ಟ್ರಿನಿಡಾಡ್: ಟಿ-20 ವಿಶ್ವಕಪ್ ಸೆಮಿಫೈನಲ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ 9 ವಿಕೆಟ್ಗಳ ಗೆಲುವು ಸಾಧಿಸಿ ಚೊಚ್ಚಲ ಬಾರಿಗೆ ಐಸಿಸಿ ಆಯೋಜಿತ ಟೂರ್ನಿಯಲ್ಲಿ ಫೈನಲ್ಗೆ ಪ್ರವೇಶ ಪಡೆದಿದೆ.
South Africa are through to their first Men's #T20WorldCup Final 🙌 pic.twitter.com/KwPr74MUJc
— ICC (@ICC) June 27, 2024
ಟ್ರಿನಿಡಾಡ್ನ ಬ್ರಿಯನ್ ಲಾರಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ನೀಡಿದ್ದ 56 ರನ್ಗಳ ಗುರಿಯನ್ನು ಬೆನ್ನಟ್ಟಿದ ಹರಿಣಪಡೆ 1 ವಿಕೆಟ್ ಕಳೆದುಕೊಂಡು 11.1 ಓವರ್ ಬಾಕಿ ಇರುವಂತೆಯೆ ಗೆಲುವಿನ ದಡ ಸೇರಿತು. ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ (5), ಹೆನ್ರಿಕ್ಸ್ (29*), ಐಡೆನ್ ಮಾಕ್ರಮ್ (23*) ರನ್ ಗಳಿಸಿದರು. ಅಫ್ಘಾನ್ ಪರ ಫಾರೂಖಿ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಅಫ್ಘಾನ್, ಹರಿಣಪಡೆಯ ಬೌಲಿಂಗ್ ದಾಳಿಗೆ ಸಿಲುಕಿ 11.5 ಓವರ್ಗಳಲ್ಲಿ 56 ರನ್ಗಳಿಗೆ ಸರ್ವಪತನ ಕಂಡಿತು. ತಂಡದ ಪರ ಒಮರ್ಝಾಯಿ (10) ಹೊರತುಪಡಿಸಿ ಯಾವೊಬ್ಬ ಬ್ಯಾಟರ್ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಒಟ್ಟು ಮೂವರು ಬ್ಯಾಟರ್ಗಳು ಗುರ್ಬಾಜ್, ಮೊಹ್ಮದ್ ನಬಿ, ನೂರ್ ಅಹ್ಮದ್ ಖಾತೆ ತೆರೆಯದೇ ಶೂನ್ಯಕ್ಕೆ ನಿರ್ಗಮಿಸಿದರೇ, ಉಳಿದ 7 ಜನ ಝದ್ರಾನ್ (2), ಗುಲ್ಬುದ್ದಿನ್ ನೈಬ್ (9), ಖರೋಟೆ (2), ಜನತ್ (8), ರಾಶೀದ್ ಖಾನ್ (8), ನವೀನ್ ಉಲ್-ಹಖ್ (2), ಫಾರೂಖಿ (2*) ಎರಡಂಕಿ ದಾಟಲು ಸಾಧ್ಯವಾಗದೇ ಪೆವಿಲಿಯನ್ ಪರೇಡ್ ಮಾಡಿದರು.
ಬೌಲಿಂಗ್ನಲ್ಲಿ ದಕ್ಷಿಣ ಆಫ್ರಿಕಾ ಪರ ಮಾರ್ಕೋ ಜಾನ್ಸನ್ ಮತ್ತು ತಬ್ರೀಜ್ ಶಮ್ಸಿ ತಲಾ 3, ನೋಕಿಯಾ, ರಬಾಡ ತಲಾ 2 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ತಲುಪಿದೆ.