ಸೇಂಟ್ ಲೂಸಿಯಾ: ವೆಸ್ಟ್ ಇಂಡೀಸ್ನ ಸೇಂಟ್ ಲೂಸಿಯಾ ಕ್ರೀಡಾಂಗಣದಲ್ಲಿ ಮಳೆ ಅಡ್ಡಿ ಭೀತಿಯಲ್ಲಿದ್ದ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಇಂದಿನ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆ. ಇದಕ್ಕೆ ಕಾರಣ ಮೈದಾನದಲ್ಲಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ. ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಪೇರಿಸಿದ್ದು, ಆಸೀಸ್ ಗೆಲ್ಲಲು 206 ರನ್ ಬೇಕಿದೆ.
ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಟಿಕೆಟ್ ಖಾತ್ರಿಗಾಗಿ ನಡೆಯುತ್ತಿರುವ ಪಂದ್ಯದಲ್ಲಿ ಹಿಟ್ಮ್ಯಾನ್ ರೋಷಾವೇಷದಿಂದ ಬ್ಯಾಟ್ ಬೀಸಿದರು. ಮೊದಲ ಓವರ್ನಿಂದಲೇ ದಂಡನೆ ಶುರುವಿಟ್ಟುಕೊಂಡ ರೋಹಿತ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಭಾರತದ ಪರ ಟಿ20ಯಲ್ಲಿ ಬಂದ ಐದನೇ ಅತಿವೇಗದ ಫಿಫ್ಟಿಯಾಗಿದೆ. ಜೊತೆಗೆ ರೋಹಿತ್ರ ವೈಯಕ್ತಿಕ ವೇಗದ ದಾಖಲೆಯೂ ಇದಾಗಿದೆ.
A Spectacular Knock 👏
— BCCI (@BCCI) June 24, 2024
Captain Rohit Sharma departs after a sensational and stroke-filled 92(41) #TeamIndia reach 155/3 after 14 overs
Follow The Match ▶️ https://t.co/L78hMho6Te#T20WorldCup | #AUSvIND | @ImRo45
📸 ICC pic.twitter.com/JmeggrehCY
ಈ ಟಿ20 ವಿಶ್ವಕಪ್ ಎರಡನೇ ಬಾರಿಗೆ ವಿರಾಟ್ ಕೊಹ್ಲಿ ಸೊನ್ನೆಗೆ ಔಟಾದರು. ಆದರೂ, ಯಾವುದೇ ಭೀತಿಯಿಲ್ಲದೇ ಬ್ಯಾಟ್ ಬೀಸಿದ ಹಿಟ್ಮ್ಯಾನ್ ನೋಡನೋಡುತ್ತಿದ್ದಂತೆ ಐದನೇ ಓವರ್ನಲ್ಲಿಯೇ ಅರ್ಧಶತಕ ಬಾರಿಸಿದರು. ಆಸೀಸ್ನ ಪ್ರತಿ ಬೌಲರ್ಗೂ ದಂಡನೆಯ ಶಿಕ್ಷೆ ವಿಧಿಸಿದ ಭಾರತದ ನಾಯಕ ಸರಾಸರಿ ಓವರ್ಗೆ 15 ರನ್ ಚಚ್ಚಿದರು. ಮಿಚೆಲ್ ಸ್ಟಾರ್ಕ್ ಎಸೆದ ಮೂರನೇ ಓವರ್ನಲ್ಲಿ 6, 6, 4, 6, 0, Wd, 6 ಸಮೇತ 29 ರನ್ ಸಿಡಿಸಿದರು.
ಶತಕದ ಅಂಚಿನಲ್ಲಿ ಔಟ್: ಸರಾಗವಾಗಿ ಶತಕದ ಅಂಚಿನಲ್ಲಿ ರೋಹಿತ್, ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಯಾರ್ಕರ್ ಬೌಲ್ಗೆ ಕ್ಲೀನ್ಬೌಲ್ಡ್ ಆಗಿ ಹೊರನಡೆದರು. ಇದರಿಂದ ವಿಶ್ವಕಪ್ನಲ್ಲಿ ಮೊದಲ ಶತಕದಿಂದ ವಂಚಿತರಾದರು. ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ (12), ಕೆಎಲ್ ರಾಹುಲ್ (18) ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರೆ, ರೋಹಿತ್ ಒಂದು ಎಸೆತ ಹೆಚ್ಚುವರಿಯಾಗಿ ಪಡೆದರು. ಜೊತೆಗೆ ಭಾರತದ ಪರ ಇದು ಐದನೇ ಅತಿ ವೇಗದ ಫಿಫ್ಟಿಯೂ ಆಯಿತು.
ಆಸ್ಟ್ರೇಲಿಯಾ ವಿರುದ್ಧ ಅಬ್ಬರದ ಬ್ಯಾಟಿಂಗ್ ದಾಖಲೆ ಹೊಂದಿರುವ ಶರ್ಮಾ, ಈ ತಂಡವೊಂದರ ಮೇಲೆ ಈವರೆಗೂ 130 ಸಿಕ್ಸರ್ ಬಾರಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ 88 ಸಿಕ್ಸರ್ ಸಿಡಿಸಿದ್ದಾರೆ. ಈ ವಿಶ್ವಕಪ್ನಲ್ಲಿ ದಾಖಲಾದ ಅತಿವೇಗದ ಅರ್ಧಶತಕವೂ ಇದಾಗಿದೆ.
Fastest #T20WorldCup 2024 fifty 🔥
— ICC (@ICC) June 24, 2024
Rohit Sharma’s half century is an @MyIndusIndBank Milestone Moment 🙌#AUSvIND pic.twitter.com/KIag5ws0XI
ಹಲವು ದಾಖಲೆಗಳು: ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾಗಿದು (92) ವೈಯಕ್ತಿಕ ಗರಿಷ್ಠವಾಗಿದೆ. ಮಾಜಿ ಆಟಗಾರ ಸುರೇಶ್ ರೈನಾ 101 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿದೆ. ನಾಯಕನಾಗಿ ವಿಶ್ವಕಪ್ನಲ್ಲಿ 92 ರನ್ ಗಳಿಸಿದ್ದು ಎರಡನೇ ಅತ್ಯಧಿಕವಾಗಿದೆ. ವೆಸ್ಟ್ ಇಂಡೀಸ್ನ ಕ್ರಿಸ್ಗೇಲ್ 98 ರನ್ ಗಳಿಸಿ ಮೊದಲಿದ್ದಾರೆ.
ಇದನ್ನೂ ಓದಿ: ಜಿಂಬಾಬ್ವೆ ಸರಣಿಗೆ ಭಾರತ ತಂಡ ಪ್ರಕಟ: ಶುಭ್ಮನ್ ಗಿಲ್ಗೆ ನಾಯಕತ್ವ, ಮತ್ತೆ ಯಾರಿಗೆಲ್ಲಾ ಚೊಚ್ಚಲ ಅವಕಾಶ? - INDIA SQUAD