ETV Bharat / sports

ಟಿ-20 ವಿಶ್ವಕಪ್​: ಇಂದು ಭಾರತಕ್ಕೆ ಅಫ್ಘಾನಿಸ್ತಾನ ಸವಾಲು; ಗೆಲುವಿನ ವಿಶ್ವಾಸದಲ್ಲಿ ರೋಹಿತ್​ ಪಡೆ - India vs Afghanistan

ಟಿ-20 ವಿಶ್ವಕಪ್​ ಟೂರ್ನಿಯಲ್ಲಿ ಸೂಪರ್ ​ -8 ಹಂತದ ತನ್ನ ಮೊದಲ ಪಂದ್ಯದಲ್ಲಿ ರೋಹಿತ್​ ಶರ್ಮಾ ನೇತೃತ್ವದ ಭಾರತ ತಂಡವು ಇಂದು ಅಫ್ಘಾನಿಸ್ತಾನವನ್ನು ಎದುರಿಸಲಿದೆ.

india afghanistan match
ಭಾರತ, ಅಫ್ಘಾನಿಸ್ತಾನ ತಂಡಗಳು (ETV Bharat)
author img

By ANI

Published : Jun 20, 2024, 2:31 PM IST

ಬ್ರಿಡ್ಜ್‌ಟೌನ್ (ಬಾರ್ಬಡೋಸ್): ನ್ಯೂಯಾರ್ಕ್‌ ಪಿಚ್​ನಲ್ಲಿ ಅಜೇಯ ಗೆಲುವಿನ ಓಟ ನಡೆಸಿರುವ ಭಾರತ ತಂಡ ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​-8 ಹಂತದ ಪಂದ್ಯದಲ್ಲಿ ಇಂದು ಅಫ್ಘಾನಿಸ್ತಾನ ವಿರುದ್ಧ ಸೆಣಸಲಿದೆ. ಚುಟುಕು ವಿಶ್ವ ಸಮರವು ಸದ್ಯ ಕ್ರಿಕೆಟ್​ ದಂತಕತೆಗಳ ನಾಡು ಕೆರಿಬಿಯನ್​ಗೆ​​ ಶಿಫ್ಟ್ ಆಗಿದ್ದು, ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ ಮೈದಾನದಲ್ಲಿ ರೋಹಿತ್​ ಶರ್ಮಾ ಹಾಗೂ ರಶೀದ್​ ಖಾನ್​ ಪಡೆಗಳು ಮುಖಾಮುಖಿಯಾಗಲಿವೆ.

ಕೆನ್ಸಿಂಗ್ಟನ್ ಓವಲ್‌ನಲ್ಲಿ ರೋಹಿತ್ ಶರ್ಮಾ ಟೀಂ ಕಳೆದ ಎರಡು ದಿನಗಳಿಂದ ಕಠಿಣ ಅಭ್ಯಾಸ ನಡೆಸಿದೆ. ಸೂಪರ್​-8 ಫೈಟ್​ಗೆ ಉಭಯ ತಂಡಗಳು ಸಕಲ ರೀತಿಯಲ್ಲಿ ಸಜ್ಜುಗೊಂಡಿವೆ. ಕೆನ್ಸಿಂಗ್ಟನ್ ಓವಲ್ ತನ್ನ ಹೆಸರಿನಲ್ಲಿ ವಸಾಹತುಶಾಹಿ ಹಿನ್ನೆಲೆ ಹೊಂದಿದ್ದು, 1895ರ ಜನವರಿಯಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆದಿತ್ತು.

ಜೂನ್​ 12ರಂದು ಅಮೆರಿಕ ವಿರುದ್ಧ 7 ವಿಕೆಟ್​ ಜಯ ಸಾಧಿಸಿದ ಬಳಿಕ ದೀರ್ಘ ವಿಶ್ರಾಂತಿಯ ಬಳಿಕ ಭಾರತ ತಂಡ ಇಂದು ಕಣಕ್ಕಿಳಿಯುತ್ತಿದೆ. ಗ್ರೂಪ್​ ಹಂತದ ಮೂರು ಪಂದ್ಯಗಳನ್ನು ಗೆದ್ದ ರೋಹಿತ್​ ಪಡೆ ಆತ್ಮವಿಶ್ವಾಸದಲ್ಲಿದ್ದು, ಅಫ್ಘಾನಿಸ್ತಾನ ತಂಡದಿಂದಲೂ ಕೂಡ ತೀವ್ರ ಪೈಪೋಟಿ ನಿರೀಕ್ಷಿಸಬಹುದಾಗಿದೆ.

