ETV Bharat / sports

ಟೀಂ ಇಂಡಿಯಾ ಟಿ-20 ನಾಯಕತ್ವ ಕುತೂಹಲ; ಹಾರ್ದಿಕ್​ ಪಾಂಡ್ಯ ಕೈ ತಪ್ಪಿದ್ರೆ ಯಾರಿಗೆ ಚಾನ್ಸ್? - Team India T20 Captaincy

2024ರ ಟಿ-20 ವಿಶ್ವಕಪ್​ ವಿಜೇತ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ನಿವೃತ್ತಿಯಿಂದ ತೆರವಾದ ನಾಯಕತ್ವಕ್ಕೆ ಪೈಪೋಟಿ ಶುರುವಾಗಿದೆ. ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ಅವರಿಗೆ ತಂಡದ ಮುಂದಾಳತ್ವ ಒಲಿಯುವ ಸಾಧ್ಯತೆ ಹೆಚ್ಚಂತೆ.!

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ (IANS)
author img

By PTI

Published : Jul 17, 2024, 8:26 AM IST

ನವದೆಹಲಿ: ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅಲಭ್ಯವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮತ್ತೋರ್ವ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಟಿ-20 ತಂಡದ ನಾಯಕತ್ವ ವಹಿಸುವ ನಿರೀಕ್ಷೆ ಇದೆ. ಈ ಬಗ್ಗೆ ಶೀಘ್ರವೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ವರದಿಯಾಗಿದೆ.

ಭಾರತ ಕಳೆದ ತಿಂಗಳು 2024ರ ಟಿ-20 ವಿಶ್ವಕಪ್​ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ತಂಡದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಚುಟುಕು ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಟೆಸ್ಟ್​, ಏಕದಿನ ಹಾಗೂ ಟಿ-20 ಒಳಗೊಂಡ ಮೂರು ಮಾದರಿಗಳಲ್ಲಿ ತಂಡವನ್ನು ರೋಹಿತ್​ ಮುನ್ನಡೆಸುತ್ತಿದ್ದರು. ಈಗ ಟಿ-20ಯಿಂದ ಅವರು ವಿದಾಯ ಪಡೆದಿರುವುದರಿಂದ ನಾಯಕತ್ವದ ಪಾತ್ರವೂ ತೆರವಾಗಿದೆ.

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ (IANS)

ಇದೀಗ ಟೀಂ ಇಂಡಿಯಾ ಟಿ-20 ಹಾಗೂ ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲು ಸಜ್ಜಾಗಿದೆ. ಜುಲೈ 27ರಿಂದ 30ರವರೆಗೆ 3 ಟಿ-20 ಹಾಗೂ ಅಗಸ್ಟ್​ 2ರಿಂದ 7ರವರೆಗೆ 3 ಏಕದಿನ ಪಂದ್ಯಗಳು ನಿಗದಿಯಾಗಿವೆ. ಟಿ-20ಯಲ್ಲಿ ತಂಡದ ಮುಂದಾಳತ್ವವನ್ನು ಹಾರ್ದಿಕ್​ ಪಾಂಡ್ಯ ಅವರಿಗೆ ವಹಿಸುವ ನಿರೀಕ್ಷೆ ಹೆಚ್ಚಾಗಿತ್ತು. ಅಲ್ಲದೇ, ತಂಡದ ನೂತನ ಮುಖ್ಯ​ ಕೋಚ್​ ಗೌತಮ್​ ಗಂಭೀರ್ ಹಾಗೂ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್​ ಅವರು ಹಾರ್ದಿಕ್​ ಅವರೊಂದಿಗೆ ಮಾತನಾಡಿ, ದೀರ್ಘಾವಧಿಯವರಿಗೂ ಅವರಿಗೆ ಅವಕಾಶ ಇರುವ ಬಗ್ಗೆ ವಿವರಿಸಿದ್ದರು. ಆದರೆ, ದ್ವೀಪರಾಷ್ಟ್ರದಲ್ಲಿ ನಡೆಯುವ ಏಕದಿನ ಸರಣಿಯಿಂದ ಹಾರ್ದಿಕ್ ತಮ್ಮ ವೈಯಕ್ತಿಕ ಕಾರಣಕ್ಕಾಗಿ​ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಸೂರ್ಯಗೆ ಕ್ಯಾಪ್ಟನ್ಸಿ ಚಾನ್ಸ್​: ಮತ್ತೊಂದೆಡೆ, ಲಂಕಾ ವಿರುದ್ಧದ ಸರಣಿಗೆ ಕೆಲವೇ ದಿನಗಳಲ್ಲಿ ತಂಡವನ್ನು ಪ್ರಕಟಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ನಡುವೆ ಹಾರ್ದಿಕ್ ಅಲಭ್ಯವಾಗುವ ವಿಷಯ ವರದಿಯಾಗಿದೆ. ಹೀಗಾಗಿಯೇ ಟಿ-20ಯಲ್ಲಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಗೆ ನಾಯಕತ್ವ ವಹಿಸುವ ಸಾಧ್ಯತೆ ಹೆಚ್ಚು.

