ETV Bharat / sports

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಪ್ರಶಸ್ತಿ ; ಆರ್​ಸಿಬಿ ಹೆಣ್ಣುಮಕ್ಳೆ ಸ್ಟ್ರಾಂಗು​ ಗುರು - WPL Final match

WPL final 2024: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2024 ರ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಜಯ ಗಳಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್​ ಆಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು
author img

By ANI

Published : Mar 17, 2024, 9:17 PM IST

Updated : Mar 17, 2024, 10:59 PM IST

ನವದೆಹಲಿ : ಮಹಿಳಾ ಪ್ರೀಮಿಯರ್ ಲೀಗ್ 2024 ಎರಡನೇ ಆವೃತ್ತಿಯ ಟ್ರೋಫಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎತ್ತಿ ಹಿಡಿದೆ. ಈ ಮೂಲಕ ಕೋಟ್ಯಂತರ ಕ್ರಿಕೆಟ್​ ಅಭಿಮಾನಿಗಳ ಈ ಸಲ ಕಪ್​ ನಮ್ದೆ ಎನ್ನುವ ಮಾತು ನನಸಾಗಿದೆ. ಆದರೇ ಸತತ ಎರಡು ಬಾರಿ ಫೈನಲ್​ಗೆ ಎಂಟ್ರಿಕೊಟ್ಟಿದ್ದ ಡೆಲ್ಲಿ ಕಪ್​ ಗೆಲ್ಲುವಲ್ಲಿ ಎಡವಿದೆ.

ಟೂರ್ನಿಯುದ್ದಕ್ಕೂ ಉತ್ತಮ ಆಟ ಪ್ರದರ್ಶಿಸಿದ ಆರ್​ಸಿಬಿ ತಂಡ ಸಂಘಟಿತ ಆಟ ಕಪ್​ ಗೆಲ್ಲಲು ಸಹಕಾರಿಯಾಯಿತು. ನವದೆಹಲಿಯ ಅರುಣ್​ ಜೇಟ್ಲಿ ಕ್ರಿಕೆಟ್​ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ 113 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಆರ್​ಸಿಬಿಗೆ 114 ರನ್​ಗಳ ಸುಲಭವಾದ ಟಾರ್ಗೆಟ್​ ನೀಡಿತ್ತು. ​ಆರ್​ಸಿಬಿ ಭರ್ಜರಿ ಬೌಲಿಂಗ್​ ಪ್ರದರ್ಶನದಿಂದಾಗಿ ಡೆಲ್ಲಿ ತನ್ನ ವಿಕೆಟ್​ಗಳನ್ನು ಕಳೆದುಕೊಂಡು ಶಫಾಲಿ ವರ್ಮಾ ಅವರ 44 ರನ್​ ಮತ್ತು ನಾಯಕಿ ಲ್ಯಾನಿಂಗ್​ ಅವರ 23 ರನ್​ಗಳಿಂದ ಡೆಲ್ಲಿ ನೂರರ ರನ್​ ಗಡಿ ದಾಟಿತು. ಆರ್​ಸಿಬಿ ಪರ ಶ್ರೇಯಾಂಕಾ ಪಾಟೀಲ್ 4 ವಿಕೆಟ್​, ಸೋಫಿ ಮೊಲಿನೆಕ್ಸ್ 3 ಹಾಗು ಆಶಾ ಸೋಭಾನ 2 ವಿಕೆಟ್​ ಉರುಳಿಸಿದರು.

ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಾಳ್ಮೆಯ ಆಟ ಪ್ರದರ್ಶಿಸಿತು. ನಿಧಾನ ಗತಿಯಲ್ಲಿ ಬ್ಯಾಟ್​ ಬೀಸಿದ ನಾಯಕಿ ನಾಯಕಿ ಸ್ಮೃತಿ ಮಂಧಾನ ಮತ್ತು ಸೋಫಿ ಡಿವೈನ್ ಆರ್​ಸಿಬಿಗೆ ಭದ್ರ ಬುನಾದಿ ಹಾಕಿದರು. ಆದರೇ ಸೋಫಿ ಡಿವೈನ್ (32) ಶಿಖಾ ಪಾಂಡೆ ಬೌಲಿಂಗ್​​ನಲ್ಲಿ ವಿಕೆಟ್​ ಒಪ್ಪಿಸಿದರು. ನಂತರ ಬಂದ ಎಲ್ಲಿಸ್ ಪೆರ್ರಿ, ಸ್ಮೃತಿ ಮಂಧಾನ ದೊಂದಿಗೆ ಪಂದ್ಯವನ್ನು ಗೆಲುವಿನ ಕಡೆಗೆ ತೆಗೆದುಕೊಂಡು ಬಂದರು. ಅಂತಿಮ ಘಟ್ಟದಲ್ಲಿ ಸ್ಮೃತಿ ಮಂಧಾನ (31) ಮಿನ್ನು ಮಣಿ ಬೌಲಿಂಗ್​ನಲ್ಲಿ ಕ್ಯಾಚ್​​ ನೀಡಿದರು.

ಬಳಿಕ ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ ಆರ್​ಸಿಬಿ ಗೆ ಚೊಚ್ಚಲ ಪ್ರಶಸ್ತಿಯನ್ನು ತಂದು ಕೊಡುವಲ್ಲಿ ಯಶಸ್ವಿಯಾದರು. ಡೆಲ್ಲಿ ಪರ ಶಿಖಾ ಪಾಂಡೆ ಮತ್ತು ಮಿನ್ನು ಮಣಿ ತಲಾ ಒಂದು ವಿಕೆಟ್​ ಪಡೆದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು : ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್(ವಿ.ಕೀ), ಸೋಫಿ, ಜಾರ್ಜಿಯಾ ವಾರೆಹಮ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನ, ರೇಣುಕಾ ಠಾಕೂರ್ ಸಿಂಗ್

ಡೆಲ್ಲಿ ಕ್ಯಾಪಿಟಲ್ಸ್ : ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರಾಡ್ರಿಗಸ್, ಮರಿಝನ್ನೆ ಕಪ್, ಜೆಸ್ ಜೊನಾಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ (ವಿ.ಕೀ), ಶಿಖಾ ಪಾಂಡೆ, ಮಿನ್ನು ಮಣಿ​

ಇದನ್ನೂ ಓದಿ : WPL Final: ರಾಯಲ್ ಚಾಲೆಂಜರ್ಸ್ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ಬ್ಯಾಟಿಂಗ್​ ಆಯ್ಕೆ

Last Updated : Mar 17, 2024, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.