ETV Bharat / sports

ಸ್ಟಾರ್​ ಆಟಗಾರನನ್ನು ಹೋಟೆಲ್​​ನಲ್ಲೇ ಬಿಟ್ಟು ಹೋದ ಟೀಂ ಇಂಡಿಯಾ ಬಸ್​​! - BORDER GAVASKAR TEST

ಭಾರತದ ಸ್ಟಾರ್​ ಆಟಗಾರನನ್ನು ಅಡಿಲೇಡ್​ನ ಹೋಟೆಲ್​ನಲ್ಲೇ ಬಿಟ್ಟು ಬಸ್​ ಹೊರಟು ಹೋಗಿರುವ ಘಟನೆ ನಡೆದಿದೆ.

YASHASVI JAISWAL  INDIA AUSTRALIA TEST  IND VS AUS 3RD TEST  YASHASVI JAISWAL MISSED BUS
Indian Players (IANS)
author img

By ETV Bharat Sports Team

Published : Dec 12, 2024, 1:17 PM IST

ಹೈದರಾಬಾದ್​: ಸದ್ಯ ಟೀಂ ಇಂಡಿಯಾ ಬಾರ್ಡರ್ - ಗವಾಸ್ಕರ್ ಟೆಸ್ಟ್​ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವುದು ಗೊತ್ತೇ ಇದೆ. ಐದು ಪಂದ್ಯಗಳ ಈ ಸರಣಿಯಲ್ಲಿ ಈಗಾಗಲೇ ಎರಡು ಟೆಸ್ಟ್‌ಗಳು ಮುಗಿದಿವೆ. ಉಭಯ ತಂಡಗಳು ತಲಾ ಒಂದರಲ್ಲಿ ಗೆಲುವು ಸಾಧಿಸಿದೆ. ಇದೀಗ ಮೂರನೇ ಟೆಸ್ಟ್​ಗಾಗಿ ಉಭಯ ತಂಡಗಳು ತಯಾರಿ ನಡೆಸಿವೆ.

ಶನಿವಾರ (ಡಿಸೆಂಬರ್​ 14)ರಿಂದ ಬ್ರಿಸ್ಬೇನ್‌ನಲ್ಲಿ 3ನೇ ಟೆಸ್ಟ್​ ನಡೆಯಲಿದೆ. ಇದಕ್ಕಾಗಿ ಅಡಿಲೇಡ್ ನಿಂದ ಭಾರತದ ಆಟಗಾರರು ಬ್ರಿಸ್ಬೇನ್​ಗೆ ತೆರಳಿದ್ದಾರೆ. ಆದರೆ, ಅಡಿಲೇಡ್ ನಿಂದ ಬ್ರಿಸ್ಬೇನ್​ಗೆ ಹೋಗುವ ಮುನ್ನ ಅಚ್ಚರಿಯ ಘಟನೆಯೊಂದು ನಡೆದಿದೆ. ತಡವಾಗಿ ಬಂದ ಸ್ಟಾರ್​ ಆಟಗಾರನನ್ನು ಹೋಟೆಲ್​ನಲ್ಲೇ ಬಿಟ್ಟು ಬಸ್ ವಿಮಾನ ನಿಲ್ದಾಣಕ್ಕೆ ಹೊರಟು ಹೋಗಿದೆ.

ವಾಸ್ತವವಾಗಿ, ಅಡಿಲೇಡ್​ನಲ್ಲಿ ತಂಗಿದ್ದ ಭಾರತೀಯ ಆಟಗಾರರು ಗಬ್ಬಾಗೆ ತೆರಳಲು ಹೋಟೆಲ್​ನಿಂದ ಹೊರ ಬಂದು ತಂಡಕ್ಕಾಗಿ ಕಾಯ್ದಿರಿಸಿದ್ದ ಬಸ್​ನಲ್ಲಿ ಕುಳಿತಿದ್ದರು. ಆದರೇ ಜೈಸ್ವಾಲ್​ ಹೋಟೆಲ್​ನಿಂದ ಹೊರಬರಲು ತಡ ಮಾಡಿದ್ದರು. ಎಷ್ಟು ಕಾದರೂ ಬಾರದೇ ಇದ್ದ ಕಾರಣ ಬಸ್​ ಜೈಸ್ವಾಲ್​ ಅವರನ್ನು ಬಿಟ್ಟು ವಿಮಾನ ನಿಲ್ದಾಣಕ್ಕೆ ಹೊರಟು ಹೋಯ್ತು.

ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಸೇರಿದಂತೆ ಇಡೀ ತಂಡವು ಹೋಟೆಲ್‌ ಹೊರಗೆ ಜೈಸ್ವಾಲ್​ಗಾಗಿ ಕಾಯ್ದಿದ್ದರು. 20 ನಿಮಿಷಗಳು ಕಳೆದರೂ ಬಾರದೇ ಇದ್ದ ಕಾರಣ ಬಸ್​ ಹೊರಟು ಹೋಯ್ತು. ಬಳಿಕ ತಂಡದ ಮ್ಯಾನೇಜ್‌ಮೆಂಟ್ ಜೈಸ್ವಾಲ್​ಗೆ ವಿಶೇಷ ಕಾರಿನ ವ್ಯವಸ್ಥೆ ಮಾಡಿದೆ. ಹಿರಿಯ ಭದ್ರತಾ ಅಧಿಕಾರಿಯೊಂದಿಗೆ ಜೈಸ್ವಾಲ್​ ಕಾರಿನಲ್ಲಿ ಪ್ರಯಾಣಿಸಿ ವಿಮಾನ ನಿಲ್ದಾಣಕ್ಕೆ ತಲುಪಿ ತಂಡವನ್ನು ಸೇರಿಕೊಂಡರು. ಈ ವಿಚಾರವಾಗಿ ನಾಯಕ ರೋಹಿತ್​​ ಶರ್ಮಾ ಕೂಡ ಜೈಸ್ವಾಲ್​ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿಯಾಗಿದೆ.

ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕಾಂಗರೂ ಪಡೆ 10 ವಿಕೆಟ್‌ಗಳಿಂದ ಭಾರತದ ವಿರುದ್ಧ ಜಯ ಸಾಧಿಸಿತು. ಇದಕ್ಕೂ ಮುನ್ನ ಪರ್ತ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 295 ರನ್‌ಗಳ ಜಯ ಸಾಧಿಸಿತ್ತು. ಇದೀಗ ಎರಡೂ ತಂಡಗಳು 1-1 ಗೆಲುವಿನೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸಿವೆ.

ಆಸೀಸ್​ ವಿರುದ್ಧ ಜೈಸ್ವಾಲ್​: ಪರ್ತ್​ನಲ್ಲಿ ನಡೆದಿದ್ದ ಮೊದಲ ಟೆಸ್ಟ್​ನ ಪ್ರಥಮ ಇನ್ನಿಂಗ್ಸ್​ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದ ಜೈಸ್ವಾಲ್​ ಎರಡನೇ ಇನ್ನಿಂಗ್ಸ್​ನಲ್ಲಿ ಶತಕ ಸಮೇತ 161 ರನ್​ಗಳನ್ನು ಚಚ್ಚಿದ್ದರು. ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಮತ್ತೆ ಶೂನ್ಯಕ್ಕೆ ನಿರ್ಗಮಿಸಿದ್ದ ಜೈಸ್ವಾಲ್​, ಎರಡನೇ ಇನ್ನಿಂಗ್ಸ್​ನಲ್ಲೂ ಕೇವಲ 27 ರನ್​ ಕಲೆ ಹಾಕಿ ನಿರ್ಗಮಿಸಿದ್ದರು. ಇದೀಗ ಮೂರನೇ ಟೆಸ್ಟ್​ನಲ್ಲಿ ಕಮ್​ಬ್ಯಾಕ್​ ಮಾಡಲು ನೆಟ್ಸ್​ನಲ್ಲಿ ಅಭ್ಯಾಸ ನಡೆಸಿದ್ದಾರೆ.

ಇದನ್ನೂ ಓದಿ: ಬದಲಾಗದ ಹಳೇ ಚಾಳಿ: ಈ ಬಾರಿ ಆತ್ಮೀಯ ಸ್ನೇಹಿತನ ಜೊತೆಗೆ ಜಗಳಕ್ಕಿಳಿದ ಸ್ಟಾರ್​ ಕ್ರಿಕೆಟರ್​..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.