ETV Bharat / sports

ಟಿ20 ವಿಶ್ವಕಪ್: ಆಸೀಸ್​ ವಿರುದ್ದ ಸೋತ ಸ್ಕಾಟ್ಲೆಂಡ್ ಔಟ್​; ಸೂಪರ್​-8ಗೆ ಇಂಗ್ಲೆಂಡ್​​ ಎಂಟ್ರಿ - Australia Defeats Scotland - AUSTRALIA DEFEATS SCOTLAND

ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಸ್ಕಾಟ್ಲೆಂಡ್ ವಿರುದ್ಧ 5 ವಿಕೆಟ್​ಗಳ ಜಯಭೇರಿ ಬಾರಿಸಿದೆ. ಸ್ಕಾಟ್ಲೆಂಡ್ ಸೋಲಿನೊಂದಿಗೆ​ ಇಂಗ್ಲೆಂಡ್​ ಸೂಪರ್​-8 ಹಂತ ತಲುಪಿದೆ.

AUSTRALIA DEFEATS SCOTLAND
ಆಸ್ಟ್ರೇಲಿಯಾ, ಸ್ಕಾಟ್ಲೆಂಡ್ (AP)
author img

By ETV Bharat Karnataka Team

Published : Jun 16, 2024, 10:20 AM IST

ಕ್ಯಾಸ್ಟ್ರೀಸ್(ಸೇಂಟ್ ಲೂಸಿಯಾ): ಇಲ್ಲಿನ ಡರೆನ್ ಸಮಿ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 5 ವಿಕೆಟ್​ಗಳ ಜಯ ದಾಖಲಿಸಿದೆ. ಈ ಸೋಲಿನೊಂದಿಗೆ ಮುಂದಿನ ಹಂತಕ್ಕೇರುವ ಸ್ಕಾಟ್ಲೆಂಡ್ ಕನಸು ನನಸಾಗಲಿಲ್ಲ. ಇನ್ನೊಂದೆಡೆ, ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಸೂಪರ್​-8ಕ್ಕೆ ಪ್ರವೇಶ ಪಡೆಯಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡುವ ಅವಕಾಶ ಪಡೆದ ಸ್ಕಾಟ್ಲೆಂಡ್ ಬ್ರ್ಯಾಂಡನ್ ಮೆಕ್‌ಮುಲ್ಲೆನ್ ಅಬ್ಬರದ ಅರ್ಧಶತಕ (60, 34 ಎಸೆತ) ಹಾಗೂ ಜಾರ್ಜ್ ಮನ್ಸೆ 35 ಹಾಗೂ ನಾಯಕ ರಿಚಿ ಬೆರಿಂಗ್ಟನ್ 42 ರನ್​ಗಳ ನೆರವಿನಿಂದ 5 ವಿಕೆಟ್​ಗೆ 180 ರನ್​ ಬಾರಿಸಿತ್ತು. ವಿಕೆಟ್​ ಕೀಪರ್​ ಮ್ಯಾಥ್ಯೂ ಕ್ರಾಸ್​ 18 ರನ್​ ಕಾಣಿಕೆ ನೀಡಿದರು. ಅಂತಿಮ ಓವರ್​ಗಳಲ್ಲಿ ಹೆಚ್ಚಿನ ರನ್​ ಗಳಿಕೆ ಮಾಡುವಲ್ಲಿ ವಿಫಲವಾದರೂ ಕೂಡ ಸ್ಕಾಟ್ಲೆಂಡ್ ಬೃಹತ್​ ಮೊತ್ತ ದಾಖಲಿಸಿತ್ತು.

ಈಗಾಗಲೇ ಮುಂದಿನ ಹಂತ ಪ್ರವೇಶಿಸಿರುವ ಆಸೀಸ್​ ಪರ ಮಾಕ್ಸ್​ವೆಲ್​ 44 ರನ್​ ನೀಡಿ 2 ವಿಕೆಟ್​ ಪಡೆದರೆ, ಅಗರ್​, ಜಂಪಾ ಹಾಗೂ ನಾಥನ್​ ಎಲ್ಲಿಸ್​ ತಲಾ ಒಂದು ವಿಕೆಟ್​ ಕಿತ್ತರು.

