ಗ್ರಾಸ್ ಐಲೆಟ್ (ಸೇಂಟ್ ಲೂಸಿಯಾ): ಸೋಮವಾರ ಇಲ್ಲಿನ ಡೇರೆನ್ ಸಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ T20 ವಿಶ್ವಕಪ್ 2024ರ ಸೂಪರ್ 8 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಇನ್ನಿಂಗ್ಸ್‌ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಅವರು ಕೆಲವು ಅದ್ಭುತ ದಾಖಲೆಗಳನ್ನು ಮಾಡಿದ್ದಾರೆ.
ಮುಂಬೈಕರ್ ರೋಹಿತ್ ಶರ್ಮಾ ಅಬ್ಬರ ಬ್ಯಾಟಿಂಗ್ ಮಾಡುವ ಟೀಂ ಇಂಡಿಯಾ ಗೆಲುವಿಗೆ ಪ್ರಮುಖ ಸ್ಥಾನವಹಿಸಿದ್ದರು. ರೋಹಿತ್ ಶರ್ಮಾ 41 ಎಸೆತಗಳಲ್ಲಿ ಏಳು ಬೌಂಡರಿಗಳು ಮತ್ತು ಎಂಟು ಸಿಕ್ಸರ್‌ಗಳೊಂದಿಗೆ 92 ರನ್ ಗಳಿಸಿದರು. ನಾಗ್ಪುರ ಮೂಲದ ರೋಹಿತ್ ಅವರು ಆಸ್ಟ್ರೇಲಿಯಾದ ಎಲ್ಲಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.
ಗ್ರೌಂಡ್ನಲ್ಲಿ 360 ಡಿಗ್ರಿ ಆ್ಯಂಗಲ್ನಲ್ಲಿ ಬ್ಯಾಟಿಂಗ್ ಮಾಡಿದರು. ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದ ಭಾರತೀಯ ಅಭಿಮಾನಿಗಳು ರೋಹಿತ್ ಅದ್ಭುತ ಪ್ರದರ್ಶನವನ್ನು ಆನಂದಿಸಿದರು. ರೋಹಿತ್ ಅವರ ಮಿಂಚಿನ ದಾಳಿಯಿಂದಾಗಿ ಭಾರತ ಸವಾಲಿನ ಮೊತ್ತವನ್ನು ದಾಖಲಿಸಿತು. ಜೊತೆಗೆ ರೋಹಿತ್ ಟಿ20ಯಲ್ಲಿ 200 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ರೋಹಿತ್ ಶರ್ಮಾ ಮುರಿದ ದಾಖಲೆಗಳ ವಿವರ:
ಟಿ20 ಡಬ್ಲ್ಯೂಸಿಗಳಲ್ಲಿ ರೋಹಿತ್ ಶರ್ಮಾ ಅತ್ಯಧಿಕ ಸ್ಕೋರ್
- 83* ವಿರುದ್ಧ ಆಸ್ಟ್ರೇಲಿಯಾ (2024)
- 79* ವಿರುದ್ಧ ಆಸ್ಟ್ರೇಲಿಯಾ (2010)
- 74 ವಿರುದ್ಧ ಅಫ್ಘಾನಿಸ್ತಾನ (2021)
- ರೋಹಿತ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. (ನಡೆಯುತ್ತಿರುವ 2024 T20 ವಿಶ್ವಕಪ್‌ನ ಅತ್ಯಂತ ವೇಗದ ಅರ್ಧ ಶತಕ).
ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಮೂರನೇ ವೇಗದ ಅರ್ಧಶತಕ
- 12 ಎಸೆತಗಳು - ಯುವರಾಜ್ ಸಿಂಗ್ ವಿರುದ್ಧ ಇಂಗ್ಲೆಂಡ್ (2007)
- 18 ಎಸೆತಗಳು - ಕೆಎಲ್ ರಾಹುಲ್ ವಿರುದ್ಧ ಸ್ಕಾಟ್ಲೆಂಡ್ (2021)
- 19 ಎಸೆತಗಳು - ರೋಹಿತ್ ಶರ್ಮಾ ವಿರುದ್ಧ ಆಸ್ಟ್ರೇಲಿಯಾ (2024)
ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎದುರಾಳಿ ವಿರುದ್ಧ ಅತಿ ಹೆಚ್ಚು ಸಿಕ್ಸರ್‌ಗಳು
- 130 - ಕ್ರಿಸ್ ಗೇಲ್ vs ಇಂಗ್ಲೆಂಡ್
- 130* - ರೋಹಿತ್ ಶರ್ಮಾ vs ಆಸ್ಟ್ರೇಲಿಯಾ
- 88 - ರೋಹಿತ್ ಶರ್ಮಾ vs ವೆಸ್ಟ್ ಇಂಡೀಸ್
ಪಂದ್ಯವೊಂದರಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್
- 98 - ನಿಕೋಲಸ್ ಪೂರನ್ vs ಅಫ್ಘಾನಿಸ್ತಾನ
- 94 - ಆರನ್ ಜೋನ್ಸ್ vs ಕೆನಡಾ
- 92 - ರೋಹಿತ್ ಶರ್ಮಾ vs ಆಸ್ಟ್ರೇಲಿಯಾ
ಟಿ20 ವಿಶ್ವಕಪ್‌ನಲ್ಲಿ ನಾಯಕನ ಗರಿಷ್ಠ ವೈಯಕ್ತಿಕ ಸ್ಕೋರ್
- 98 - ಕ್ರಿಸ್ ಗೇಲ್ vs ಭಾರತ (2010)
- 92 - ರೋಹಿತ್ ಶರ್ಮಾ vs ಆಸ್ಟ್ರೇಲಿಯಾ (2024)
- 88 - ಕ್ರಿಸ್ ಗೇಲ್ vs ಆಸ್ಟ್ರೇಲಿಯಾ (2009)
ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಗರಿಷ್ಠ ವೈಯಕ್ತಿಕ ಸ್ಕೋರ್
- 101 - ಎಸ್ ರೈನಾ vs ದಕ್ಷಿಣ ಆಫ್ರಿಕಾ (2010)
- 92 - ರೋಹಿತ್ ಶರ್ಮಾ vs ಆಸ್ಟ್ರೇಲಿಯಾ (2024)
- 89* - ವಿರಾಟ್ ಕೊಹ್ಲಿ v ವೆಸ್ಟ್ ಇಂಡೀಸ್ (2016)
ಇದನ್ನೂ ಓದಿ: ಟಿ20ಐನಲ್ಲಿ ಕೊಹ್ಲಿ ಹಿಂದಿಕ್ಕಿದ ರೋಹಿತ್: ಬಾಬರ್ ಆಜಮ್ ದಾಖಲೆ ಸರಿಗಟ್ಟಿದ ಟೀಂ ಇಂಡಿಯಾ ನಾಯಕ - ROHIT SHARMA SURPASS KOHLI