Tilak Varma T20 Record: ಟೀಂ ಇಂಡಿಯಾದ ಯುವ ಬ್ಯಾಟರ್ ತಿಲಕ್ ವರ್ಮಾ ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) 2024ರಲ್ಲಿ ಹೈದರಾಬಾದ್ ತಂಡದ ನಾಯಕರಾಗಿರುವ ತಿಲಕ್, T20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.
ರಾಜ್ಕೋಟ್ ಮೈದಾನದಲ್ಲಿ ಮೇಘಾಲಯದ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ತಿಲಕ್ 67 ಎಸೆತಗಳಲ್ಲಿ 151 ರನ್ ಚಚ್ಚಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 14 ಬೌಂಡರಿಗಳು ಮತ್ತು 10 ಸಿಕ್ಸರ್‌ಗಳು ಸೇರಿದ್ದವು. ತಿಲಕ್ ಬೌಂಡರಿಗಳ ಮೂಲಕವೇ 116 ರನ್ ಕಲೆಹಾಕಿದರು. ಮೊದಲಿಗೆ 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಅವರು 51 ಎಸೆತಗಳಲ್ಲಿ ಶತಕ ಪೂರೈಸಿದರು.
Tilak Varma becomes the FIRST ever player to score 3 back-to-back T20 centuries.
— Kausthub Gudipati (@kaustats) November 23, 2024
2 for India vs South Africa
Today in SMAT pic.twitter.com/ctVqGgm1wd
ಈ ಮೂಲಕ ಟಿ20ಯಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡರು. ಇದಷ್ಟೇ ಅಲ್ಲದೇ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ಮತ್ತು ಪಂದ್ಯ ವೊಂದರಲ್ಲೇ ಅತೀ ಹೆಚ್ಚು 24 ಬೌಂಡರಿ ಸಿಡಿಸಿದ ಬ್ಯಾಟರ್ ಆಗಿಯೂ ದಾಖಲೆ ಬರೆದಿದ್ದಾರೆ. ಇವುಗಳೊಂದಿಗೆ ಟಿ-20 ಸ್ವರೂಪದಲ್ಲಿ ಸತತ ಮೂರು ಶತಕಗಳನ್ನು ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಅಪರೂಪದ ದಾಖಲೆಯನ್ನೂ ಬರೆದಿದ್ದಾರೆ.
10 ದಿನಗಳಲ್ಲಿ 3 ಶತಕ: 22 ವರ್ಷದ ತಿಲಕ್ 10 ದಿನಗಳಲ್ಲಿ 3ನೇ ಬಾರಿಗೆ ಟಿ20 ಸ್ವರೂಪದಲ್ಲಿ ಶತಕ ಸಿಡಿಸಿದ್ದಾರೆ. ಇತ್ತೀಚೆಗೆ ನವೆಂಬರ್ 13 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಮೂರನೇ ಟಿ20 ಪಂದ್ಯದಲ್ಲಿ ತಿಲಕ್ 56 ಎಸೆತಗಳಲ್ಲಿ ಅಜೇಯವಾಗಿ 107 ರನ್ ಗಳಿಸಿ ಶತಕ ಪೂರೈಸಿದ್ದರು. ನಂತರ, ನವೆಂಬರ್ 15 ರಂದು, ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ, 47 ಎಸೆತಗಳಲ್ಲಿ ಅಜೇಯವಾಗಿ 120 ರನ್ ಗಳಿಸಿ ಶತಕ ಸಿಡಿಸಿದ್ದರು. ಇದೀಗ ನವೆಂಬರ್ 23 ಅಂದರೆ ಇಂದು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ T20 ಕ್ರಿಕೆಟ್‌ನಲ್ಲಿ ತಮ್ಮ ಸತತ ಮೂರನೇ ಶತಕವನ್ನು ಸಿಡಿಸಿದರು.
🚨 HISTORY CREATED IN SMAT. 🚨
— Mufaddal Vohra (@mufaddal_vohra) November 23, 2024
- Tilak Varma becomes the highest individual scorer in the history of SMAT - 151 (67). 🙇♂️🌟 pic.twitter.com/QfmYL5B1G0
ತಿಲಕ್ ಟಿ20 ದಾಖಲೆ: ತಿಲಕ್ ವರ್ಮಾ ಇದೂವರೆಗೂ 20 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿ 616 ರನ್ಗಳಿಸಿದ್ದಾರೆ, ಇದರಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕ ಪೂರೈಸಿದ್ದಾರೆ. ಹೈಸ್ಕೋರ್ 120 ರನ್ ಆಗಿದೆ. ಇದಲ್ಲದೇ ಐಪಿಎಲ್ನಲ್ಲಿ ಒಟ್ಟು 38 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 1156 ರನ್ ಗಳಿಸಿದ್ದಾರೆ. 84 ಹೈಸ್ಕೋರ್ ಆಗಿದ್ದು ಇದರಲ್ಲಿ 6 ಅರ್ಧಶತಕಗಳು ಸೇರಿವೆ.
November 13th - Hundred vs SA.
— Johns. (@CricCrazyJohns) November 23, 2024
November 15th - Hundred vs SA.
November 23rd - Hundred in SMAT.
THIRD CONSECUTIVE HUNDRED FOR TILAK VARMA IN T20 🤯🔥 pic.twitter.com/lKYRb2EWp7
ಇದನ್ನೂ ಓದಿ: ವಿದೇಶಿ ನೆಲದಲ್ಲಿ ನಡೆದ ಟೆಸ್ಟ್ ಕ್ರಿಕೆಟ್‌ನಲ್ಲಿ KL ರಾಹುಲ್ ಆಡಿರುವ 5 ದೊಡ್ಡ ಇನ್ನಿಂಗ್ಸ್ಗಳು ಇವೇ ನೋಡಿ...