ಹೈದರಾಬಾದ್: ಭಾರತದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಕೇವಲ ದಾಖಲೆಗಳಲ್ಲಿ ಮಾತ್ರವಲ್ಲದೇ ಫಿಟ್ನೆಸ್ನಲ್ಲೂ ಮುಂಚೂಣಿಯಲ್ಲಿದ್ದಾರೆ. ಇವರಿಗೆ 35 ವರ್ಷವಾದರೂ ಯುವ ಆಟಗಾರರನ್ನು ಸರಿಗಟ್ಟುವಷ್ಟು ಫಿಟ್ನೆಸ್ ಹೊಂದಿದ್ದಾರೆ. ಇದಕ್ಕೆ ಮುಖ್ಯ ಕಾರಣ ನಿಯಮಿತ ಪ್ರಮಾಣದ ವ್ಯಾಯಾಮ ಮತ್ತು ಆಹಾರ ಸೇವನೆ.
ಮೈದಾನದಲ್ಲಿ ಜಿಂಕೆಯಂತೆ ಓಡುವ ಕೊಹ್ಲಿ ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ತಮ್ಮ ಫಿಟ್ನೆಸ್ನ ರಹಸ್ಯವನ್ನು ಬಹಿರಂಗಪಡಿಸಿದ್ದರು. ದಿನದ ಡಯಟ್ ಪ್ಲಾನ್ ಬಗ್ಗೆಯೂ ತಿಳಿಸಿದ್ದರು.
ಇದು ಕೊಹ್ಲಿ ಡಯಟ್ ಪ್ಲಾನ್: ಕ್ರಿಕೆಟ್ ವಿವರಣೆಗಾರ ಜತಿನ್ ನಡೆಸಿದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ತಮ್ಮ ಆಹಾರ ಕ್ರಮದ ಕೆಲವು ರಹಸ್ಯಗಳನ್ನು ಹಂಚಿಕೊಂಡರು. ಬೆಳಗಿನ ಉಪಹಾರದಲ್ಲಿ ಎಗ್ ಆಮ್ಲೆಟ್, 3 ಎಗ್ ವೈಟ್ ಮತ್ತು ಒಂದು ಪೂರ್ಣಪ್ರಮಾಣ ಮೊಟ್ಟೆ, ಪಾಲಕ್, ಬೇಯಿಸಿದ ಹಂದಿ ಮಾಂಸ ಮತ್ತು ಮೀನು, ಪಪ್ಪಾಯ, ಡ್ರ್ಯಾಗನ್ ಫ್ರೂಟ್, ಕಲ್ಲಂಗಡಿ, ನಿಯಮಿತ ಪ್ರಮಾಣದಲ್ಲಿ ಚೀಸ್, ಬ್ರೆಡ್ ಜೊತೆ ನಟ್ ಬಟ್ಟರ್ ಅನ್ನು ಕೊಹ್ಲಿ ಸೇವಿಸುತ್ತಾರೆ. ಇದಲ್ಲದೇ ದಿನಕ್ಕೆ ಮೂರರಿಂದ ನಾಲ್ಕು ಕಪ್ ಗ್ರೀನ್ ಟಿ ಕುಡಿಯುತ್ತಾರಂತೆ.
ಮಧ್ಯಾಹ್ನದ ಊಟ: ಗ್ರಿಲ್ಡ್ ಚಿಕನ್, ಆಲೂಗಡ್ಡೆ, ಹಸಿರು ತರಕಾರಿ ಸೇವನೆ ಮತ್ತು ರಾತ್ರಿ ಸಮಯದಲ್ಲಿ ಸಿ ಫೂಡ್ ಸೇವಿಸುವುದಾಗಿ ತಿಳಿಸಿದ್ದಾರೆ. ಊಟ ಮತ್ತು ಉಪಹಾರ ನಡುವೆ ಡ್ರೈ ಫ್ರೂಟ್ಗಳನ್ನು ಸೇವಿಸುತ್ತಾರಂತೆ.
ವ್ಯಾಯಾಮ ಹೇಗಿದೆ?: ಕೊಹ್ಲಿ ಆರೋಗ್ಯಕರ ಆಹಾರದ ಜೊತೆ ವ್ಯಾಯಾಮಕ್ಕೂ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಇವರು ದಿನಕ್ಕೆ 2 ಗಂಟೆಗಳ ಕಾಲ ತಮ್ಮ ದೇಹವನ್ನು ದಂಡಿಸುತ್ತಾರೆ. ವಾರದಲ್ಲಿ ಒಂದು ದಿನ ವಿಶ್ರಾಂತಿ ಪಡೆಯುತ್ತಾರೆ. ಇದರಲ್ಲಿ ಸ್ವಿಮ್ಮಿಂಗ್ ಕೂಡ ಸೇರಿದೆ. ತಮ್ಮ ವ್ಯಾಯಾಮದ ದಿನಚರಿಯನ್ನು ಆಸಕ್ತಿದಾಯಕವಾಗಿರಿಸಲು ಹೊಸತನ್ನು ಪ್ರಯತ್ನಿಸುತ್ತಿರುತ್ತಾರಂತೆ.
ಆರಂಭದಲ್ಲಿ ಕೊಹ್ಲಿ ಕೂಡ ಜಂಕ್ಫುಡ್ ಸೇವಿಸುತ್ತಿದ್ದರು. ಆದರೆ ಇದು ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ಮಾರಕವಾಗುತ್ತದೆ ಎಂದರಿತು, ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡರು ಎಂದು ಸ್ವತಃ ಕೊಹ್ಲಿ ಈ ಹಿಂದೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
ಇದನ್ನೂ ಓದಿ: ಅಂದು ಚಹಾ ಮಾರಾಟ, ಇಂದು ಪ್ಯಾರಾಲಿಂಪಿಕ್ಸ್ನಲ್ಲಿ ಪದಕ: ಅಂಗವೈಕಲ್ಯತೆ ಮೆಟ್ಟಿನಿಂತ ಛಲದಂಕ! - Para Athlete Kapil Parmar