ETV Bharat / sports

'ಆ ದಿನ ಹೋಟೆಲ್​ ಕೋಣೆಗೆ ಕರೆದು ನನ್ನ ಮೇಲೆ'!: ಬ್ರಿಜ್​ ಭೂಷಣ್​ ವಿರುದ್ದ ಸಾಕ್ಷಿ ಗಂಭೀರ ಆರೋಪ

ಕುಸ್ತಿಪಟು ಸಾಕ್ಷಿ ಮಲಿಕ್​ ಬರೆದಿರುವ 'ವಿಟ್ನೆಸ್' ಪುಸ್ತಕದಲ್ಲಿ ತಮ್ಮ ಜೀವಿತಾವಧಿಯಲ್ಲಿ ನಡೆದ ಕಹಿ ಘಟನೆಗಳ ಕುರಿತು ತಿಳಿಸಿದ್ದಾರೆ.

ಸಾಕ್ಷಿ ಮಲಿಕ್ ಮತ್ತು ಬ್ರಿಜ್ಭೂಷಣ್ ಶರಣ್ ಸಿಂಗ್
ಸಾಕ್ಷಿ ಮಲಿಕ್ ಮತ್ತು ಬ್ರಿಜ್ ಭೂಷಣ್ ಶರಣ್ ಸಿಂಗ್ (ANI, IANS)
author img

By ETV Bharat Sports Team

Published : Oct 22, 2024, 3:56 PM IST

ನವದಹಲಿ: 2016ರ ರಿಯೊ ಒಲಿಂಪಿಕ್‌ ಪದಕ ವಿಜೇತ ಭಾರತದ ಕುಸ್ತಿಪಟು ಸಾಕ್ಷಿ ಮಲಿಕ್‌, ತಮ್ಮ ವೃತ್ತಿಜೀವನದಲ್ಲಾದ ಕೆಲವು ಘಟನೆಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ತಾವು ಬರೆದ 'ವಿಟ್‌ನೆಸ್‌' ಎಂಬ ಪುಸ್ತಕದಲ್ಲಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ (ಡಬ್ಲ್ಯುಎಫ್‌ಐ) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಇದರಲ್ಲಿ, 2012ರ ಅಲ್ಮಾಟಿ (ಕಝಾಕಿಸ್ತಾನ್) ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ ವೇಳೆ ತನ್ನನ್ನು ಬ್ರಿಜ್ ಭೂಷಣ್ ಅವರು ತಮ್ಮ ಹೋಟೆಲ್ ಕೋಣೆಗೆ ಕರೆದು ಲೈಂಗಿಕ ದೌರ್ಜನ್ಯ ಯತ್ನ ನಡೆಸಿದ್ದರು ಎಂದು ಆರೋಪಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಯು ಸಾಕ್ಷಿ ಬಿಡುಗಡೆ ಮಾಡಿರುವ ಪುಸ್ತಕದಲ್ಲಿರುವ ಕೆಲವು ಮಹತ್ವದ ಅಂಶಗಳನ್ನು ಉಲ್ಲೇಖಿಸಿದೆ. ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ ವೇಳೆ ಬ್ರಿಜ್ ಭೂಷಣ್, ನನ್ನ ತಂದೆ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡುವಂತೆ ಹೋಟೆಲ್ ಕೋಣೆಯೊಂದಕ್ಕೆ ಕಳುಹಿಸಿದರು. ನಾನು ಪಾಲಕರೊಂದಿಗೆ ಮಾತನಾಡುತ್ತಾ ಪಂದ್ಯದ ಬಗ್ಗೆ ತಿಳಿಸಿದ್ದೆ. ಅಲ್ಲಿಯವರೆಗೂ ಎಲ್ಲವೂ ಸರಿಯಿತ್ತು. ಬಳಿಕ ನಾನು ಕರೆ ಡಿಸ್ಕನೆಕ್ಟ್ ಮಾಡಿ ಅವರೊಂದಿಗೆ ಹಾಸಿಗೆಯ ಮೇಲೆ ಕುಳಿತಿದ್ದಾಗ ನನಗೆ ಕಿರುಕುಳ ನೀಡಲು ಪ್ರಯತ್ನಿಸಿದರು. ನಾನು ಅವರನ್ನು ತಳ್ಳಿ ಅಳಲು ಪ್ರಾರಂಭಿಸಿದೆ.

