Sachin Tendulkar Played For Pakistan: ಸಚಿನ್ ತೆಂಡೂಲ್ಕರ್ ಈ ಹೆಸರು ಕೇಳದವರು ಜಗತ್ತಿನಲ್ಲಿ ಯಾರೂ ಇಲ್ಲ. ತಮ್ಮ ಬ್ಯಾಟಿಂಗ್ನಿಂದಲೇ ಎದುರಾಳಿಗಳನ್ನು ಚೆಂಡಾಡುತ್ತಿದ್ದ ಸಚಿನ್ ಕ್ರಿಕೆಟ್ ಲೋಕದ ದಿಗ್ಗಜ ಆಟಗಾರ. ಆಡು ಮುಟ್ಟದ ಸೊಪ್ಪಿಲ್ಲ ಸಚಿನ್ ಬರೆಯದ ದಾಖಲೆಗಳಿಲ್ಲ ಎಂಬಷ್ಟು ದಾಖಲೆಗಳನ್ನು ಸಚಿನ್ ಕ್ರಿಕೆಟ್ನಲ್ಲಿ ನಿರ್ಮಿಸಿದ್ದಾರೆ. ಆ ದಾಖಲೆಗಳು ಇಂದಿಗೂ ಕ್ರಿಕೆಟ್ ಇತಿಹಾಸದ ಪುಟದಲ್ಲಿ ರಾರಾಜಿಸುತ್ತಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಬ್ಯಾಟರ್ನಿಂದ ಹಿಡಿದು 100 ಶತಕಗಳನ್ನು ಸಿಡಿಸಿದ ಏಕ ಮಾತ್ರ ಕ್ರಿಕೆಟಿಗನೆಂಬ ದಾಖಲೆಗಳು ಇವರ ಹೆಸರಲ್ಲಿವೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ಸಚಿನ್ ತೆಂಡೂಲ್ಕರ್ ಬಗ್ಗೆ ಅನೇಕ ಜನರಿಗೆ ಗೊತ್ತಿಲ್ಲದ ವಿಷವೊಂದಿದೆ. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಮೊದಲು ಸಚಿನ್ ಪಾಕಿಸ್ತಾನ ತಂಡದೊಂದಿಗೆ ಪಂದ್ಯವನ್ನಾಡಿದ್ದರು. ಇದು ಆಶ್ಚರ್ಯ ಎನಿಸಿದರೂ ನಿಜ.
ಪಾಕಿಸ್ತಾನಕ್ಕಾಗಿ ಆಡಿದ ತೆಂಡೂಲ್ಕರ್: ಸಚಿನ್ ತೆಂಡೂಲ್ಕರ್ ತಮ್ಮ 16ನೇ ವಯಸ್ಸಿನಲ್ಲಿ ಅಂದರೆ 1989ರಂದು ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದಕ್ಕೂ ಮೊದಲು ತಮ್ಮ 13ನೇ ವಯಸ್ಸಿನಲ್ಲಿ ಪಾಕಿಸ್ತಾನ ತಂಡದಲ್ಲಿ ಆಡಿದ್ದರು. 1987ರಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ (CCI) ಸುವರ್ಣ ಮಹೋತ್ಸವದ ಅಂಗವಾಗಿ ಉಭಯ ತಂಡಗಳ ನಡುವೆ ಸೌಹಾರ್ದದ ಪಂದ್ಯವಾಗಿ ಟೆಸ್ಟ್ ಮತ್ತು ಏಕದಿನ ಸರಣಿ ಆಯೋಜಿಸಲಾಗಿತ್ತು.
