ಹೈದರಾಬಾದ್: ಸೋಮವಾರವಷ್ಟೇ ಭಾರತದ ವಿಕೆಟ್ ಕೀಪರ್ ಮತ್ತು ಬ್ಯಾಟರ್ ವೃದ್ಧಿಮಾನ್ ಸಹಾ ಎಲ್ಲಾ ಸ್ವರೂಪದ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ರಣಜಿಯಲ್ಲಿ ಆಡುತ್ತಿರುವ ಇವರು ಇದು ತಮ್ಮ ಕ್ರಿಕೆಟ್ ವೃತ್ತಿಜೀವನದ ಕೊನೆಯ ಟೂರ್ನಿ ಎಂದು ಹೇಳಿದ್ದಾರೆ. ಸಹಾ ನಂತರ ಭಾರತದ ಮೂವರು ಆಟಗಾರರು ಶೀಘ್ರದಲ್ಲೇ ನಿವೃತ್ತಿ ಹೊಂದಲು ಸಿದ್ಧತೆ ನಡೆಸುತ್ತಿದ್ದಾರೆ. ಇದರಲ್ಲಿ ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಕೂಡ ಇದ್ದಾರೆ.
ನಿವೃತ್ತಿಗೆ ಮುಂದಾದ ಆಟಗಾರರು ಯಾರು?: ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೀರ್ಘಕಾಲದವರೆಗೆ ಹೊರಗುಳಿದಿರುವ ಅನೇಕ ಭಾರತೀಯರಿದ್ದಾರೆ. ಈ ಆಟಗಾರರು ಕೆಲವು ವರ್ಷಗಳಿಂದ ತಂಡಕ್ಕೆ ಪುನರಾಗಮನಕ್ಕಾಗಿ ಕಾದರೂ ಅವಕಾಶಗಳೇ ಸಿಕ್ಕಿಲ್ಲ. ಅಲ್ಲದೇ ವಯಸ್ಸು ಕೂಡಾ ಇದಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ಇಷ್ಟರಲ್ಲೇ ನಿವೃತ್ತಿ ಹೊಂದುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
- ಕರುಣ್ ನಾಯರ್: ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮಾಜಿ ಅನುಭವಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಬಳಿಕ ತ್ರಿಶತಕ ಬಾರಿಸಿದ ಎರಡನೇ ಬ್ಯಾಟರ್ ಎಂದರೆ ಅದು ಕರುಣ್ ನಾಯರ್. ಕರ್ನಾಟಕದವರಾದ ಇವರು ಟೆಸ್ಟ್‌ನಲ್ಲಿ ತ್ರಿಶತಕ ಗಳಿಸಿ ಭವಿಷ್ಯದ ಬ್ಯಾಟರ್ ಎಂದೇ ಸಾಬೀತುಪಡಿಸಿದ್ದರು. ಆದರೆ, ತಮ್ಮ ಈ ಫಾರ್ಮ್ ಅನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ತಂಡದಲ್ಲಿ ಹೆಚ್ಚಿನ ಅವಕಾಶಗಳೇ ದೊರೆಯಲಿಲ್ಲ. ನಾಯರ್ 2017ರಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. ಇದುವರೆಗೂ ಟೀಂ ಇಂಡಿಯಾ ಪರ ಒಟ್ಟು 6 ಟೆಸ್ಟ್ ಪಂದ್ಯಗಳನ್ನಾಡಿರುವ ನಾಯರ್ 374 ರನ್ ಗಳಿಸಿದ್ದಾರೆ. ಇದೀಗ ವಯಸ್ಸಿನ ಕಾರಣಕ್ಕೆ ನಿವೃತ್ತಿ ಪಡೆಯುವ ಚಿಂತನೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 2022ರಲ್ಲಿ Unsold ಆಗಿದ್ದ ಆರ್ಸಿಬಿ ಮಾಜಿ ಆಟಗಾರ ಅತೀ ಹೆಚ್ಚು ಮೊತ್ತಕ್ಕೆ ರಿಟೇನ್!
- ಇಶಾಂತ್ ಶರ್ಮಾ: 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ಆಟಗಾರರ ಪಟ್ಟಿಯಲ್ಲಿ ವೇಗದ ವೇಗದ ಬೌಲರ್ ಇಶಾಂತ್ ಶರ್ಮಾ ಹೆಸರೂ ಇದೆ. ಈ ದಿಗ್ಗಜ ಬೌಲರ್ 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದು, 2021ರವರೆಗೆ ಅಂದರೆ 14 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಟ ಮುಂದುವರೆಸಿದರು. ಇಶಾಂತ್ ಇದುವರೆಗೆ ಟೀಂ ಇಂಡಿಯಾ ಪರ 105 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 311 ವಿಕೆಟ್ ಪಡೆದಿದ್ದಾರೆ. ಆದರೆ 3 ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದು, ಈಗ ಅವರ ಪುನರಾಗಮನ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಬಹುಬೇಗನೆ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರ ತೆಗೆದುಕೊಳ್ಳಬಹುದು ಎಂಬುದು ಕ್ರಿಕೆಟ್ ಪಂಡಿತರ ಮಾತು. ನವೆಂಬರ್ 25, 2021ರಂದು ನ್ಯೂಜಿಲೆಂಡ್ ವಿರುದ್ಧ ಈಶಾಂತ್ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು.
- ಉಮೇಶ್ ಯಾದವ್: ವಿದರ್ಭ ಎಕ್ಸ್‌ಪ್ರೆಸ್ ಎಂದೇ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಉಮೇಶ್ ಯಾದವ್ ಕೆಲ ಸಮಯದಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಉಮೇಶ್ ಈ ಹಿಂದೆ ಟೀಂ ಇಂಡಿಯಾದ ಅತ್ಯುತ್ತಮ ವೇಗದ ಬೌಲರ್ ಆಗಿದ್ದರು. ಅಲ್ಲದೇ 2015ರ ವಿಶ್ವಕಪ್ನ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. 2023ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದ ಉಮೇಶ್ ಮತ್ತೆ ಟೀಂ ಇಂಡಿಯಾಗೆ ಮರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಉಮೇಶ್ ಇದುವರೆಗೆ 57 ಟೆಸ್ಟ್ ಪಂದ್ಯಗಳನ್ನು ಆಡಿ 170 ವಿಕೆಟ್ ಪಡೆದಿದ್ದಾರೆ.
- ಭುವನೇಶ್ವರ್ ಕುಮಾರ್: ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಕೂಡ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೊಂದುವ ಸಾಧ್ಯತೆ ಇದೆ. 2022ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ಇವರು ನಂತರ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಇದೀಗ ಭುವಿ ಕೂಡ ವಿದಾಯ ಹೇಳುವ ಸಾಧ್ಯತೆ ಗೋಚರಿಸಿದೆ.
ಇದನ್ನೂ ಓದಿ: ಹ್ಯಾಪಿ ಬರ್ತ್‌ಡೇ! ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಿಂಗ್ ಕೊಹ್ಲಿಯ ಪ್ರಮುಖ ದಾಖಲೆಗಳು ಹೀಗಿವೆ