ಬಳಿಕ 181 ರನ್​ ಗುರಿ ಬೆನ್ನಟ್ಟಿದ ಕಾಂಗರೂಪಡೆ ನಿರೀಕ್ಷಿತ ಆರಂಭ ಪಡೆಯಲಿಲ್ಲ. 32 ರನ್​ ಆಗುವಷ್ಟರಲ್ಲಿ 2 ವಿಕೆಟ್​ ಉರುಳಿದ್ದವು. ಆರಂಭಿಕ ಡೆವಿಡ್​ ವಾರ್ನರ್​1 ಹಾಗೂ ನಾಯಕ ಮಿಚೆಲ್​ ಮಾರ್ಷ್​ 8 ರನ್​ಗೆ ಔಟಾಗಿದ್ದರು. ಬಳಿಕ ಒಂದಾದ ಟ್ರಾವಿಸ್​ ಹೆಡ್​ ಹಾಗೂ ಗ್ಲೆನ್​ ಮ್ಯಾಕ್ಸ್​ವೆಲ್​ (11) ಮೂರನೇ ವಿಕೆಟ್​ಗೆ 26 ರನ್​ ಸೇರಿಸಿದರು. ಈ ಹಂತದಲ್ಲಿ ಮಾರ್ಕ್​ ವಾಟ್​ ಎಸೆತದಲ್ಲಿ ಮ್ಯಾಕ್ಸ್​ವೆಲ್​ ಬೌಲ್ಡ್​ ಆದರು.

ತದನಂತರ ಕ್ರೀಸ್​ಗಿಳಿದ ಆಲ್​ರೌಂಡರ್​ ಮಾರ್ಕಸ್​ ಸ್ಟೋಯ್ನಿಸ್​ ಸ್ಕಾಟ್ಲೆಂಡ್​ ಬೌಲರ್​ಗಳನ್ನು ದಂಡಿಸಿ ಆಸೀಸ್​ನತ್ತ ಪಂದ್ಯ ವಾಲುವಂತೆ ಮಾಡಿದರು. ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದ ಮಾರ್ಕಸ್​ 29 ಎಸೆತಗಳಲ್ಲಿ 59 ರನ್​ ಸಿಡಿಸಿದರು. ಇನ್ನೊಂದೆಡೆ, ನಿಧಾನಗತಿಯ ಬ್ಯಾಟಿಂಗ್ ತೋರಿದ ಹೆಡ್​ 49 ಬಾಲ್​ಗಳಲ್ಲಿ 68 ರನ್​ ಗಳಿಸಿ, ಸ್ಟೋಯ್ನಿಸ್​ಗೆ ತಕ್ಕ ಸಾಥ್​ ನೀಡಿದರು.

ಇದನ್ನೂ ಓದಿ: 'ತಂಡವೊಂದು ಮೂರು ಬಾಗಿಲು': ಪಾಕಿಸ್ತಾನ ತಂಡದಲ್ಲಿ ಗುಂಪು ಗುದ್ದಾಟವೇ ವಿಶ್ವಕಪ್​ ಸೋಲಿಗೆ ಕಾರಣ? - Pakistan cricket team

ಒಂದು ಹಂತದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 5 ಓವರ್​ಗಳಲ್ಲಿ 60 ರನ್​ ಅಗತ್ಯವಿತ್ತು. ಆದರೆ, ಸಾಫ್ಟಾನ್​ ಶರಿಫ್​ ಎಸೆದ 16ನೇ ಓವರ್​ನಲ್ಲಿ ಮೂರು ಸಿಕ್ಸರ್​​ ಸಿಡಿಸಿದ ಹೆಡ್​ ಗೆಲುವನ್ನು ಸುಲಭವಾಗಿಸಿದರು. ಬಳಿಕ ಸ್ಟೋಯ್ನಿಸ್​ ಕೂಡ ಒಂದು ಬೌಂಡರಿ ಬಾರಿಸಿ ಅರ್ಧಶತಕ ತಲುಪಿದರು. ಆ ಓವರ್​ನಲ್ಲಿ ಆಸೀಸ್​ಗೆ 24 ರನ್​ಗಳು ಹರಿಬಂದವು.