ಇದಕ್ಕಾಗಿ ಭಾರತ ಪ್ರವಾಸಕ್ಕೆ ಬಂದಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಜನವರಿ 20, ರಂದು ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಭಾರತದೊಂದಿಗೆ ಅಭ್ಯಾಸ ಪಂದ್ಯವನ್ನು ಆಡಿತ್ತು. ಆದರೆ ಊಟದ ವಿರಾಮದ ಕಾರಣ ಪಾಕಿಸ್ತಾನದ ಅನುಭವಿ ಆಟಗಾರರಾದ ಜಾವೇದ್ ಮಿಯಾಂದಾದ್ ಮತ್ತು ಅಬ್ದುಲ್ ಖಾದಿರ್ ಊಟಕ್ಕೆಂದು ಹೋಟೆಲ್ಗೆ ತೆರಳಿದ್ದರು. ಪಂದ್ಯ ಆರಂಭವಾದರೂ ಅವರು ಮೈದಾನಕ್ಕೆ ಬಂದಿರಲಿಲ್ಲ.
ಇದನ್ನೂ ಓದಿ: ಶೂನ್ಯ ಎಸೆತಕ್ಕೆ ವಿಕೆಟ್ ಪಡೆದ ವಿಶ್ವದ ಏಕೈಕ ಕ್ರಿಕೆಟಿಗ ಯಾರು? ಇವರೀಗ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್!
ಇದರಿಂದಾಗಿ ಪಾಕಿಸ್ತಾನಕ್ಕೆ ಒಬ್ಬ ಫೀಲ್ಡರ್ನ ಕೊರತೆ ಎದುರಾಯಿತು. ಈ ವೇಳೆ ಪಾಕ್ ನಾಯಕ ಇಮ್ರಾನ್ ಖಾನ್ ಬದಲಿ ಆಟಗಾರನಾಗಿ ಯಾರನ್ನಾದರು ಕಳಿಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡರು. ಈ ವೇಳೆ ಬೌಂಡರಿ ಲೈನ್ ಬಳಿಯಿದ್ದ ಸಚಿನ್ ಅವರನ್ನು ಪಾಕ್ ಪರ ಫೀಲ್ಡಿಂಗ್ ಮಾಡಲು ಮೈದಾನಕ್ಕೆ ಕಳುಹಿಸಲಾಯಿತು.
25 ನಿಮಿಷ ಫೀಲ್ಡಿಂಗ್: 25 ನಿಮಿಷಗಳ ಕಾಲ ಸಚಿನ್ ಪಾಕಿಸ್ತಾನದ ಪರ ಫೀಲ್ಡಿಂಗ್ ಮಾಡಿದ್ದರು. ಲಾಂಗ್ ಆನ್ನಲ್ಲಿ ಸಚಿನ್ ಫೀಲ್ಡಿಂಗ್ ಮಾಡುವಾಗ ಭಾರತ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಚೆಂಡನ್ನ ಸಚಿನ್ ಬಳಿ ಹೊಡೆದಿದ್ದರು. ಆದರೆ ಈ ಬಾಲ್ ಹಿಡಿಯುವಲ್ಲಿ ಸಚಿನ್ ವಿಫಲರಾಗಿದ್ದರು. ಸ್ವತಃ ಈ ಬಗ್ಗೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಆತ್ಮಕಥನ 'ಫ್ಲೇಯಿಂಗ್ ಇಟ್ ಮೈ ವೇ'ನಲ್ಲಿ ಉಲ್ಲೇಖಿಸಿದ್ದಾರೆ.
ಸಚಿನ್ ಲಾಂಗ್ ಆನ್ ಆಗಿದ್ದರು. ಅದೇ ದಿಕ್ಕಿನಲ್ಲಿ ಕಪಿಲ್ ದೇವ್ ಒಂದು ಶಾಟ್ ಆಡಿದರು, ಅದನ್ನು ಹಿಡಿಯಲು ತೆಂಡೂಲ್ಕರ್ ವಿಫಲರಾದರು. ಈ ಘಟನೆಯನ್ನು ಸ್ವತಃ ಸಚಿನ್ ತೆಂಡೂಲ್ಕರ್ ತಮ್ಮ ಆತ್ಮಕಥನ 'ಪ್ಲೇಯಿಂಗ್ ಇಟ್ ಮೈ ವೇ' ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕೇವಲ 3 ಓವರ್ಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ಬರೆದವರು ಡಾನ್ ಬ್ರಾಡ್ಮನ್! ಈ ದಾಖಲೆ ಮುರಿಯಲು ಸಾಧ್ಯವೇ?