ETV Bharat / sports

ಭಾರತೀಯ ಬ್ಯಾಟರ್​ಗಳ ಐಸಿಸಿ ಶ್ರೇಯಾಂಕ ಹೆಚ್ಚಿಸಿದ ಜಿಂಬಾಬ್ವೆ ಸರಣಿ: ಯಶಸ್ವಿ ಜೈಸ್ವಾಲ್​ ಟಾಪ್​ 6, ಸೂರ್ಯ ಟಾಪ್​ 2 - T20 rankings list - T20 RANKINGS LIST

ಐಸಿಸಿಯು ಬುಧವಾರ ರ್‍ಯಾಂ​ಕಿಂಗ್​ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದ ಯಶಸ್ವಿ ಜೈಸ್ವಾಲ್​ ಬ್ಯಾಟಿಂಗ್​ ಪಟ್ಟಿಯಲ್ಲಿ 4 ಸ್ಥಾನ ಏರಿಕೆ ಕಂಡಿದ್ದಾರೆ. ಹಾರ್ದಿಕ್​ ಪಾಂಡ್ಯ 4 ಸ್ಥಾನ ಇಳಿದಿದ್ದಾರೆ.

ಭಾರತೀಯ ಬ್ಯಾಟರ್​ಗಳ ಐಸಿಸಿ ಶ್ರೇಯಾಂಕ ಹೆಚ್ಚಿಸಿದ ಜಿಂಬಾಬ್ವೆ ಸರಣಿ
ಭಾರತೀಯ ಬ್ಯಾಟರ್​ಗಳ ಐಸಿಸಿ ಶ್ರೇಯಾಂಕ ಹೆಚ್ಚಿಸಿದ ಜಿಂಬಾಬ್ವೆ ಸರಣಿ (ETV Bharat)
author img

By ETV Bharat Karnataka Team

Published : Jul 17, 2024, 9:27 PM IST

ಹೈದರಾಬಾದ್: ಟಿ-20 ವಿಶ್ವಕಪ್​ನಲ್ಲಿ ಆಡಲು ಅವಕಾಶ ಸಿಗದೇ ಬರೀ ಬೆಂಚ್​ ಕಾದಿದ್ದ ಯಶಸ್ವಿ ಜೈಸ್ವಾಲ್​ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿದ್ದರು. ಇದು ಅವರ ವೃತ್ತಿಜೀವನದ ಶ್ರೇಯಾಂಕದಲ್ಲಿ ಮಹತ್ತರ ಬದಲಾವಣೆ ತಂದಿದೆ. ಐಸಿಸಿ ಬುಧವಾರ ಬಿಡುಗಡೆ ಮಾಡಿದ ರ್‍ಯಾಂಕಿಂಗ್​​ ಪಟ್ಟಿಯಲ್ಲಿ 4 ಸ್ಥಾನ ಜಿಗಿತ ಕಂಡು ವೃತ್ತಿಜೀವನದ ಅತ್ಯುತ್ತಮ ಹಂತಕ್ಕೆ ತಲುಪಿದ್ದಾರೆ.

