ETV Bharat / sports

ವಿಶೇಷ ಸಾಧನೆಗೆ ಭಾರತ ತಂಡದ ಎಲ್ಲರೂ ಉತ್ಸುಕರಾಗಿದ್ದಾರೆ; ರೋಹಿತ್​ ಶರ್ಮಾ ವಿಶ್ವಾಸ - Rohit Sharma Talks on Super Eight

ಟಿ20 ವಿಶ್ವಕಪ್​ ಪಂದ್ಯಾವಳಿಯ ಸೂಪರ್​ - 8 ಹಂತದ ಪಂದ್ಯಗಳಿಗೆ ಟೀಂ ಇಂಡಿಯಾ ಸಿದ್ಧತೆ ಕುರಿತಂತೆ ನಾಯಕ ರೋಹಿತ್​ ಶರ್ಮಾ ಮಾತನಾಡಿದ್ದಾರೆ.

team india
ಭಾರತ ತಂಡ (Photo: IANS)
author img

By ANI

Published : Jun 19, 2024, 10:30 AM IST

ಬಾರ್ಬಡೋಸ್​​: ತಂಡದಲ್ಲಿ ಎಲ್ಲರೂ ಒಟ್ಟಾಗಿ ಸೇರಿಕೊಂಡು ಏನಾದರೂ ವಿಶೇಷವಾದುದನ್ನು ಸಾಧಿಸುವ ಉತ್ಸಾಹ ಹೊಂದಿದ್ದಾರೆ. ಇದು ಟಿ20 ವಿಶ್ವಕಪ್​ ಪಂದ್ಯಾವಳಿಯ ಎರಡನೇ ಹಂತವನ್ನು ಪ್ರಾರಂಭಿಸಲು ಉತ್ತಮ ಮಾರ್ಗ ಎಂದು ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್​ ಶರ್ಮಾ ಹೇಳಿದರು.

ಟಿ20 ವಿಶ್ವಕಪ್‌ ಟೂರ್ನಿಯ 1 ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್​-8 ಹಂತಕ್ಕೇರಿರುವ ಭಾರತ ತಂಡವು ಅಫ್ಘಾನಿಸ್ತಾನದ ವಿರುದ್ಧದ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸಿದೆ. ಈ ಹಿಂದಿನ ಐರ್ಲೆಂಡ್ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಇದಕ್ಕೂ ಮುನ್ನ ಪಾಕಿಸ್ತಾನ ಮತ್ತು ಯುಎಸ್​​​ ವಿರುದ್ಧ ಭಾರತವು ಪೈಪೋಟಿಯ ನಡುವೆಯೂ ಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಕೆನಡಾ ಜೊತೆಗಿನ ಮುಖಾಮುಖಿಯಲ್ಲಿ ಸರಾಗವಾಗಿ ಜಯ ದಾಖಲಿಸಿತ್ತು. ಇದೀಗ ಸೂಪರ್​​​-8ರಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ಜೊತೆ ಗುಂಪು 1ರಲ್ಲಿ ಭಾರತ ತಂಡ ಸೆಣಸಲಿದ್ದು, ಸೆಮಿಫೈನಲ್​ ತಲುಪಲು ಗೆಲುವು ಅಗತ್ಯವಾಗಿದೆ.

ಪಂದ್ಯದ ಅಭ್ಯಾಸದ ವೇಳೆ ಬಿಸಿಸಿಐ ಜೊತೆ ಮಾತನಾಡಿರುವ ರೋಹಿತ್​, "ಪ್ರತಿಯೊಬ್ಬರೂ ತಂಡದಲ್ಲಿ ಬದಲಾವಣೆ ಮೂಡಿಸಲು ಬಯಸುತ್ತಾರೆ. ನಮ್ಮ ಕೌಶಲ್ಯಾವಧಿಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರತಿಯೊಂದು ಅವಧಿಗಳಲ್ಲೂ ಸಾಧಿಸಲು ಏನಾದರೊಂದು ವಿಷಯ ಇರುತ್ತದೆ. ಮುಂದಿನ ಹಂತದಲ್ಲಿ ನಾವು ಮೊದಲ ಪಂದ್ಯವಾಡಿದ ಬಳಿಕ, ಮುಂದಿನ ಎರಡು ಪಂದ್ಯಗಳನ್ನು ಕೂಡ ಮೂರು - ನಾಲ್ಕು ದಿನಗಳಲ್ಲೇ ಆಡುತ್ತಿದ್ದೇವೆ'' ಎಂದು ಹೇಳಿದರು.

