Shikar Dhwan Viral video: ಸದ್ಯ ಇನ್ಸ್ಟಾಗ್ರಾಂನಲ್ಲಿ ಲಡ್ಡು ಮುತ್ಯಾ ಹಾಡು ಸಖತ್ ವೈರಲ್ ಆಗುತ್ತಿದೆ. ದೇಶ ಮಾತ್ರವಲ್ಲದೆ ವಿದೇಶಿಗರು ಈ ಹಾಡಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ವಾಸ್ತವಾಗಿ ವಿಶೇಷ ಚೇತನ ಯುವಕನೊಬ್ಬ ತಿರುಗುತ್ತಿರುವ ಫ್ಯಾನ್ ಅನ್ನು ಕೈಯಿಂದ ತಡೆದು ನಿಲ್ಲಿಸಿ ನಂತರ ಅದರ ಧೂಳನ್ನು ಹಣೆಗೆ ಹಚ್ಚುತ್ತಾನೆ. ಈ ವಿಡಿಯೋಗೆ 'ಲಡ್ಡು ಮುತ್ಯಾನ ಅವತಾರ ಈಗಿನ ಸಂಚಾರಿ ದೇವನ' ಎಂಬ ಹಾಡು ಹಾಕಿ ವೈರಲ್ ಮಾಡಲಾಗುತ್ತಿದೆ. ಅಲ್ಲದೆ ಇದಕ್ಕೆ ಈಗಾಗಲೇ ಹಲವಾರು ಜನರು ವಿಡಿಯೋ ಮಾಡಿದ್ದಾರೆ. ಕೆಲವರು ತಿರುಗುತ್ತಿರುವ ಮಿಕ್ಸಿ ನಿಲ್ಲಿಸಿದರೆ ಮತ್ತೆ ಕೆಲವರು ಫ್ಯಾನ್ ನಿಲ್ಲಿಸಿ ಟ್ರೋಲ್ ಮಾಡುತ್ತಿದ್ದಾರೆ.
ಇದೀಗ ಶಿಖರ್ ಧವನ್ ಕೂಡ ನಕಲಿ ಲಡ್ಡು ಮುತ್ಯಾನ ವಿಡಿಯೋಗೆ ಟ್ರೋಲ್ ಮಾಡಿದ್ದಾರೆ. ಕುರ್ಚಿ ಮೇಲೆ ಕುಳಿತ ಶಿಖರ್ ಧವನ್ ಅವರನ್ನು ಸಂಗಡಿಗರು ಮೇಲೆತ್ತುತ್ತಾರೆ. ನಂತರ ಧವನ್ ತಿರುಗುತ್ತಿದ್ದ ಫ್ಯಾನ್ ಅನ್ನು ನಿಲ್ಲಿಸುತ್ತಾರೆ. ಈ ವೇಳೆ ಲಡ್ಡು ಮುತ್ಯಾನ ಅವತಾರ.. ಎಂಬ ಹಾಡು ಹಾಕಲಾಗಿದೆ. ಈ ವಿಡಿಯೋವನ್ನು ಧವನ್ ತಮ್ಮ ಅಧಿಕೃತ ಇನ್ಸ್ಟಾಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಈ ವಿಡಿಯೋಗೆ 3.5 ಮಿಲಿಯನ್ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ವಿವಿಧ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಯೂಸರ್ವೊಬ್ಬರು ಇವರು ಲಡ್ಡು ಮುತ್ಯಾ ಅಲ್ಲ ಶಿಖರ್ ಮುತ್ಯಾ ಎಂದರೆ ಮತ್ತೆ ಕೆಲವರು ಕ್ರಿಕೆಟ್ ತೊರೆದು ಲಡ್ಡು ಮುತ್ಯಾನಾದ ಧವನ್ ಎಂದು ತಮಾಷೆಯ ಕಾಮೆಂಟ್ಗಳನ್ನು ಮಾಡಿದ್ದಾರೆ.
ಯಾರು ಈ ಲಡ್ಡು ಮುತ್ಯಾ: ಅಸಲಿ ಲಡ್ಡು ಮುತ್ಯಾ ಲಿಂಗೈಕ್ಯರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯವರಾದ ಲಡ್ಡು ಮುತ್ಯಾ ಪವಾಡಪುರುಷ ಎಂಬುದು ಭಕ್ತರ ನಂಬಿಕೆಯಾಗಿದೆ. ಜಿಲ್ಲೆಯ ಸೀಮಿಕೆಯರೆಯಲ್ಲಿ ಅವರ ಗದ್ದುಗೆ ಇದ್ದು, ವಾರ್ಷಿಕ ಹಲವಾರು ಜನರು ಅಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ. ಇದೀಗ ವಿಶೇಷ ಚೇತನ ಯುವಕ ನಕಲಿ ಲಡ್ಡು ಮುತ್ಯಾ ಫ್ಯಾನ್ ಅನ್ನು ತಡೆದು ಧೂಳನ್ನು ಭಸ್ಮದ ರೂಪದಲ್ಲಿ ಭಕ್ತರಿಗೆ ಲೇಪನ ಮಾಡುವುದು, ಇದಕ್ಕೆ ಲಡ್ಡು ಮುತ್ಯಾ ಹಾಡನ್ನು ಹಾಕಿ ವೈರಲ್ ಮಾಡಲಾಗುತ್ತಿದೆ. ಅಚ್ಚರಿ ಎಂದರೇ ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲೂ ಇದರ ವಿಡಿಯೋ ವೈರಲ್ ಆಗುತ್ತಿದೆ. ಇತ್ತೀಚೆಗೆ ಕೆಲ ವಿದೇಶಿಗರು ಫ್ಯಾನ್ ತಡೆದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ: 30 ಬೌಂಡರಿ, 27 ಸಿಕ್ಸರ್, 344 ರನ್: ಟಿ-20ಯಲ್ಲಿ ವಿಶ್ವದಾಖಲೆ ಬರೆದ ಜಿಂಬಾಬ್ವೆ; ಎರಡು ದಾಖಲೆಗಳು ಉಡೀಸ್!