ಹೆಡ್​ ವಿಕೆಟ್​ ಪತನದ ಬಳಿಕ ಬಂದ ಟಿಮ್ ಡೆವಿಡ್ (24) ಬಿರುಸಿನ ಆಟದ ಮೂಲಕ ಅಗತ್ಯ ರನ್​ ಕಲೆಹಾಕಿದರು. ಅಂತಿಮವಾಗಿ ಆಸ್ಟ್ರೇಲಿಯಾ 19.4 ಓವರ್​ಗಳಲ್ಲಿ 186 ರನ್​ ಬಾರಿಸಿ ಗೆಲುವಿನ ಗೆರೆ ದಾಟಿತು. ಗ್ರೂಪ್​ ಹಂತದ ಎಲ್ಲ ಪಂದ್ಯಗಳನ್ನೂ ಜಯಿಸಿ ಸೂಪರ್​-8ಕ್ಕೆ ಭರ್ಜರಿ ಎಂಟ್ರಿ ಕೊಟ್ಟಿತು.

ಸೂಪರ್​-8 ಹಂತಕ್ಕೆ ಇಂಗ್ಲೆಂಡ್​: ಸ್ಕಾಟ್ಲೆಂಡ್​ ಸೋಲಿನೊಂದಿಗೆ ಇಂಗ್ಲೆಂಡ್​ಗೆ ಸೂಪರ್​-8 ಹಾದಿ ತೆರೆಯಿತು. ಬಿ ಗ್ರೂಪ್​ನಲ್ಲಿ ತಲಾ ಎರಡು ಪಂದ್ಯಗಳನ್ನು ಗೆದ್ದು 5 ಅಂಕ ಹೊಂದಿದ್ದ ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡ್​ ನಡುವೆ ಪೈಪೋಟಿ ಇತ್ತು. ಇಂದಿನ ಪಂದ್ಯವನ್ನು ಗೆದ್ದರೆ, ಸ್ಕಾಟ್ಲೆಂಡ್​ 7 ಅಂಕಗಳೊಂದಿಗೆ ಮುಂದಿನ ಹಂತಕ್ಕೇರುತ್ತಿತ್ತು. ಸಮಾನ 5 ಅಂಕಗಳನ್ನೂ ಹೊಂದಿದ್ದರೂ ಕೂಡ ರನ್​ರೇಟ್​ ಲೆಕ್ಕಾಚಾರದಲ್ಲಿ ಸ್ಕಾಟ್ಲೆಂಡ್ (+1.255)​ ಹಿಂದಿಕ್ಕಿದ ಇಂಗ್ಲೆಂಡ್ (+3.611)​ ಸೂಪರ್​-8 ಹಂತ ಪ್ರವೇಶಿಸಿದೆ. ಟೂರ್ನಿಯಲ್ಲಿ ಅದ್ಭುತ ಆಟ ತೋರಿದ ಸ್ಕಾಟ್ಲೆಂಡ್​ ನಿರಾಸೆ ಅನುಭವಿಸಿತು.

ಇದನ್ನೂ ಓದಿ: ಮಳೆಯಿಂದ ಭಾರತ-ಕೆನಡಾ ಪಂದ್ಯ ರದ್ದು; ಅಫ್ಘಾನಿಸ್ತಾನ್ ಜೊತೆ ಸೂಪರ್ 8 ಫೈಟ್‌ಗೆ ರೆಡಿಯಾದ ಟೀಂ ಇಂಡಿಯಾ - India vs Canada Match Abandoned

ETV Bharat Logo

Copyright © 2025 Ushodaya Enterprises Pvt. Ltd., All Rights Reserved.