ETV Bharat / sports

ನಾನು ಕಷ್ಟಗಳಿಗೆ ಹೆದರಲ್ಲ, ಎದುರಿಸಿ ಗೆಲ್ಲುವೆ: ಹಾರ್ದಿಕ್​ ಪಾಂಡ್ಯ - Hardik Pandya - HARDIK PANDYA

ಭಾರತ ಕ್ರಿಕೆಟ್​ ತಂಡದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ತಾವು ಎದುರಿಸುತ್ತಿರುವ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ.

ಹಾರ್ದಿಕ್​ ಪಾಂಡ್ಯ
ಹಾರ್ದಿಕ್​ ಪಾಂಡ್ಯ (ETV Bharat)
author img

By ETV Bharat Karnataka Team

Published : Jun 2, 2024, 9:58 PM IST

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಆಲ್​​ರೌಂಡರ್ ಹಾರ್ದಿಕ್​ ಪಾಂಡ್ಯ ನಾನಾ ವಿಚಾರಗಳಿಗಾಗಿ ಸುದ್ದಿಯಲ್ಲಿದ್ದಾರೆ. ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾದ ಸುದ್ದಿಗಳು ಹರಿದಾಡುತ್ತಿದ್ದು, ಇತ್ತ ವೃತ್ತಿ ಬದುಕಿನಲ್ಲೂ ಪ್ರದರ್ಶನದ ವಿಚಾರವಾಗಿ ಟೀಕೆ ಎದುರಿಸುತ್ತಿದ್ದಾರೆ. ಇದೆಲ್ಲದರ ನಡುವೆಯೂ ಭಾರತ ವಿಶ್ವಕಪ್​​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ನಾಯಕರಾದ ಬಳಿಕ ಮಾಜಿ ನಾಯಕ ರೋಹಿತ್​ ಶರ್ಮಾ ಅವರ ಅಭಿಮಾನಿಗಳಿಂದ ಭಾರೀ ಟ್ರೋಲ್​ಗೆ ಒಳಗಾಗಿದ್ದರು. ವೈಯಕ್ತಿಕ ಆಟದಲ್ಲೂ ಕಳಪೆ ಪ್ರದರ್ಶನ ನೀಡಿ ಮತ್ತಷ್ಟು ಟೀಕೆಗೆ ಆಹಾರವಾದರು. ಆದರೆ, ಟಿ20 ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 23 ಎಸೆತಗಳಲ್ಲಿ 40 ರನ್ ಗಳಿಸುವ ಮೂಲಕ ವಿಶ್ವಕಪ್​ಗೆ ತಾವು ರೆಡಿ ಎಂದು ಸೂಚನೆ ನೀಡಿದ್ದಾರೆ.

ಸಂಕಷ್ಟಗಳನ್ನು ಎದುರಿಸುವೆ: ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ, ಸಂಕಷ್ಟಗಳು ಬಂದಾಗ ಅದನ್ನು ನಾವು ಧೈರ್ಯದಿಂದ ಎದುರಿಸಬೇಕು. ಕೆಲವೊಮ್ಮೆ ಕಷ್ಟಕರವಾದ ಸಂದರ್ಭಗಳೂ ಬರುತ್ತವೆ. ನಾವು ಅಲ್ಲಿಂದ ಕಾಲ್ಕಿತ್ತರೆ ನಾವು ಬಯಸಿದ್ದು ಸಿಗುವುದಿಲ್ಲ. ಫಲಿತಾಂಶ ನಮ್ಮ ವಿರುದ್ಧವೇ ಇರುತ್ತದೆ ಎಂದು ತತ್ವಜ್ಞಾನಿಯಂತೆ ಹೇಳಿದರು.

ಜೀವನದಲ್ಲಿ ಕೆಟ್ಟ, ಒಳ್ಳೆಯ ದಿನಗಳು ಬರುತ್ತವೆ. ಈ ಹಿಂದೆಯೂ ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಈಗಲೂ ಎದುರಿಸುತ್ತೇನೆ. ಪ್ರಚೋದನೆಗೆ ನಾವು ಪ್ರತಿಕ್ರಿಯಿಸಲೇಬೇಕು. ಈಗಿನ ಕೆಟ್ಟ ಗಳಿಗೆಯಿಂದ ನಾನು ಹೊರಬರುತ್ತೇನೆ. ಒಳ್ಳೆಯ ಸಮಯ ಮತ್ತೆ ಬರುತ್ತದೆ ಎಂದರು.

ಕಷ್ಟಗಳಿಗೆ ಬೆನ್ನು ಕೊಡಲ್ಲ: ಜೀವನದಲ್ಲಿ ಕಷ್ಟಗಳು ಎದುರಾದಾಗ ನಾನು ಬೆನ್ನು ತಿರುಗಿಸಿ ಓಡಿ ಹೋಗುವುದಿಲ್ಲ. ಅವುಗಳನ್ನು ಎದುರಿಸುತ್ತೇನೆ. ನಾನು ಯಶಸ್ಸು ಕಂಡಾಗ ಹಿಗ್ಗದಿವನಲ್ಲ. ಏನೇ ಒಳ್ಳೆಯ ಕೆಲಸ ಮಾಡಿದರೂ ತಕ್ಷಣ ಅದನ್ನು ಅಲ್ಲಿಗೆ ಬಿಟ್ಟು ಮುಂದೆ ಸಾಗುತ್ತೇನೆ. ಕಷ್ಟದ ಸಮಯದಲ್ಲೂ ಅಷ್ಟೇ. ನಾನು ಅದರಿಂದ ತಪ್ಪಿಸಿಕೊಳ್ಳುವುದಿಲ್ಲ. ಎಲ್ಲವನ್ನೂ ಧೈರ್ಯದಿಂದ ಸವಾಲು ಮಾಡುವೆ ಎಂದು ಹೇಳಿದರು.

ಇನ್ನೂ, ಭಾರತ ತಂಡ ಜೂನ್ 5 ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ಪಂದ್ಯವಾಡುವ ಮೂಲಕ ವಿಶ್ವಕಪ್​ ಅಭಿಯಾನವನ್ನು ಆರಂಭಿಸಲಿದೆ. ಹಾರ್ದಿಕ್ ಪಾಂಡ್ಯ ತಂಡದ ಪ್ರಮುಖ ಆಲ್‌ರೌಂಡ್ ಆಟಗಾರನಾಗಿದ್ದು, ಉತ್ತಮ ಪ್ರದರ್ಶನ ನೀಡುವ ಹೆಚ್ಚಿನ ಹೊಣೆಗಾರಿಕೆ ಹೊಂದಿದ್ದಾರೆ.

ಇದನ್ನೂ ಓದಿ: ಡಿವೋರ್ಸ್ ವದಂತಿ ಮಧ್ಯೆ ಹಾರ್ದಿಕ್ ಪಾಂಡ್ಯ ಪತ್ನಿಯಿಂದ ರಹಸ್ಯ ಪೋಸ್ಟ್‌! ಇದರ ಅರ್ಥವೇನು ಹೇಳುವಿರಾ? - Hardik Natasha Divorce Rumors

ETV Bharat Logo

Copyright © 2024 Ushodaya Enterprises Pvt. Ltd., All Rights Reserved.