ETV Bharat / sports

ವಿಶ್ವ ಚಾಂಪಿಯನ್​ ಭಾರತಕ್ಕೆ ಅಭಿನಂದನೆಗಳ ಅಭ್ಯಂಜನ: ಯಾರು, ಏನಂದ್ರು? - T20 World Cup

author img

By ETV Bharat Karnataka Team

Published : Jun 30, 2024, 7:59 AM IST

Updated : Jun 30, 2024, 9:26 AM IST

ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಟಿ-20 ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮಿದ ಭಾರತ ತಂಡವನ್ನು ದೇಶವೇ ಗುಣಗಾನ ಮಾಡುತ್ತಿದೆ.

ಟೀಮ್​ ಇಂಡಿಯಾ ಸಾಧನೆಗೆ ಗಣ್ಯರ ಸೆಲ್ಯೂಟ್​
ಟೀಂ ಇಂಡಿಯಾ ಆಟಗಾರರು (ETV Bharat)

ಹೈದರಾಬಾದ್​: ಅದು 2007. ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ನಾಯಕತ್ವದಲ್ಲಿ ಭಾರತ ತಂಡ ಟಿ20 ವಿಶ್ವಕಪ್​ ಗೆದ್ದಿತ್ತು. ಅದಾದ ಬಳಿಕ ಸತತ 17 ವರ್ಷಗಳಿಂದ ಪ್ರಶಸ್ತಿ ಬರ ಅನುಭವಿಸಿದ್ದ ತಂಡ ಇದೀಗ​ ರೋಹಿತ್​ ಶರ್ಮಾ ನಾಯಕತ್ವದಲ್ಲಿ ಮತ್ತೆ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಅಜೇಯವಾಗಿ ವಿಶ್ವಕಪ್​ ಜಯಿಸಿದ ತಂಡವನ್ನು ದೇಶವೇ ಹಾಡಿ ಹೊಗಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಸೇರಿದಂತೆ ಗಣ್ಯಾತಿಗಣ್ಯರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಅದ್ಭುತ ಗೆಲುವು- ಪ್ರಧಾನಿ ಮೋದಿ ಮೆಚ್ಚುಗೆ: ಚಾಂಪಿಯನ್ ಟೀಂ​ ಇಂಡಿಯಾ ವಿಶ್ವಕಪ್ ಅನ್ನು ತನ್ನದೇ ಶೈಲಿಯಲ್ಲಿ ಮನೆಗೆ ತರುತ್ತಿದೆ. "ಸಾಧನೆಗೆ ಹೆಮ್ಮೆಪಡುತ್ತೇವೆ" ಎಂದು ಪ್ರಧಾನಿ ನರೇಂದ್ರ ಮೋದಿ 'ಎಕ್ಸ್​' ಖಾತೆಯಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.

"ನಮ್ಮ ತಂಡ ವಿಶ್ವಕಪ್ ಗೆಲ್ಲುವ ಜೊತೆಗೆ, ಕೋಟ್ಯಂತರ ಭಾರತೀಯರ ಹೃದಯವನ್ನೂ ಗೆದ್ದಿತು. ಒಂದು ಪಂದ್ಯವನ್ನೂ ಸೋಲದೆ ವಿಶ್ವಕಪ್​ ಗೆದ್ದಿದ್ದು ಸಣ್ಣ ಸಾಧನೆಯಲ್ಲ. ಅದ್ಭುತ ಗೆಲುವಿಗಾಗಿ ಅಭಿನಂದನೆಗಳು" ಎಂದು ಪ್ರಧಾನಿ ಹೇಳಿದ್ದಾರೆ.

