಂದ ಭಾರತಕ್ಕೆ ಮರಳಿದ ಕುಸ್ತಿಪಟು ವಿನೇಶ್ ಫೋಗಟ್ ಇಂದು ತಮ್ಮ ಸಹೋದರನೊಂದಿಗೆ ಅದ್ಧೂರಿಯಾಗಿ ರಕ್ಷಾ ಬಂಧನ ಆಚರಿಸಿಕೊಂಡಿದ್ದಾರೆ. ತಮ್ಮ ಗ್ರಾಮ ಬಾಳಲಿಯಲ್ಲಿ ಸಹೋದರನಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಇದಕ್ಕೆ ಪ್ರತಿಯಾಗಿ ವಿನೇಶ್ ಅವರ ಸಹೋದರ ಕೂಡ ಭರ್ಜರಿ ಗಿಫ್ಟ್ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿ, ರಕ್ಷಾ ಬಂಧನದ ಉಡುಗೊರೆಯಾಗಿ ಸಹೋದರ 500 ನೋಟುಗಳ ಬಂಡಲ್ ಅನ್ನು ವಿನೇಶ್ಗೆ ನೀಡಿದ್ದಾರೆ. ಈ ಉಡುಗೊರೆ ಸ್ವೀಕರಿಸಿದ ಬಳಿಕ ಮಾತನಾಡಿರುವ ವಿನೇಶ್, "ಕಳೆದ ವರ್ಷ ನನ್ನ ಸಹೋದರ 500 ರೂಪಾಯಿ ನೀಡಿದ್ದ. ಇದೀಗ 500 ನೋಟುಗಳ ಬಂಡಲ್ ಅನ್ನೇ ನೀಡಿದ್ದಾನೆ. ನನ್ನ ಕೈಯಲ್ಲಿರುವ ಹಣ ಅವನ ಇಡೀ ಜೀವನದ ಸಂಪಾದನೆ. ಅದು ನನ್ನ ಕೈ ಸೇರಿದೆ. ಎಲ್ಲಾ ಸಹೋದರ-ಸಹೋದರಿಯರಿಗೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.
Charkhi Dadri, Haryana: Wrestler Vinesh Phogat celebrates Raksha Bandhan with her brother in their village Balali pic.twitter.com/YgahqHmDPq
— IANS (@ians_india) August 19, 2024
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ವಿನೇಶ್ ಪದಕ ವಂಚಿತರಾದರು. ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್ ದೇಹ ತೂಕ 100 ಗ್ರಾಂ ನಷ್ಟು ಹೆಚ್ಚಿದ್ದ ಕಾರಣ ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿತ್ತು. ಇದರ ನಂತರ, ಆಗಸ್ಟ್ 7ರಂದು ಬೆಳ್ಳಿ ಪದಕಕ್ಕಾಗಿ ಕ್ರೀಡಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆಗಸ್ಟ್ 14ರಂದು ಮನವಿಯನ್ನು ತಿರಸ್ಕರಿಸಲಾಗಿತ್ತು.
ಇದನ್ನೂ ಓದಿ: ಡೈಮಂಡ್ ಲೀಗ್ ಮೇಲೆ ಕಣ್ಣಿಟ್ಟ ನೀರಜ್ ಚೋಪ್ರಾ: ತರಬೇತಿಗಾಗಿ ಸ್ವಿಟ್ಜರ್ಲೆಂಡ್ ತಲುಪಿದ ಅಥ್ಲೀಟ್ - Neeraj Chopra