ETV Bharat / sports

ಯಶ್​, ಪಾಂಡ್ಯ ಮಾರಕ ದಾಳಿಗೆ ನಲುಗಿದ ಗುಜರಾತ್​; ಲಖನೌ ವಿರುದ್ಧ 33 ರನ್​ ಸೋಲು - LSG beat Gujurat Titans - LSG BEAT GUJURAT TITANS

ಕನ್ನಡಿಗ ಕೆಎಲ್​ ರಾಹುಲ್​ ನೇತೃತ್ವದ ಲಖನೌ ಸೂಪರ್​ಜೈಂಟ್ಸ್​ ಸತತ ಮೂರು ಗೆಲುವು ದಾಖಲಿಸಿ ಪಾಯಿಂಟ್​ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು.

ಗುಜರಾತ್​ಗೆ ಲಖನೌ ವಿರುದ್ಧ 33 ರನ್​ ಸೋಲು
ಗುಜರಾತ್​ಗೆ ಲಖನೌ ವಿರುದ್ಧ 33 ರನ್​ ಸೋಲು
author img

By PTI

Published : Apr 8, 2024, 7:25 AM IST

ಲಖನೌ: ಯುವ ವೇಗಿ ಯಶ್​ ಠಾಕೂರ್​ ಬಿರುಗಾಳಿ ಬೌಲಿಂಗ್​, ಆಲ್​ರೌಂಡರ್​ ಮಾರ್ಕಸ್ ಸ್ಟೊಯಿನೀಸ್​ ಅವರ ಅರ್ಧಶತಕದ ಬಲದಿಂದ ಗುಜರಾತ್​ ವಿರುದ್ಧ ಇಲ್ಲಿ ನಡೆದ ಪಂದ್ಯದಲ್ಲಿ ಲಖನೌ ಸೂಪರ್​ಜೈಂಟ್ಸ್​ 33 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಸತತ ಮೂರು ಮ್ಯಾಚ್​ಗಳಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಏರಿಕೆ ಕಂಡಿದೆ.

ಏಕನಾ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್​ ಮಾಡಿದ ಲಖನೌ ಆರಂಭಿಕ ವೈಫಲ್ಯದಿಂದಾಗಿ 5 ವಿಕೆಟ್​ಗೆ 163 ರನ್​ ಗಳಿಸಿತು. ಈಗಿನ ಟಿ20 ಕ್ರಿಕೆಟ್​ನಲ್ಲಿ ದೊಡ್ಡ ಮೊತ್ತವಲ್ಲದ ಗುರಿಯನ್ನು ಬೆನ್ನತ್ತಿದ ಗುಜರಾತ್​ ಉತ್ತಮ ಆರಂಭ ಕಂಡರೂ ನಂತರ ಕುಸಿದು ಸೋಲಿನ ಸುಳಿಗೆ ಸಿಲುಕಿತು.

'ಯಶ' ಕಂಡ ಪಾಂಡ್ಯ: ಗುಜರಾತ್​ ಪರವಾಗಿ ಆರಂಭಿಕರಾದ ಸಾಯಿ ಸುದರ್ಶನ್​ 31, ನಾಯಕ ಶುಭ್​ಮನ್​ ಗಿಲ್ 19, ರಾಹುಲ್​ ತೆವಾಟಿಯಾ 30, ವಿಜಯ್​ ಶಂಕರ್​ 17 ರನ್​ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್​ಗಳು ವೈಫಲ್ಯ ಕಂಡರು. ಯಶ್​ ಠಾಕೂರ್​ ಮತ್ತು ಕೃನಾಲ್​ ಪಾಂಡ್ಯ ಮಾರಕ ದಾಳಿಗೆ ಸಿಲುಕಿದ ಗಿಲ್​ ಪಡೆ ಯಾವ ಹಂತದಲ್ಲೂ ಚೇತರಿಕೆ ಕಾಣಲಿಲ್ಲ. 18.5 ಓವರ್​ಗಳಲ್ಲಿ 130 ರನ್​ಗೆ ಆಲೌಟ್​ ಆಗುವ ಮೂಲಕ ಸತತ ಎರಡನೇ ಸೋಲು ಕಂಡಿತು.

