ETV Bharat / sports

ಸ್ಕಲ್​ ಈವೆಂಟ್​ನಿಂದ ಹೊರಬಿದ್ದ ಬಲರಾಜ್​ ಪನ್ವಾರ್​: ಪದಕದ ಕನಸು ಭಗ್ನ - Paris Olympics 2024

ರೋಯಿಂಗ್​ ಪಟು ಬಲರಾಜ್​ ಪನ್ವಾರ್​ ಇಂದು ನಡೆದ ಪುರುಷರ ಸಿಂಗಲ್ಸ್ ಸ್ಕಲ್ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ 5ನೇ ಸ್ಥಾನ ಪಡೆದು ಪದಕ ರೇಸ್​ನಿಂದ ಹೊರಬಿದ್ದರು.

ಬಲರಾಜ್​ ಪನ್ವಾರ್
ಬಲರಾಜ್​ ಪನ್ವಾರ್ (AP)
author img

By ETV Bharat Sports Team

Published : Jul 30, 2024, 6:44 PM IST

ಪ್ಯಾರಿಸ್​ (ಫ್ರಾನ್ಸ್​): ಒಲಿಂಪಿಕ್ಸ್​ನಲ್ಲಿ ಭಾಗವಹಿಸಿರುವ ಭಾರತದ ಏಕೈಕ ರೋಯಿಂಗ್​ ಪಟು ಬಲರಾಜ್​ ಪನ್ವಾರ್​ ವರೆಸ್-ಸುರ್-ಮಾರ್ನೆ ನಾಟಿಕಲ್​ನಲ್ಲಿ ನಡೆದ ಪುರುಷರ ಸಿಂಗಲ್ಸ್ ಸ್ಕಲ್ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಐದನೇ ಸ್ಥಾನ ಪಡೆಯುವ ಮೂಲಕ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

25 ವರ್ಷದ ಬಲರಾಜ್ ಪನ್ವಾರ್ 7:05.10 ಸಮಯದೊಂದಿಗೆ ಐದನೇ ಸ್ಥಾನ ಪಡೆದರು, ಇದು ಪದಕ ಸುತ್ತಿಗೆ ಅರ್ಹತೆ ಪಡೆಯಲು ಸಾಕಾಗಲಿಲ್ಲ. ಇದೀಗ ಬಲರಾಜ್​ ಈವೆಂಟ್‌ನ ಸಿ ಮತ್ತು ಡಿ ಸೆಮಿ - ಫೈನಲ್‌ಗಳಲ್ಲಿ ಭಾಗವಹಿಸಲಿದ್ದಾರೆ. ಇದು ಕೇವಲ ಶ್ರೇಯಾಂಕದ ಪಂದ್ಯವಾಗಿರಲಿದ್ದು ಈವೆಂಟ್​ನಲ್ಲಿ ಎಷ್ಟನೇ ಶ್ರೇಯಾಂಕ ಪಡೆದರು ಎಂದು ನಿರ್ಧಾರವಾಗುತ್ತದೆ.

ಇದಕ್ಕೂ ಮೊದಲ ಶನಿವಾರ ನಡೆದ ಪುರುಷರ ಸಿಂಗಲ್ ರೋಯಿಂಗ್​ ಈವೆಂಟ್‌ನ ಮೊದಲ ಹೀಟ್‌ನಲ್ಲಿ (ಆರಂಭಿಕ ರೇಸ್) ನಾಲ್ಕನೇ ಸ್ಥಾನ ಗಳಿಸಿ ರಿಪಿಚೇಜ್‌ ಸುತ್ತಿಗೆ ಎಂಟ್ರಿ ಪಡೆದಿದ್ದರು. ಈ ಪಂದ್ಯದಲ್ಲಿ ಬಾಲರಾಜ್ 7:7.11 ನಿಮಿಷಗಳಲ್ಲಿ ಗುರಿ ತಲುಪಿದ್ದರು.

ಬಳಿಕ ಭಾನುವಾರ ನಡೆದ ಸಿಂಗಲ್ಸ್ ಸ್ಕಲ್ಸ್ ರೆಪೆಚೇಜ್​ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಪನ್ವಾರ್ ಕ್ವಾರ್ಟರ್ ಫೈನಲ್ ತಲುಪಿದ್ದರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ನ ಪುರುಷರ ಸಿಂಗಲ್ಸ್ ಸ್ಕಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನೂ ಬರೆದಿದ್ದರು. 25ರ ಹರೆಯದ ಬಾಲರಾಜ್ ರೆಪೆಚೇಜ್ 2ರಲ್ಲಿ 7:12.41 ನಿಮಿಷಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದಿದ್ದರು. ಅವರ ಅತ್ಯುತ್ತಮ ಪ್ರದರ್ಶನದಿಂದ ಭಾರತಕ್ಕೆ ಪದಕ ನಿರೀಕ್ಷೆ ಹುಟ್ಟಿಕೊಂಡಿತ್ತು.

ಇದನ್ನೂ ಓದಿ: ಒಲಿಂಪಿಕ್​ ಫೆನ್ಸಿಂಗ್​ ಕ್ರೀಡೆಯಲ್ಲಿ ಭಾಗವಹಿಸಿದ 7 ತಿಂಗಳ ಗರ್ಭಿಣಿ: ಸೋತರೂ ಜನರ ಹೃದಯ ಗೆದ್ದ ಕ್ರೀಡಾಪಟು ​ - Paris Olympics 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.