ETV Bharat / sports

ಬಾಂಗ್ಲಾದೇಶದ ಫೀಲ್ಡಿಂಗ್​ ಸೆಟ್​​ ಮಾಡಿದ ರಿಷಭ್​ ಪಂತ್​: ವಿಡಿಯೋ ವೈರಲ್​ - Rishabh Pant sets field

author img

By ETV Bharat Sports Team

Published : 2 hours ago

ಚೆನ್ನೈನಲ್ಲಿ ನಡೆಯುತ್ತಿರುವ ಟೆಸ್ಟ್​ ಪಂದ್ಯದಲ್ಲಿಂದು ಅಪರೂಪದ ಸಂಗತಿಯೊಂದು ನಡೆದಿದ್ದು, ರಿಷಭ್​ ಪಂತ್​ ಬಾಂಗ್ಲಾದೇಶದ ಫೀಲ್ಡಿಂಗ್​ ಸೆಟ್​ ಮಾಡಿಸಿ ಗಮನ ಸೆಳೆದಿದ್ದಾರೆ. ಇದರ ವಿಡಿಯೋ ಕೂಡ ವೈರಲ್​ ಆಗಿದೆ.

ರಿಷಭ್​ ಪಂತ್​
ರಿಷಭ್​ ಪಂತ್​ (Twitter)

ಚೆನ್ನೈ, ತಮಿಳುನಾಡು: ಚೆನ್ನೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾಗೆ ಬೃಹತ್ ಗುರಿ ನೀಡಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದ್ದ ಭಾರತ ಇಂದು 287 ರನ್​ಗಳಿಸಿ ಡಿಕ್ಲೆರ್​ ಘೋಷಿಸಿತು. ಮೂರನೇ ದಿನದಾಟದಂದು ರಿಷಭ್​ ಪಂತ್ ಮತ್ತು ಗಿಲ್ ಶತಕ ಪೂರೈಸಿದರು. ಇದರೊಂದಿಗೆ ಭಾರತ 515 ರನ್​ಗಳ ಬೃಹತ್​ ಮುನ್ನಡೆ ಸಾಧಿಸಿತು. ಏತನ್ಮಧ್ಯೆ, ಮೊದಲ ಸೆಷನ್‌ನಲ್ಲಿ ರಿಷಭ್​​ ಪಂತ್ ಅವರು ಎದುರಾಳಿ ತಂಡದ ಫೀಲ್ಡಿಂಗ್​ ಸೆಟ್​ ಮಾಡಿಸಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಹೌದು, ಪಂತ್ ಬ್ಯಾಟಿಂಗ್​ ವೇಳೆ, ಬಾಂಗ್ಲಾ ನಾಯಕ ನಜ್ಮುಲ್ ಶಾಂಟೊ ಫೀಲ್ಡರ್​ಗಳನ್ನು ಎಲ್ಲಿ ನಿಲ್ಲಿಸಬೇಕು ಎಂದು ಯೋಚಿಸುತ್ತಿದ್ದರು. ಅದರಂತೆ ಫೀಲ್ಡರ್​ಗಳನ್ನು ನಿಲ್ಲಿಸಿದ್ದರು. ಇದನ್ನು ಗಮನಿಸಿದ ರಿಷಭ್ ಪಂತ್ ತಕ್ಷಣವೇ 'ಭಾಯ್.. ಇಲ್ಲೊಬ್ಬ ಫೀಲ್ಡರ್​ ನಿಲ್ಲಿಸುವಂತೆ ಮಿಡ್​ ವಿಕೆಟ್​ ಕಡೆಗೆ ಸೂಚಿಸಿದರು. ಪಂತ್​ ಸಲಹೆಯಂತೆಯೇ ನಾಯಕ ಸ್ಯಾಂಟೋ ಫಿಲ್ಡಿಂಗ್​ನಲ್ಲಿ ಬದಲಾವಣೆ ಮಾಡಿ ಕೂಡಲೇ ಮಿಡ್-ವಿಕೆಟ್​ ಕಡೆಗೆ ಫೀಲ್ಡರ್​ ಅನ್ನು ಕಳುಹಿಸಿದರು. ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ​

632 ದಿನಗಳ ಬಳಿಕ ಶತಕ ಸಿಡಿಸಿದ ಪಂತ್​: ಡಿಸೆಂಬರ್​ 30, 2022ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಂತ್​ 15 ತಿಂಗಳುಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಇದಾದ ಬಳಿಕ ಐಪಿಎಲ್​ ಮೂಲಕ ಮತ್ತೆ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡಿದ್ದರು. ಇದೀಗ 632 ದಿನಗಳ ಬಳಿಕ ಪಂತ್ ಮೊದಲ ಬಾರಿಗೆ​ ಟೆಸ್ಟ್​ನಲ್ಲಿ ಭಾಗಿಯಾಗಿದ್ದಾರೆ. ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿ ಶತಕ ಪೂರೈಸಿದ್ದಾರೆ.

ಒಟ್ಟು 128 ಎಸೆತಗಳನ್ನು ಎದುರಿಸಿದ ಪಂತ್​ 4 ಸಿಕ್ಸರ್ ಮತ್ತು 13 ಬೌಂಡರಿ ಸಹಾಯದೊಂದಿಗೆ 109 ರನ್​ ಗಳಿಸಿ ​ಮೆಹದಿ ಹಸನ್​ ಎಸೆತದಲ್ಲಿ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು.

ಇದನ್ನೂ ಓದಿ: ಒಂದಾನೊಂದು ಕಾಲದಲ್ಲಿ ಬೀದಿಯಲ್ಲಿ ಕಸ ಆರಿಸುತ್ತಿದ್ದ ಕ್ರಿಸ್​ ಗೇಲ್​ ಇಂದು ಎಷ್ಟು ಕೋಟಿ ಒಡೆಯ ಗೊತ್ತಾ! - Chris Gayle 45th birthday

ETV Bharat Logo

Copyright © 2024 Ushodaya Enterprises Pvt. Ltd., All Rights Reserved.