ETV Bharat / sports

ದುಲೀಪ್​ ಟ್ರೋಫಿಯಿಂದ ಸೂರ್ಯಕುಮಾರ್​ ಯಾದವ್​ ಔಟ್​: ಕಾರಣ ಇಷ್ಟೇ! - Suryakumar Yadav

ಭಾರತ ತಂಡದ ಸ್ಟಾರ್​​ ಬ್ಯಾಟರ್ ಸೂರ್ಯಕುಮಾರ್​ ಯಾದವ್​ ದುಲೀಪ್​ ಟ್ರೋಫಿಯ ಆರಂಭಿಕ ಪಂದ್ಯದಿಂದ ಹೊರಗುಳಿಯಲಿದ್ದಾರೆ. ​

ಸೂರ್ಯಕುಮಾರ್​ ಯಾದವ್
ಸೂರ್ಯಕುಮಾರ್​ ಯಾದವ್ ((ANI))
author img

By ETV Bharat Sports Team

Published : Sep 3, 2024, 3:10 PM IST

ನವದೆಹಲಿ: ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹಾಗೂ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸೆಪ್ಟೆಂಬರ್ 5ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಯ ಆರಂಭಿಕ ಪಂದ್ಯದಿದಂದ ಹೊರಗುಳಿಯಲಿದ್ದಾರೆ. ಈ ವಿಷಯವನ್ನು ಅವರ ಆಪ್ತರೊಬ್ಬರು ಈಟಿವಿ ಭಾರತಕ್ಕೆ ಖಚಿತಪಡಿಸಿದ್ದಾರೆ.

ಕೊಯಮತ್ತೂರಿನಲ್ಲಿ ನಡೆದ ಬುಚ್ಚಿ ಬಾಬು ಟೂರ್ನಮೆಂಟ್‌ನಲ್ಲಿ ಮುಂಬೈ ಪರ ಆಡಿದ್ದ ಬಲಗೈ ಬ್ಯಾಟ್ಸ್‌ಮನ್ ಸೂರ್ಯಕುಮಾರ್, ಕೈ ಗಾಯಕ್ಕೆ ತುತ್ತಾದ ಕಾರಣ ಫೈನಲ್​ ಪಂದ್ಯದಿಂದ ಹೊರಗುಳಿದಿದ್ದರು. ದುಲೀಪ್ ಟ್ರೋಫಿಯಲ್ಲಿ, ಭಾರತ ಸಿ ತಂಡದಲ್ಲಿ ಸ್ಥಾನ ಪಡೆದಿರುವ ಸೂರ್ಯ ಕುಮಾರ್​ ಭಾರತ ಡಿ ವಿರುದ್ಧ ಅನಂತಪುರದಲ್ಲಿ ಸೆಪ್ಟೆಂಬರ್ 5 ರಿಂ 8 ವರೆಗೆ ನಡೆಯಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಆಡಬೇಕಿತ್ತು. ಆದರೆ,ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸೂರ್ಯಕುಮಾರ್​ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡಮಿಯಲ್ಲಿರುವುದಾಗಿ ವರದಿ ಆಗಿದೆ.

ಸೆ.5 ರಂದೇ ಮತ್ತೊಂದು ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಪಂದ್ಯದಲ್ಲಿ ಭಾರತ ಎ ಮತ್ತು ಭಾರತ ಬಿ ತಂಡಗಳು ಮುಖಾಮುಖಿಯಾಗಲಿವೆ. ದುಲೀಪ್​ ಟ್ರೋಫಿಯೂ ಸೆಪ್ಟೆಂಬರ್ 19 ರಿಂದ ಚೆನ್ನೈನಲ್ಲಿ ಪ್ರಾರಂಭವಾಗುವ ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್ ಸರಣಿಗಾಗಿ ಆಯ್ಕೆಯಾಗಲು ಬಯಸಿರುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಇದೊಂದು ಉತ್ತಮ ವೇದಿಕೆಯಾಗಿದೆ.

33 ವರ್ಷದ ಈ ಸ್ಪೋಟಕ ಬ್ಯಾಟರ್​ ಇದೂವರೆಗೆ 1 ಟೆಸ್ಟ್, 37 ಏಕದಿನ ಮತ್ತು 71 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಏಕದಿನದಲ್ಲಿ 773 ಮತ್ತು ಟಿ20ಯಲ್ಲಿ 2,432 ರನ್ ಗಳಿಸಿದ್ದಾರೆ. 82 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಸೂರ್ಯ 14 ಶತಕ ಮತ್ತು 29 ಅರ್ಧ ಶತಕಗಳೊಂದಿಗೆ 5,628 ರನ್ ಗಳಿಸಿದ್ದಾರೆ. 2024ರ ಟಿ20 ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದ ಸೂರ್ಯಕುಮಾರ್​ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಅವರ ಅದ್ಭುತ ಕ್ಯಾಚ್ ಪಂದ್ಯದ ಗೆಲುವಿಗೆ ಕಾರಣವಾಗಿತ್ತು.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿ: ಟೀಂ ಇಂಡಿಯಾ ಜೊತೆ ಭದ್ರತಾ ತಂಡವೂ ಪಾಕಿಸ್ತಾನಕ್ಕೆ ಪ್ರಯಾಣ? - Champions Trophy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.