ಸೋಲೆಂಬ ಮಾತೇ ಇಲ್ಲ- ರಾಷ್ಟ್ರಪತಿ ಮುರ್ಮು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತ ತಂಡವನ್ನು ಅಭಿನಂದಿಸಿದ್ದಾರೆ. 'ಸೋಲೆಂಬ ಮಾತೇ ಇಲ್ಲ' ಎಂಬ ಮನೋಭಾವದಲ್ಲಿ ತಂಡ ವಿಶ್ವಕಪ್ ಗೆದ್ದಿದೆ. ಕಠಿಣ ಪರಿಸ್ಥಿತಿಗಳಲ್ಲಿ ಪಂದ್ಯಾವಳಿಯುದ್ದಕ್ಕೂ ತಂಡ ಅತ್ಯುತ್ತಮ ಕೌಶಲ್ಯ ಪ್ರದರ್ಶಿಸಿತು. ಹೆಮ್ಮೆ ಇದೆ" ಎಂದು ತಿಳಿಸಿದ್ದಾರೆ.

ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ರೋಹಿತ್ ಶರ್ಮಾ ನಾಯಕತ್ವವನ್ನು ಶ್ಲಾಘಿಸಿದ್ದಾರೆ. 'ಅದ್ಭುತ ವಿಶ್ವಕಪ್ ವಿಜಯ ಮತ್ತು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾಗೆ ಅಭಿನಂದನೆಗಳು. ಸೂರ್ಯ, ಎಂತಹ ಅದ್ಭುತ ಕ್ಯಾಚ್ ಹಿಡಿದಿರಿ. ರೋಹಿತ್, ಈ ಗೆಲುವು ನಿಮ್ಮ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ರಾಹುಲ್ ದ್ರಾವಿಡ್​ ನಿಮ್ಮ ಮಾರ್ಗದರ್ಶನವನ್ನು ಟೀಮ್ ಇಂಡಿಯಾ ಕಳೆದುಕೊಳ್ಳಲಿದೆ' ಎಂದು ಬರೆದುಕೊಂಡಿದ್ದಾರೆ.

ವಾಟ್ ಎ ಮ್ಯಾಚ್, ವಾಟ್ ಎ ಕ್ಯಾಚ್- ಜೈ ಶಂಕರ್: ವಿದೇಶಾಂಗ ಸಚಿವ ಎಸ್.ಜೈಶಂಕರ್ ತಂಡವನ್ನು ಅಭಿನಂದಿಸಿ ಸಂದೇಶವನ್ನು ಹಂಚಿಕೊಂಡಿದ್ದಾರೆ. 'ವಾಟ್ ಎ ಮ್ಯಾಚ್, ವಾಟ್ ಎ ಕ್ಯಾಚ್. 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಬರ ಕೊನೆಗೊಂಡಿತು. 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯ ನಂತರ ಮೊದಲ ಐಸಿಸಿ ಪ್ರಶಸ್ತಿಯಾಗಿದೆ. ಅಭಿನಂದನೆಗಳು' ಎಂದಿದ್ದಾರೆ.

ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ- ಖರ್ಗೆ: 'ರೋಚಕ ಫೈನಲ್​ನಲ್ಲಿ ಟೀಮ್​ ಇಂಡಿಯಾ ಗೆಲುವು ಸಾಧಿಸಿದೆ. ತಂಡದ ಪ್ರತಿಭೆ ಮತ್ತು ಸಮರ್ಪಣೆಗೆ ಅಭಿನಂದನೆಗಳು. ವಿರಾಟ್ ಕೊಹ್ಲಿ, ಅಕ್ಷರ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್ ಪಂದ್ಯದಲ್ಲಿ ಮಿಂಚಿದರು. ಅದ್ಭುತ ವಿಜಯದ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುತ್ತಾನೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: ಟಿ20 ವರ್ಲ್ಡ್​ಕಪ್​ ಚಾಂಪಿಯನ್​ ಆಗಿ ಇತಿಹಾಸ ಬರೆದ ಟೀಂ ಇಂಡಿಯಾ! - INDIA CREATES HISTORY

Last Updated : Jun 30, 2024, 9:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.