ಕಳೆದ ವರ್ಷ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ 8 ಟಿ-20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಅನುಭವ '360 ಡಿಗ್ರಿ ಹಿಟ್​​ ಬ್ಯಾಟರ್' ಖ್ಯಾತಿಯ ಸೂರ್ಯ ಅವರಿಗಿದೆ. ಆದ್ದರಿಂದ ಕೋಚ್​ ಗೌತಮ್​ ಗಂಭೀರ್, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್​ ಅವರ ಆಯ್ಕೆಯು ಸೂರ್ಯ ಅವರೇ ಆಗಿದ್ದಾರೆ ಎಂದೂ ವರದಿಗಳು ಹೇಳುತ್ತಿವೆ.

ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್ (IANS)

''ಟಿ-20ಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಹಾರ್ದಿಕ್​ ಪಾಂಡ್ಯ ಉಪನಾಯಕರಾಗಿದ್ದರು. ಲಂಕಾದ ಟಿ-20 ಸರಣಿಗೂ ಸಂಪೂರ್ಣ ಫಿಟ್​ ಆಗಿದ್ದು, ಲಭ್ಯವಾಗಲಿದ್ದಾರೆ. ಅವರೇ ತಂಡವನ್ನು ಮುನ್ನಡೆಸಬೇಕಿದೆ. ಆದರೆ, ಸೂರ್ಯ ಕುಮಾರ್​ ಯಾದವ್​ ಕೇವಲ ಶ್ರೀಲಂಕಾ ಸರಣಿಗೆ ಮಾತ್ರವಲ್ಲದೇ, 2026ರ ಟಿ-20 ವಿಶ್ವಕಪ್​ವರೆಗೂ ತಂಡದ ಸಂಭಾವ್ಯ ನಾಯಕರಾಗಿದ್ದಾರೆ'' ಎಂದು ಬಿಸಿಸಿಐ ಉನ್ನತ ಮೂಲಗಳು ತಿಳಿಸಿವೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಇದೇ ವೇಳೆ, ''ಹಾರ್ದಿಕ್ ಪಾಂಡ್ಯ ತುಂಬಾ ವೈಯಕ್ತಿಕ ಕಾರಣಕ್ಕಾಗಿ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಮಾಧ್ಯಮಗಳಲ್ಲಿ ಕೇಳಿಬರುತ್ತಿರುವಂತೆ ಅವರಿಗೆ ಯಾವುದೇ ಫಿಟ್‌ನೆಸ್ ಸಮಸ್ಯೆ ಇಲ್ಲ'' ಎಂದು ಮೂಲಗಳು ಸ್ಪಷ್ಪಪಡಿಸಿವೆ.

ಇದನ್ನೂ ಓದಿ: ಶ್ರೀಲಂಕಾ ಪ್ರವಾಸ: ಪಲ್ಲಕೆಲೆಯಲ್ಲಿ ಟಿ-20, ಕೊಲಂಬೊ ಏಕದಿನ ಸರಣಿ ಆಡಲಿರುವ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.