"ಇದರಿಂದ ಸ್ವಲ್ಪ ಒತ್ತಡ ಆಗಲಿದೆ. ಆದರೆ ನಾವು ಎಲ್ಲದಕ್ಕೂ ಸಿದ್ಧತೆ ನಡೆಸಿದ್ದೇವೆ. ಬಹಳಷ್ಟು ಪ್ರಯಾಣದ ಜೊತೆಗೆ ಕ್ರಿಕೆಟ್​ ಆಡಬೇಕಿದೆ. ಆದರೆ, ಅದು ಅನಿವಾರ್ಯವಾಗಿದೆ. ನಮ್ಮ ಕೌಶಲ್ಯಗಳ ಮೇಲೆ ಹೆಚ್ಚು ಗಮನಹರಿಸುತ್ತೇವೆ. ಬೇರೆ ತಂಡಗಳು ಏನು ಮಾಡುತ್ತಿದ್ದಾರೆ ಎನ್ನುವುದಕ್ಕಿಂತ, ನಮ್ಮ ತಂಡ ಏನು ಮಾಡಬೇಕು ಎಂಬುದು ಮುಖ್ಯ. ಪ್ರತಿಯೊಂದು ಅಭ್ಯಾಸದ ಅವಧಿಯನ್ನೂ ಸದ್ಬಳಕೆ ಮಾಡಿಕೊಳ್ಳುವುದು ಬಹಳ ಮುಖ್ಯ'' ಎಂದರು.

''ನಾವು ವೆಸ್ಟ್​ ಇಂಡೀಸ್​ನಲ್ಲಿ ಬಹಳಷ್ಟು ಕ್ರಿಕೆಟ್​ ಪಂದ್ಯಗಳನ್ನು ಆಡಿದ್ದೇವೆ. ಫಲಿತಾಂಶವು ನಮ್ಮ ಪರವಾಗಿರಲು ಏನು ಮಾಡಬೇಕೆಂದು ಪ್ರತಿಯೊಬ್ಬರಿಗೂ ತಿಳಿದಿದೆ. ಮುಂಬರುವ ಪಂದ್ಯಗಳಿಗಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. ಜೊತೆಗೆ ಎಲ್ಲ ಆಟಗಾರರೂ ಸಾಕಷ್ಟು ಉತ್ಸುಕರಾಗಿದ್ದಾರೆ" ಎಂದು ರೋಹಿತ್​ ವಿಶ್ವಾಸ ವ್ಯಕ್ತಪಡಿಸಿದರು.

ಭಾರತವು ಜೂನ್ 20ರಂದು ಬಾರ್ಬಡೋಸ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಮೊದಲ ಸೂಪರ್-8 ಸುತ್ತಿನ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಬಳಿಕ ಜೂನ್​ 22ರಂದು ಆಂಟಿಗುವಾದಲ್ಲಿ ಬಾಂಗ್ಲಾದೇಶ ಜೊತೆಗೆ ಹಾಗೂ ಜೂನ್​ 24ರಂದು ಸೆಂಟ್​ ಲೂಸಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಕಣಕ್ಕಿಳಿಯಲಿದೆ. ಬಳಿಕ ಸೆಮಿಫೈನಲ್​ ಹಾಗೂ ಫೈನಲ್​ ಪಂದ್ಯಗಳಿವೆ.

ಇದನ್ನೂ ಓದಿ: ನಂಬರ್​ 1​ ಬ್ಯಾಟರ್​ ಆಗಿ, ಪರಿಸ್ಥಿತಿಗೆ ತಕ್ಕಂತೆ ಆಟವಾಡುವುದು ಅಗತ್ಯ: ಸೂರ್ಯಕುಮಾರ್​ ಯಾದವ್ - Suryakumar On T20 World Cup

ETV Bharat Logo

Copyright © 2024 Ushodaya Enterprises Pvt. Ltd., All Rights Reserved.