ETV Bharat / sports

ಬ್ಯಾಡ್ಮಿಂಟನ್‌ಗೆ ಸಾಯಿ ಪ್ರಣೀತ್ ನಿವೃತ್ತಿ, ಅಮೆರಿಕ ಕ್ಲಬ್‌ಗೆ ಮುಖ್ಯ ಕೋಚ್ ಆಗಿ ನೇಮಕ - Badminton

ಭಾರತದ ಬ್ಯಾಡ್ಮಿಂಟನ್​ ತಾರೆ ಸಾಯಿ ಪ್ರಣೀತ್ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.

ಬ್ಯಾಡ್ಮಿಂಟನ್‌ಗೆ ಸಾಯಿ ಪ್ರಣೀತ್ ನಿವೃತ್ತಿ
ಬ್ಯಾಡ್ಮಿಂಟನ್‌ಗೆ ಸಾಯಿ ಪ್ರಣೀತ್ ನಿವೃತ್ತಿ
author img

By PTI

Published : Mar 5, 2024, 9:48 AM IST

ನವದೆಹಲಿ: ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ಬ್ಯಾಡ್ಮಿಂಟನ್​ ತಾರೆ ಬಿ.ಸಾಯಿ ಪ್ರಣೀತ್ ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಅಮೆರಿಕದ ಕ್ಲಬ್​ಗೆ ಮುಖ್ಯ ತರಬೇತುದಾರನಾಗಿ ಮುಂದುವರಿಯಲು ಅವರು ಬಯಸಿದ್ದಾರೆ.

ಸೋಮವಾರ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿರುವ 31 ವರ್ಷದ ಪ್ರಣೀತ್​, 'ಮನಸ್ಸು ಮಿಶ್ರ ಭಾವನೆಗಳಲ್ಲಿದೆ. ನಾನು ಬ್ಯಾಡ್ಮಿಂಟನ್​ ಅಂಕಣದಿಂದ ವಿದಾಯ ಹೇಳುತ್ತಿದ್ದೇನೆ. 24 ವರ್ಷಗಳಿಂದ ನನ್ನ ಜೀವನಾಡಿಯಾಗಿರುವ ಕ್ರೀಡೆಯಿಂದ ನಿವೃತ್ತಿ ಪಡೆಯುತ್ತಿದ್ದೇನೆ' ಎಂದು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸುದೀರ್ಘ ಪೋಸ್ಟ್​ ಹಂಚಿಕೊಂಡಿದ್ದಾರೆ.

'ಬ್ಯಾಡ್ಮಿಂಟನ್​ನಲ್ಲಿ ಈವರೆಗೂ ಬೆಳೆಯಲು ಕಾರಣವಾದ, ನನ್ನ ವೃತ್ತಿ ಜೀವನದಲ್ಲಿ ಸಿಕ್ಕ ಎಲ್ಲರಿಗೂ ಧನ್ಯವಾದಗಳು. ಬ್ಯಾಡ್ಮಿಂಟನ್ ನನ್ನ ಮೊದಲ ಪ್ರೀತಿ, ನಿರಂತರ ಒಡನಾಡಿ. ಎದುರಿಸಿದ ಸವಾಲುಗಳು ಶಾಶ್ವತವಾಗಿ ಜೊತೆಗಿರುತ್ತವೆ' ಎಂದು ತಿಳಿಸಿದ್ದಾರೆ.

ಅಮೆರಿಕ ಕ್ಲಬ್​ಗೆ ಕೋಚ್​: ಮುಂದಿನ ತಿಂಗಳು ಅಮೆರಿಕದ ಟ್ರಯಾಂಗಲ್ ಬ್ಯಾಡ್ಮಿಂಟನ್ ಅಕಾಡೆಮಿಯ ಮುಖ್ಯ ಕೋಚ್ ಆಗಿ ಸೇರಲಿರುವ ಬಗ್ಗೆ ಮಾಹಿತಿ ನೀಡಿರುವ ಅವರು, 'ಹೊಸ ಇನಿಂಗ್ಸ್ ಆರಂಭಿಸಲಿದ್ದೇನೆ. ಏಪ್ರಿಲ್​ನಲ್ಲಿ ಅಮೆರಿಕದ ಕ್ಲಬ್‌ಗೆ ಮುಖ್ಯ ತರಬೇತುದಾರನಾಗಿ ಕೆಲಸ ಮಾಡಲಿದ್ದೇನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ನೀಡುವೆ' ಎಂದು ಅವರು ತಿಳಿಸಿದ್ದಾರೆ.