ಟಿ-20 ಬ್ಯಾಟರ್​ಗಳ ಪಟ್ಟಿಯಲ್ಲಿ ಅಗ್ರ 10 ರಲ್ಲಿ ಮೂವರು ಭಾರತೀಯ ಬ್ಯಾಟರ್​ಗಳಿದ್ದಾರೆ. ಅದರಲ್ಲಿ 2ನೇ ಸ್ಥಾನದಲ್ಲಿ ಸೂರ್ಯಕುಮಾರ್​​ ಇದ್ದಾರೆ. ಟಾಪ್​ 10 ರಲ್ಲಿದ್ದ ಯಶಸ್ವಿ ಜೈಸ್ವಾಲ್ ದಿಢೀರ್​ ಏರಿಕೆ ಕಂಡು ಟಾಪ್​ 6ನೇ ಸ್ಥಾನಕ್ಕೆ ಬಂದಿದ್ದಾರೆ. ಅಂದರೆ ನಾಲ್ಕು ಕ್ರಮಾಂಕ ಜಿಗಿತ ಕಂಡಿದ್ದಾರೆ. ಇನ್ನೊಬ್ಬ ಬ್ಯಾಟರ್ ಋತುರಾಜ್​ ಗಾಯಕ್ವಾಡ್​​ ಒಂದು ಸ್ಥಾನ ಕುಸಿದು ಟಾಪ್​ 8 ರಲ್ಲಿದ್ದಾರೆ. ಜೈಸ್ವಾಲ್​ 743 ರೇಟಿಂಗ್ಸ್​, ಸೂರ್ಯಕುಮಾರ್​ 797, ಗಾಯಕ್ವಾಡ್​ 684 ರೇಟಿಂಗ್ ಹೊಂದಿದ್ದಾರೆ. ಇನ್ನು ಆಸ್ಟ್ರೇಲಿಯಾದ ಟ್ರಾವಿಸ್​ ಹೆಡ್​ ವಿಶ್ವ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಜಿಂಬಾಬ್ವೆ ಸರಣಿಗೆ ತಂಡದ ಹಂಗಾಮಿ ನಾಯಕತ್ವ ವಹಿಸಿಕೊಂಡಿದ್ದ ಶುಭ್​ಮನ್​​ ಗಿಲ್ ಕೂಡ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. 36 ಸ್ಥಾನಗಳನ್ನು ದಾಟಿ ಬಂದಿರುವ ಆಟಗಾರ 37 ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 42 ನೇ ಶ್ರೇಯಾಂಕದಲ್ಲಿರವ ರೋಹಿತ್ ಶರ್ಮಾ ಮತ್ತು 51 ನೇ ರ್‍ಯಾಂಕ್​​ನಲ್ಲಿರುವ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

4 ಸ್ಥಾನ ಕುಸಿದ ಹಾರ್ದಿಕ್​: ಆಲ್​ರೌಂಡರ್​ಗಳ ಪಟ್ಟಿಯಲ್ಲಿ ವಿಶ್ವಕಪ್​ ಸ್ಟಾರ್ ಹಾರ್ದಿಕ್​ ಪಾಂಡ್ಯ ಕುಸಿತ ಕಂಡಿದ್ದಾರೆ. ಟಾಪ್​ 2 ನೇ ಸ್ಥಾನದಲ್ಲಿದ್ದ ಭಾರತದ ತಾರಾ ಆಲ್​ರೌಂಡರ್​ 4 ಸ್ಥಾನ ಇಳಿದು 6ನೇ ಕ್ರಮಾಂಕ ಪಡೆದಿದ್ದಾರೆ. ಜಿಂಬಾಬ್ವೆ ತಂಡದ ನಾಯಕ ಸಿಕಂದರ್​ ರಾಜಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಒಂದು ಸ್ಥಾನ ಮೇಲೇರಿ ಅಗ್ರ 3 ರಲ್ಲಿದ್ದಾರೆ. ಇನ್ನು ಪಟ್ಟಿಯಲ್ಲಿ ಶ್ರೀಲಂಕಾದ ವನಿಂದು ಹಸರಂಗ ನಂಬರ್​ 1, ಆಸ್ಟ್ರೇಲಿಯಾದ ಮಾರ್ಕಸ್​ ಸ್ಟೊಯಿನೀಸ್​ 2ನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್​ ವಿಭಾಗದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಟಿ20ಯ ನಂ.1 ಬೌಲರ್​ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತದ ಪೈಕಿ ಟಾಪ್​ 10 ರಲ್ಲಿದ್ದ ಅಕ್ಷರ್​ ಪಟೇಲ್​ 4 ಸ್ಥಾನ ಕುಸಿದು 14 ರಲ್ಲಿದ್ದಾರೆ.

ಇದನ್ನೂ ಓದಿ: ಟಿ20 ತಂಡಕ್ಕೆ ಸೂರ್ಯ, ಏಕದಿನಕ್ಕೆ ರಾಹುಲ್​ - ಗಿಲ್​ಗೆ ನಾಯಕತ್ವ: ಕೋಚ್​ ಗಂಭೀರ್​ ದೂರಾಲೋಚನೆ ಏನು? - Team India Seletion

ETV Bharat Logo

Copyright © 2024 Ushodaya Enterprises Pvt. Ltd., All Rights Reserved.