ETV Bharat / sports

ಒಲಿಂಪಿಕ್​​ ಕುಸ್ತಿ ಪಂದ್ಯಗಳಲ್ಲಿ ಭಾರತ ಈವರೆಗೆ ಗೆದ್ದ ಪದಕಗಳೆಷ್ಟು ಗೊತ್ತಾ? - Paris Olympics 2024 - PARIS OLYMPICS 2024

ಕಳೆದ 20 ವರ್ಷಗಳಿಂದ ಒಲಿಂಪಿಕ್​ ಕುಸ್ತಿ ಪಂದ್ಯಗಳಲ್ಲಿ ಭಾರತ ಅಮೋಘ ಪ್ರದರ್ಶನ ತೋರಿ ಪದಕಗಳನ್ನು ಗೆಲ್ಲುತ್ತಿದೆ.

ಇತರ ದೇಶಗಳ ಕುಸ್ತಿಪಟುಗಳೊಂದಿಗೆ ಭಾರತೀಯ ಕುಸ್ತಿಪಟು ಅಮನ್ ಸೆಹ್ರಾವತ್
ಇತರ ದೇಶಗಳ ಕುಸ್ತಿಪಟುಗಳೊಂದಿಗೆ ಭಾರತೀಯ ಕುಸ್ತಿಪಟು ಅಮನ್ ಸೆಹ್ರಾವತ್ (IANS Photos)
author img

By ETV Bharat Sports Team

Published : Aug 10, 2024, 8:28 PM IST

ನವದೆಹಲಿ: ಕಳೆದ 20 ವರ್ಷಗಳಿಂದ ಒಲಿಂಪಿಕ್​​ ಕುಸ್ತಿ ಪಂದ್ಯಗಳಲ್ಲಿ ಭಾರತ ಅಮೋಘ ಪ್ರದರ್ಶನ ತೋರಿ ಒಂದಲ್ಲ ಒಂದು ಪದಕಗಳನ್ನು ಗೆಲ್ಲುತ್ತಿದೆ. 2008ರ ಬೀಜಿಂಗ್ ಒಲಿಂಪಿಕ್​ನಿಂದ ಆರಂಭವಾದ ಭಾರತದ ಪದಕ ಬೇಟೆ ಪ್ಯಾರಿಸ್​ ಒಲಿಂಪಿಕ್​ವರೆಗೂ ಮುಂದುವರೆದಿದೆ.

ಈ ಬಾರಿಯ ಪ್ಯಾರಿಸ್ ಒಲಿಂಪಿಕ್​ನ ಪುರುಷರ 57 ಕೆಜಿ ಫ್ರೀಸ್ಟೈಲ್ ಕುಸ್ತಿ ಪಂದ್ಯದಲ್ಲಿ ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದು ಒಲಿಂಪಿಕ್ ಇತಿಹಾಸದಲ್ಲಿ ಕುಸ್ತಿಯಲ್ಲಿ ಭಾರತ ಗೆದ್ದ 8ನೇ ಪದಕವಾಗಿದೆ.

ಕುಸ್ತಿಯು ಒಲಿಂಪಿಕ್​ನಲ್ಲಿ ಭಾರತದ ಎರಡನೇ ಅತ್ಯಂತ ಯಶಸ್ವಿ ಕ್ರೀಡೆಯಾಗಿದೆ. ಒಲಿಂಪಿಕ್​ನಲ್ಲಿ ಭಾರತ ಹಾಕಿಯಲ್ಲಿ ಗರಿಷ್ಠ 13 ಪದಕಗಳನ್ನು ಗೆದ್ದಿದೆ. ಅದರ ಬಳಿಕ ಕುಸ್ತಿಯಲ್ಲಿ ನಿರಂತರವಾಗಿ ಪದಕಗಳನ್ನು ಗೆಲ್ಲುತ್ತ ಸಾಗಿದೆ. ಇಲ್ಲಿಯವರೆಗೆ ಒಲಿಂಪಿಕ್​ನಲ್ಲಿ ಭಾರತವು ಕುಸ್ತಿಯಲ್ಲಿ ಯಾವ ಕುಸ್ತಿಪಟು ಯಾವ ಪದಕ ಗೆದ್ದಿದ್ದಾರೆ ಎಂಬುದರ ಬಗ್ಗೆ ತಿಳಿಯೋಣ.