ಪ್ರಣೀತ್ ಬ್ಯಾಡ್ಮಿಂಟನ್​ ಸಾಧನೆ: ಎರಡು ದಶಕಗಳ ಕಾಲ ಭಾರತವನ್ನು ಪ್ರತಿನಿಧಿಸಿರುವ ಪ್ರಣೀತ್​, ಹಲವು ಟೂರ್ನಿಗಳಲ್ಲಿ ದೇಶಕ್ಕೆ ಪದಕಗಳನ್ನು ತಂದು ಕೊಟ್ಟಿದ್ದಾರೆ. 2017ರ ಸಿಂಗಾಪುರ ಓಪನ್ ಸೂಪರ್ ಸೀರೀಸ್ ಗೆಲುವು ಮತ್ತು ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆದ 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕಗಳು ಪ್ರಮುಖವಾಗಿವೆ.

ಪ್ರಣೀತ್ ವೃತ್ತಿಜೀವನದಲ್ಲಿ ವಿಶ್ವದ ಟಾಪ್​ 10ನೇ ಸ್ಥಾನ ಪಡೆದಿದ್ದರು. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಗ್ರೂಪ್ ಹಂತದಲ್ಲಿ ಆಘಾತಕಾರಿ ಸೋಲು ಅನುಭವಿಸಿ ನಿರ್ಗಮಿಸಿದ್ದರು. 2010ರ ವಿಶ್ವ ಜೂನಿಯರ್ ಕಂಚಿನ ಪದಕ ವಿಜೇತರಾಗಿದ್ದರು. 2019ರಲ್ಲಿ ಸ್ವಿಸ್ ಓಪನ್ ಸೂಪರ್ 300 ಪಂದ್ಯಾವಳಿಯಲ್ಲಿ ರನ್ನರ್ ಅಪ್ ಆಗಿದ್ದರು. ಇವುಗಳ ಜೊತೆಗೆ ಕೇಂದ್ರ ಸರ್ಕಾರ ನೀಡುವ ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಗೋಪಿಚಂದ್​ ಕ್ಲಬ್​ ತೊರೆದ ಸಿದ್ದಿಕಿ: ಭಾರತದ ಸೈನಾ ನೆಹ್ವಾಲ್, ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್, ಎಚ್‌.ಎಸ್.ಪ್ರಣಯ್ ಅವರಂತಹ ಅಗ್ರ ಶಟ್ಲರ್‌ಗಳಿಗೆ ಬ್ಯಾಡ್ಮಿಂಟನ್​ ಪಟ್ಟುಗಳನ್ನು ಹೇಳಿಕೊಟ್ಟಿದ್ದ ತರಬೇತುದಾರ ಮೊಹಮ್ಮದ್ ಸಿಯಾದತುಲ್ಲಾ ಸಿದ್ದಿಕಿ ಅವರು ಪುಲ್ಲೇಲ ಗೋಪಿಚಂದ್ ಅಕಾಡೆಮಿ ತೊರೆದು, ಅಮೆರಿಕದ ಒರೆಗಾನ್ ಬ್ಯಾಡ್ಮಿಂಟನ್ ಅಕಾಡೆಮಿಗೆ ಸೇರಿದ್ದಾರೆ.

40 ವರ್ಷ ವಯಸ್ಸಿನ ಸಿದ್ದಿಕಿ, ಭಾರತದ ಅಗ್ರ ಶೆಟ್ಕರ್​ಗಳ ಜೊತೆಗೂಡಿ ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದರು. ಮಾಜಿ ಬ್ಯಾಡ್ಮಿಂಟನ್​ ಆಟಗಾರರಾಗಿರುವ ಅವರು 2004ರಲ್ಲಿ ಹೈದರಾಬಾದ್​ನಲ್ಲಿರುವ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ಮಾಸ್ಕೊ ವುಶು ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದ ಕಾಶ್ಮೀರದ ಅವಳಿ ಸಹೋದರಿಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.