ಆ ನಂತರ ಅವರು ಹಿಂದೆ ಸರಿದರು. ಅವರು ಬಯಸಿದ್ದು ನನ್ನಿಂದ ಆಗಲ್ಲ ಎಂದು ಅರಿತುಕೊಂಡ ಅವರು ತಾವಾಗಿಯೇ ದೂರ ಸರಿದರು. ಬಳಿಕ ನಾನು ತಂದೆಯ ಉದ್ದೇಶದಿಂದ ಅಪ್ಪಿಕೊಂಡೆ ಎಂದು ಹೇಳತೊಡಗಿದರು. ಬಳಿಕ ನಾನು ಅಳುತ್ತಾ ಅವರ ಕೋಣೆಯಿಂದ ಓಡಿ ನನ್ನ ಕೋಣೆಗೆ ಹೋದೆ ಎಂದು ಸಾಕ್ಷಿ ತಿಳಿಸಿದ್ದಾರೆ.

ಬಾಲ್ಯದಲ್ಲಿ ಟೀಚರ್ ಕಿರುಕುಳ: ಇದೇ ಪುಸ್ತಕದಲ್ಲಿ ತಮ್ಮ ಬಾಲ್ಯದಲ್ಲಿ ನಡೆದ ಘಟನೆ ಬಗ್ಗೆಯೂ ಬರೆದುಕೊಂಡಿದ್ದಾರೆ. ಬಾಲ್ಯದಲ್ಲೂ ನಾನು ಕಿರುಕುಳಕ್ಕೆ ಒಳಗಾಗಿದ್ದೆ. ಟ್ಯೂಷನ್​ ಟೀಚರ್​ ಕಿರುಕುಳ ನೀಡಿದ್ದರು. ಆದರೆ ಇದರ ಬಗ್ಗೆ ಹಲವಾರು ದಿನಗಳ ಕಾಲ ನನ್ನ ಮನೆಯವರಿಗೂ ಹೇಳಲು ಸಾಧ್ಯವಾಗಿರಲಿಲ್ಲ, ನನ್ನ ಶಾಲಾ ದಿನಗಳಿಂದಲೂ ಟ್ಯೂಷನ್ ಟೀಚರ್ ನನಗೆ ಕಿರುಕುಳ ನೀಡುತ್ತಿದ್ದರು. ಕೆಲವೊಮ್ಮೆ ಅವರು ನನ್ನನ್ನು ಮನೆಗೆ ಕರೆಯುತ್ತಿದ್ದರು ಹಲವಾರು ಬಾರಿ ನನ್ನನ್ನು ಮುಟ್ಟಲು ಪ್ರಯತ್ನಿಸಿದ್ದರು. ಆಗ ನಾನು ಟ್ಯೂಷನ್​ಗೆ ಹೋಗಲು ಹೆದರುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ.

ಈ ಎರಡೂ ಘಟನೆಗಳ ನಂತರ ತಾಯಿ ನನ್ನ ಬೆಂಬಲಕ್ಕೆ ನಿಂತರು. ಟ್ಯೂಷನ್​ ಟೀಚರ್​, ಸಿಂಗ್​ ಅಂಥವರನ್ನು ಮರೆತು ತರಬೇತಿ ಮತ್ತು ಸ್ಪರ್ಧೆಯ ಮೇಲೆ ಗಮನ ಕೇಂದ್ರೀಕರಿಸಲು ತಿಳಿಸಿದರು. ಇಂಥವರಿಂದ ಹೆದರುವ ಅಗತ್ಯವಿಲ್ಲ, ದಿಟ್ಟ ಹೆಜ್ಜೆ ಇಡಬೇಕು ಎಂದು ಧೈರ್ಯ ತುಂಬಿದರು. ಈ ರೀತಿಯ ಕಹಿ ಘಟನೆಗಳ ಬಳಿಕವೂ ಪೋಷಕರು ನನ್ನ ಬೆಂಬಲಕ್ಕೆ ನಿಂತಿದ್ದರಿಂದ ನಾನು ಇಲ್ಲಿಯವರೆಗೆ ತಲುಪಲು ಸಾಧ್ಯವಾಯಿತು ಎಂದು ಸಾಕ್ಷಿ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟ: ರುತುರಾಜ್ ಗಾಯಕ್ವಾಡ್​ ಕ್ಯಾಪ್ಟನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.