ಮೊದಲ ಪದಕ: 1952ರಲ್ಲಿ ಹೆಲ್ಸಿಂಕಿಯಲ್ಲಿ ಕೆಡಿ ಜಾಧವ್ ಅವರು ಒಲಿಂಪಿಕ್​ ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಪದಕವನ್ನು ಗೆದ್ದಿದ್ದರು. ಅಮನ್ ಸೆಹ್ರಾವತ್ ಅವರಂತೆ ಕೆಡಿ ಜಾಧವ್ ಕೂಡ 57 ಕೆಜಿ ತೂಕ ವಿಭಾಗದಲ್ಲಿ ಪದಕ ಗೆದ್ದಿದ್ದರು. ಇದಾದ ಬಳಿಕ ಭಾರತ ಮುಂದಿನ ಪದಕಕ್ಕಾಗಿ 56 ವರ್ಷಗಳ ಸುದೀರ್ಘ ಕಾಲ ಕಾಯಬೇಕಾಯಿತು.

ನಂತರ 2008ರ ಬೀಜಿಂಗ್ ಒಲಿಂಪಿಕ್​ನಲ್ಲಿ ಸುಶೀಲ್ ಕುಮಾರ್ 66 ಕೆಜಿ ಪುರುಷರ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು. 2012ರ ಲಂಡನ್ ಒಲಿಂಪಿಕ್​ನಲ್ಲೂ ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಸತತ ಎರಡು ಒಲಿಂಪಿಕ್​ಗಳಲ್ಲಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

2016ರ ರಿಯೊ ಒಲಿಂಪಿಕ್​ನಲ್ಲಿ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ 58 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಸಾಕ್ಷಿ ಮಲಿಕ್ ಕುಸ್ತಿಯಲ್ಲಿ ಪದಕ ತಂದುಕೊಟ್ಟ ಮೊದಲ ಭಾರತೀಯ ಮಹಿಳೆಯಾಗಿದ್ದರು. 2020ರಲ್ಲಿ, ರವಿ ದಹಿಯಾ ಟೋಕಿಯೊದಲ್ಲಿ 57 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ರವಿಗೆ ಈ ಬಾರಿ ಒಲಿಂಪಿಕ್​ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಇವರ ಶಿಷ್ಯ ಅಮನ್​ ಸೆಹ್ರಾವತ್​ ಪದಕ ಗೆದ್ದು ಗುರವಿನಂತೆ ಮುಂದೆ ಸಾಗುತ್ತಿದ್ದಾರೆ.

ಇದಾದ ಬಳಿಕ ಬಜರಂಗ್ ಪುನಿಯಾ ಅವರು 2020ರ ಟೋಕಿಯೊ ಒಲಿಂಪಿಕ್​ನಲ್ಲಿ ಕುಸ್ತಿಯಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದಿದ್ದಾರೆ. ಪೂನಿಯಾ 65 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಆದ್ರೆ ಪೂನಿಯಾ ಪ್ಯಾರಿಸ್ ಒಲಿಂಪಿಕ್​ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಇದೀಗ 2024ರ ಪ್ಯಾರಿಸ್ ಒಲಿಂಪಿಕ್​ನಲ್ಲಿ ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಅಮನ್ ಸೆಹ್ರಾವತ್ ಕಂಚಿನ ಪದಕ ಗೆದ್ದಿದ್ದಾರೆ. ಸೆಹ್ರಾವತ್ ಅವರು ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ವಿರುದ್ಧ 13-5 ಅಂತರದ ಗೆಲುವು ದಾಖಲಿಸಿದರು. ಜತೆಗೆ ಭಾರತದ ಅತ್ಯಂತ ಕಿರಿಯ ಒಲಿಂಪಿಕ್ ಪದಕ ವಿಜೇತ ಎಂಬು ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸದ್ಯ ಅಮನ್​ 21 ವರ್ಷದವರಾಗಿದ್ದಾರೆ.

ಇದನ್ನೂ ಓದಿ:40 ವರ್ಷಗಳ ಬಳಿಕ ಒಲಿಂಪಿಕ್​​ನಲ್ಲಿ ಭಾರತವನ್ನು ಹಿಂದಿಕ್ಕಿದ ಪಾಕಿಸ್ತಾನ! - Paris olympics 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.