ರಶೀದ್ ಖಾನ್ ನೇತೃತ್ವದ ತಂಡವು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಗ್ರೂಪ್​ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿತ್ತು. ಕಿವೀಸ್​ ಪಡೆಯನ್ನು ಕೇವಲ 75 ರನ್‌ಗಳಿಗೆ ಆಲೌಟ್ ಮಾಡಿತ್ತಲ್ಲದೇ, ಟೂರ್ನಿಯಿಂದ ಹೊರಹಾಕುವಲ್ಲಿ ಭಾರಿ ಪರಿಣಾಮ ಬೀರಿತ್ತು. ಬಳಿಕ ಉಗಾಂಡ ವಿರುದ್ಧ 125 ರನ್​ ಅಂತರದ ಗೆಲುವು ಸಾಧಿಸಿತ್ತು. ನಾಯಕ ರಶೀದ್ ಖಾನ್ ಜೊತೆಗೆ ಗುರ್ಬಾಜ್​, ಮೊಹಮ್ಮದ್ ನಬಿ, ನವೀನ್ - ಉಲ್ - ಹಕ್ ಸೇರಿದಂತೆ ಹಲವರು ತಂಡಕ್ಕೆ ಆಧಾರಸ್ತಂಭವಾಗಿದ್ದಾರೆ. ಉತ್ತಮ ಸ್ಪಿನ್​ ದಾಳಿಯನ್ನು ಹೊಂದಿರುವ ಆಫ್ಘನ್ನರು ಯಾವುದೇ ಪಂದ್ಯದಲ್ಲೂ ಕೂಡ ಅಪಾಯಕಾರಿಯಾಗಿ ಪರಿಣಮಿಸಬಹುದು.

ಇನ್ನೊಂದೆಡೆ ಭಾರತ ತಂಡದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿರುವ ಸ್ಟಾರ್​ ಬ್ಯಾಟರ್​ ಮೇಲೆ ವಿರಾಟ್​ ಕೊಹ್ಲಿ ಮೇಲೆ ಅಪಾರ ನಿರೀಕ್ಷೆ ಇದೆ. ಇದುವರೆಗೂ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಬ್ಯಾಟಿಂಗ್​ನಲ್ಲಿ ಮಿಂಚಿಲ್ಲ. ಜೊತೆಗೆ ನಾಯಕ ರೋಹಿತ್​ ಶರ್ಮಾ, ಸೂರ್ಯಕುಮಾರ್ ಯಾದವ್​ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಜಡೇಜಾ ಹಾಗೂ ಶಿವಂ ದುಬೆ ಜವಾಬ್ದಾರಿಯುತ ಆಟವಾಡಬೇಕಿದೆ.

ಭಾರತ ತಂಡದಲ್ಲಿ ಬದಲಾವಣೆ?: ಕೆರಿಬಿಯನ್​ ನಾಡಿನ ಪಿಚ್​ ಪರಿಸ್ಥಿತಿಗೆ ತಕ್ಕಂತೆ ತಂಡದ ಬೌಲಿಂಗ್​ ವಲಯದಲ್ಲಿ ಕೆಲ ಬದಲಾವಣೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಈ ಬಗ್ಗೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸುಳಿವು ನೀಡಿದ್ದಾರೆ. ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. ಇದುವರೆಗೆ ಟೂರ್ನಿಯಲ್ಲಿ ಭಾರತವು ಕುಲದೀಪ್ ಹಾಗೂ ಯುಜ್ವೇಂದ್ರ ಚಹಾಲ್ ಅವರಿಗೆ ಅವಕಾಶ ನೀಡಿಲ್ಲ. ಆದರೆ ಕೆರಿಬಿಯನ್‌ನಲ್ಲಿನ ಪರಿಸ್ಥಿತಿಗಳು ವಿಭಿನ್ನವಾಗಿದ್ದು, ಅಕ್ಷರ್ ಹಾಗೂ ಜಡೇಜಾ ಜೊತೆಗೆ ಹೆಚ್ಚುವರಿ ಸ್ಪಿನ್ನರ್​ ಆಡಿಸುವ ಸಾಧ್ಯತೆಗಳಿವೆ.

