ಆ್ಯಂಟಿಗುವಾ (ವೆಸ್ಟ್ಇಂಡೀಸ್): ಟಿ20 ವಿಶ್ವಕಪ್ 2024ರ ಸೂಪರ್- 8 ಹಂತದ ಎರಡನೇ ಪಂದ್ಯದಲ್ಲಿ ಭಾರತ ಇಂದು ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಬಾಂಗ್ಲಾ ಬೌಲಿಂಗ್ ಆಯ್ದುಕೊಂಡಿದೆ. ಪಂದ್ಯ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯ ಗೆಲ್ಲುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಡಲು ಭಾರತ ಸಜ್ಜಾಗಿದ್ದರೆ, ಸೆಮೀಸ್ ರೇಸ್ನಲ್ಲಿ ಉಳಿಯಲು ಬಾಂಗ್ಲಾಕ್ಕೆ ಗೆಲುವು ಅನಿವಾರ್ಯವಾಗಿದೆ.
ಟೂರ್ನಿಯಲ್ಲಿ ಇಲ್ಲಿಯವರೆಗೆ ಸೋಲರಿಯದ ತಂಡವಾಗಿ ಭಾರತ ಮುನ್ನುಗ್ಗುತ್ತಿದೆ. ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶವು ಆಸ್ಟ್ರೇಲಿಯಾ ವಿರುದ್ಧ ಸೋತಿದೆ. ಹಾಗಂತ ತಂಡವನ್ನು ಹಗುರವಾಗಿ ಅಂದಾಜು ಮಾಡಲಾಗದು. ವಿಶ್ವಕಪ್ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲೂ ಭಾರತದ ಎದುರು ಇದೇ ತಂಡ ಸೋಲು ಕಂಡಿತ್ತು. ಇದಕ್ಕೆ ಮುಯ್ಯಿ ತೀರಿಸಿಕೊಳ್ಳಲು ಹೋರಾಟ ನಡೆಸಲಿದೆ.
ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಅದೇ ಆಟಗಾರರನ್ನು ಕಣಕ್ಕಿಳಿಸಿದೆ. ಬಾಂಗ್ಲಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಹೆಚ್ಚುವರಿ ಬ್ಯಾಟರ್ ಆಗಿ ಜೇಕರ್ ಅಲಿ ಒಳಬಂದಿದ್ದರೆ, ಟಸ್ಕಿನ್ ಅಹ್ಮದ್ರನ್ನು ಕೈಬಿಡಲಾಗಿದೆ.
ತಂಡಗಳು ಇಂತಿವೆ- ಬಾಂಗ್ಲಾದೇಶ: ತಂಜಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ(ನಾಯಕ), ತೌಹಿದ್ ಹೃದಯೋಯ್, ಶಕೀಬ್ ಅಲ್ ಹಸನ್, ಮಹಮದುಲ್ಲಾ, ಜೇಕರ್ ಅಲಿ, ರಿಶಾದ್ ಹೊಸೈನ್, ಮೆಹದಿ ಹಸನ್, ತಂಝಿಮ್ ಹಸನ್ ಸಾಕಿಬ್, ಮುಸ್ತಾಫಿಜರ್ ರೆಹಮಾನ್.
ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಅರ್ಶದೀಪ್ ಸಿಂಗ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.
ಇದನ್ನೂ ಓದಿ: ಇಂದು ಭಾರತ - ಬಾಂಗ್ಲಾ ಕದನ: ಹೆಡ್ ಟು ಹೆಡ್ ದಾಖಲೆ, ಪಿಚ್ ರಿಪೋರ್ಟ್ ಹೀಗಿದೆ! - T20 World Cup 2024