ETV Bharat / sports

ಟೇಬಲ್​ ಟೆನಿಸ್​ನಲ್ಲಿ ಭಾರತಕ್ಕೆ ಹಿನ್ನಡೆ: ಒಲಿಂಪಿಕ್​​ನಿಂದ ಹೊರಬಿದ್ದ ಶರತ್​ ಕಮಲ್​ - Paris Olympics 2024

author img

By ETV Bharat Karnataka Team

Published : Jul 28, 2024, 5:31 PM IST

ಪುರುಷರ ಸಿಂಗಲ್ಸ್ ಟೇಬಲ್ ಟೆನಿಸ್​ ಪಂದ್ಯದಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ. ಭಾರತದ ಸ್ಟಾರ್ ಪ್ಯಾಡ್ಲರ್ ಶರತ್ ಕಮಲ್ ಅವರು ಸ್ಲೊವೇನಿಯಾದ ಕೋಜುಲ್ ಡೆನಿ ವಿರುದ್ಧ ಸೋಲನುಭವಿಸಿದ್ದಾರೆ.

ಶರತ್​ ಕಮಲ್​
ಶರತ್​ ಕಮಲ್​ (IANS Photos)

ನವದೆಹಲಿ: ಪ್ಯಾರಿಸ್ ಒಲಿಂಪಿಕ್​ನ ಎರಡನೇ ದಿನ ಟೇಬಲ್ ಟೆನಿಸ್​ ಪಂದ್ಯದಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ. ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಸ್ಟಾರ್ ಪ್ಯಾಡ್ಲರ್ ಶರತ್ ಕಮಲ್ ಅವರು ಸ್ಲೊವೇನಿಯಾದ ಕೋಜುಲ್ ಡೆನಿ ವಿರುದ್ಧ ಸೋಲನುಭವಿಸಿದ್ದಾರೆ. 49 ನಿಮಿಷಗಳ ಪಂದ್ಯದಲ್ಲಿ ಕೋಜುಲ್ ಡೆನಿ, 4-2 ಅಂತರದಿಂದ ಭಾರತದ ಶರತ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಸೋಲಿನೊಂದಿಗೆ ಶರತ್​ ಕಮಲ್​ ಅವರ ಪ್ಯಾರಿಸ್ ಒಲಿಂಪಿಕ್​ ಪಯಣ ಅಂತ್ಯಗೊಂಡಿದೆ.

ಪಂದ್ಯದ ಆರಂಭದ ಮೊದಲ ಸೆಟ್​ನಲ್ಲಿ ಗೆಲುವು ಸಾಧಿಸಿದ್ದ ಶರತ್ ಸತತ ಮೂರು ಸೆಟ್​ಗಳಲ್ಲಿ ಹಿನ್ನಡೆ ಅನುಭವಿಸಿದರು. ಮೊದಲ ಸೆಟ್​ನಲ್ಲಿ ಶರತ್ 12-10ರಿಂದ ಗೆಲುವು ಸಾಧಿಸಿದ್ದರು. ಆ ಬಳಿಕ ಸತತ ಮೂರು ಸೆಟ್‌ಗಳನ್ನು ಕಳೆದುಕೊಂಡರು.

ಎರಡನೇ ಸೆಟ್‌ನಲ್ಲಿ, ಎದುರಾಳಿ ಆಟಗಾರ ಸ್ಲೊವೇನಿಯಾದ ಕೊಜುಲ್ ಡೆನಿ 11-9 ರಿಂದ ಗೆಲುವು ಸಾಧಿಸಿದರು, ಇದಕ್ಕಾಗಿ ಅವರು ಕೇವಲ 8 ನಿಮಿಷಗಳನ್ನು ತೆಗೆದುಕೊಂಡರು. ಆ ಬಳಿಕ ಮೂರನೇ ಸೆಟ್‌ನಲ್ಲಿ 11-6, ನಾಲ್ಕನೇ ಸುತ್ತಿನಲ್ಲಿ 11-7 ಕ್ರಮವಾಗಿ ಗೆಲುವು ಸಾಧಿಸಿದರು.

ಇದಾದ ಬಳಿಕ ಐದನೇ ಸೆಟ್‌ನಲ್ಲಿ ಪುಟಿದೆದ್ದ ಶರತ್ ಕಮಲ್ ಅದ್ಭುತ ಪ್ರದರ್ಶನ ತೋರಿ ಡೆನಿ ವಿರುದ್ಧ 11-8 ರಿಂದ ಗೆಲುವು ಸಾಧಿಸಿದರು. ಆರನೇ ಸೆಟ್‌ನಲ್ಲೂ ಶರತ್ ಕಮಲ್ ಮುನ್ನಡೆ ಸಾಧಿಸಿದ್ದರಾದೂ ಬಳಿಕ ಡೆನಿ ಪುನರಾಗಮನ ಮಾಡಿ ಶರತ್​ ವಿರುದ್ಧ 12-10 ರಿಂದ ಗೆಲುವು ಸಾಧಿಸಿದರು. ಇದರೊಂದಿಗೆ ಶರತ್​ ಕಮಲ್​ ಅವರ ಪ್ಯಾರಿಸ್ ಒಲಿಂಪಿಕ್​ ಪಯಣ ಇಲ್ಲಿಗೆ ಕೊನೆಗೊಂಡಿತು.

ಮತ್ತೊಂದೆಡೆ ಟೇಬಲ್ ಟೆನಿಸ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಶ್ರೀಜಾ ಅಕುಲಾ ಅದ್ಭುತ ಗೆಲುವು ಸಾಧಿಸಿ 32ನೇ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಅವರು 11-4, 11-9, 11-7, 11-8 ರಿಂದ ಸ್ವೀಡಿಷ್ ಪೆಡ್ಲರ್ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ಪ್ಯಾರಿಸ್​ ಒಲಿಂಪಿಕ್​​: ಏರ್​​ ಪಿಸ್ತೂಲ್​ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ; ಕಂಚು ಗೆದ್ದ ಮನು ಭಾಕರ್ - paris olympics 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.