ಉಭಯ ತಂಡಗಳ ಮುಖಾಮುಖಿ: ಅಫ್ಘಾನಿಸ್ತಾನ ಇದುವರೆಗೆ ಭಾರತದ ವಿರುದ್ಧ ಆಡಿದ 8 ಟಿ20 ಪಂದ್ಯಗಳಲ್ಲಿ ಒಂದರಲ್ಲೂ ಗೆದ್ದಿಲ್ಲ. 7ರಲ್ಲಿ ಸೋತಿದ್ದು, ಒಂದು ಪಂದ್ಯವು ಫಲಿತಾಂಶ ಕಂಡಿಲ್ಲ. ಇತ್ತೀಚೆಗೆ ಮುಕ್ತಾಯಗೊಂಡ ಭಾರತದ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ, ಅಫ್ಘಾನಿಸ್ತಾನವು ಭಾರತವನ್ನು ಸೋಲಿಸುವ ಸಮೀಪಕ್ಕೆ ಬಂದರೂ ಕೂಡ ಸೂಪರ್ ಓವರ್‌ನಲ್ಲಿ ವಿಫಲವಾಗಿತ್ತು. 2010ರ ಟಿ20 ವಿಶ್ವಕಪ್‌, 2012 ಮತ್ತು 2021ರ ಚುಟುಕು ಕ್ರಿಕೆಟ್​ ಟೂರ್ನಿಗಳಲ್ಲಿಯೂ ಭಾರತ ಪಾರಮ್ಯ ಮೆರೆದಿತ್ತು.

ಪಂದ್ಯಕ್ಕೆ ಮಳೆ?: ಹವಾಮಾನ ವರದಿ ಪ್ರಕಾರ, ಕೆನ್ಸಿಂಗ್ಟನ್ ಓವಲ್​ನಲ್ಲಿ ಸ್ವಲ್ಪ ಮೋಡ ಕವಿದ ವಾತಾವರಣ ಇರಲಿದೆ. ಆದರೆ ಮಳೆ ಬೀಳುವ ಸಾಧ್ಯತೆ ತುಂಬಾ ಕಡಿಮೆ ಇದೆ. ಇದು ಎರಡೂ ತಂಡಗಳು ಮತ್ತು ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ಬಾರ್ಬಡೋಸ್ ಸಮಯದ ಪ್ರಕಾರ ಅಲ್ಲಿ ಮುಂಜಾನೆಯಾಗಿದ್ದು, ತಾಪಮಾನವು 27 ಡಿಗ್ರಿ ಸೆಲ್ಸಿಯಸ್‌ನಿಂದ 31 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ.

ಪಂದ್ಯದ ಆರಂಭ: ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ

ಭಾರತದ ಸಂಭಾವ್ಯ ಹನ್ನೊಂದರ ಬಳಗ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿ.ಕೀ), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್.

ಅಫ್ಘಾನಿಸ್ತಾನ ಸಂಭಾವ್ಯ ತಂಡ: ರಹಮಾನುಲ್ಲಾ ಗುರ್ಬಾಜ್ (ವಿ.ಕೀ), ಇಬ್ರಾಹಿಂ ಝದ್ರಾನ್, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರಾನ್, ಕರೀಂ ಜನತ್, ರಶೀದ್ ಖಾನ್ (ನಾಯಕ), ನೂರ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.

ಇದನ್ನೂ ಓದಿ: ಟಿ20 ವಿಶ್ವಕಪ್‌: ಸಾಲ್ಟ್​, ಬೈರ್​ಸ್ಟೋ ಅಬ್ಬರ; ವಿಂಡೀಸ್​ ವಿರುದ್ಧ ಇಂಗ್ಲೆಂಡ್​ಗೆ ಅಮೋಘ ಗೆಲುವು - England Defeats West Indies

ETV Bharat Logo

Copyright © 2024 Ushodaya Enterprises Pvt. Ltd., All Rights Reserved.