3.5 ಓವರ್​ ಎಸೆದ ಯಶ್​ ಠಾಕೂರ್​ 30 ರನ್​ ನೀಡಿ 5 ವಿಕೆಟ್​ ಗೊಂಚಲು ಪಡೆದರು. ಇದು ಟೂರ್ನಿಯಲ್ಲಿ ದಾಖಲಾದ ಮೊದಲ 5 ವಿಕೆಟ್​ ಆಗಿದೆ. ಬಿಗುವಿನ ದಾಳಿ ಮಾಡಿದ ಸ್ಪಿನ್ನರ್​ ಕೃನಾಲ್​ ಪಾಂಡ್ಯ ತಮ್ಮ ಪಾಲಿನ 4 ಓವರ್​ನಲ್ಲಿ 11 ರನ್​ ನೀಡಿ 3 ವಿಕೆಟ್ ಪಡೆದು ಗುಜರಾತ್​ಗೆ ಮಾರಕವಾದರು. ನವೀನ್​ ಉಲ್​ ಹಕ್​, ರವಿ ಬಿಷ್ಣೋಯಿ ತಲಾ 1 ವಿಕೆಟ್​ ಪಡೆದರು.

ಸ್ಟೊಯಿನೀಸ್​ ಅರ್ಧಶತಕ: ಇದಕ್ಕೂ ಮೊದಲು ಬ್ಯಾಟ್​ ಮಾಡಿದ ಲಖನೌಗೆ ಮಾರ್ಕಸ್ ಸ್ಟೊಯಿನೀಸ್​ ನೆರವಾದರು. 18 ರನ್​ಗೆ 2 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಕಣಕ್ಕಿಳಿದ ಆಸ್ಟ್ರೇಲಿಯನ್​ ಆಲ್​ರೌಂಡರ್​ ಭರ್ಜರಿ ಅರ್ಧಶತಕ ದಾಖಲಿಸಿದರು. 43 ಎಸೆತಗಳಲ್ಲಿ 58 ರನ್ ಗಳಿಸಿದ ಅವರ ಇನಿಂಗ್ಸ್​ನಲ್ಲಿ 4 ಬೌಂಡರಿ, 2 ಸಿಕ್ಸರ್​ಗಳು ಇದ್ದವು. ಇತ್ತ ವಿಕೆಟ್​ ಬಿದ್ದ ಬಳಿಕ ನಿಧಾನಗತಿಯಲ್ಲಿ ಇನಿಂಗ್ಸ್​ ಕಟ್ಟಿದ ನಾಯಕ ಕೆಎಲ್​ ರಾಹುಲ್​ 31 ಎಸೆತಗಳಲ್ಲಿ 33 ರನ್​ ಮಾಡಿದರು. ಕೊನೆಯಲ್ಲಿ ಮಿಂಚಿದ ಪೂನರ್​ 32, ಆಯುಷ್​ ಬದೌನಿ 20 ರನ್​ ಗಳಿಸಿದರು. ಗುಜರಾತ್​ ಪರವಾಗಿ ಉಮೇಶ್​ ಯಾದವ್​ ದರ್ಶನ್​ ನಲ್ಕಂಡೆ ತಲಾ 2 ವಿಕೆಟ್​ ಪಡೆದರು.

ಇದನ್ನೂ ಓದಿ: IPL: ಸ್ಟೋಯ್ನಿಸ್ ಫಿಫ್ಟಿ; ಗುಜರಾತ್​ಗೆ 164 ರನ್​ ಟಾರ್ಗೆಟ್​ ಕೊಟ್ಟ ರಾಹುಲ್​ ಬಳಗ - LSG vs GT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.