ETV Bharat / sports

ಮಹಾರಾಜ ಟ್ರೋಫಿ ಹರಾಜು: ಫ್ರಾಂಚೈಸಿ ಕ್ರಿಕೆಟ್‌ಗೆ ದ್ರಾವಿಡ್ ಪುತ್ರ ಎಂಟ್ರಿ; ಚೇತನ್ ದುಬಾರಿ ಆಟಗಾರ - Maharaja Trophy Auction - MAHARAJA TROPHY AUCTION

ಮಹಾರಾಜ ಟ್ರೋಫಿ ಸೀಸನ್‌ -3ಕ್ಕಾಗಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಹಲವು ಆಟಗಾರರು ಲಕ್ಷಾಂತರ ರೂ.ಗೆ ಬಿಕರಿಯಾಗಿದ್ದಾರೆ.

Maharaja Trophy
ಮಹಾರಾಜ ಟ್ರೋಫಿ ಹರಾಜು (Source: Maharaja Trophy)
author img

By ETV Bharat Karnataka Team

Published : Jul 25, 2024, 8:55 PM IST

ಬೆಂಗಳೂರು: ಮಹಾರಾಜ ಟ್ರೋಫಿ ಮೂರನೇ ಸೀಸನ್‌ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಅಂತ್ಯವಾಗಿದ್ದು, ಚೇತನ್ ಎಲ್.ಆರ್. ಗರಿಷ್ಠ ಮೊತ್ತಕ್ಕೆ ಹರಾಜಾದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನ ಕೆಎಸ್‌ಸಿಎ ಆವರಣದಲ್ಲಿ 240 ಜನ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಶ್ರೇಯಸ್ ಗೋಪಾಲ್, ಕೆ.ಗೌತಮ್ ಹಾಗೂ ಜೆ.ಸುಚಿತ್ ಸೇರಿದಂತೆ ಅನೇಕ ಆಟಗಾರರು ತಂಡ ಸೇರ್ಪಡೆಗೊಂಡರು.

Maharaja Trophy
ಮಹಾರಾಜ ಟ್ರೋಫಿ (Source: Maharaja Trophy)

8.2 ಲಕ್ಷ ರೂ.ಗೆ ಬೆಂಗಳೂರು ಬ್ಲಾಸ್ಟರ್ಸ್ ಪಾಲಾದ ಚೇತನ್ ಎಲ್.ಆರ್. ದುಬಾರಿ ಆಟಗಾರ ಎನಿಸಿದರು. 18 ವರ್ಷದ ಯುವ ಆಟಗಾರ ಸಮಿತ್ ದ್ರಾವಿಡ್ ಅವರನ್ನು 0.50 ಲಕ್ಷ ರೂ.ಗೆ ಮೈಸೂರು ವಾರಿಯರ್ಸ್ ಖರೀದಿಸಿತು.

ರಾಷ್ಟ್ರೀಯ ತಂಡ ಪ್ರತಿನಿಧಿಸಿರುವ ಹಾಗೂ ಐಪಿಎಲ್‌ನಲ್ಲಿ ಕಣಕ್ಕಿಳಿದಿರುವ ಅನುಭವಿ ಆಟಗಾರರ ಎ ಕೆಟಗರಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಆಲ್​ರೌಂಡರ್ ಶ್ರೇಯಸ್ ಗೋಪಾಲ್ ಅವರನ್ನು 7.6 ಲಕ್ಷ ರೂ.ಗೆ ಮಂಗಳೂರು ಡ್ರ್ಯಾಗನ್ಸ್ ತಂಡ ಖರೀದಿಸಿತು. ಉಳಿದಂತೆ ಮೈಸೂರು ವಾರಿಯರ್ಸ್ ತಂಡ 7.4 ಲಕ್ಷ ರೂ.ಗೆ ಆಲ್​ರೌಂಡರ್ ಕೆ.ಗೌತಮ್, 4.8 ಲಕ್ಷ ರೂ.ಗೆ ಜೆ‌.ಸುಚಿತ್, 1 ಲಕ್ಷ ರೂ.ಗೆ ಪ್ರಸಿಧ್ ಕೃಷ್ಣ ಅವರನ್ನು ಖರೀದಿಸಿತು. ಸ್ಪಿನ್ನರ್ ಕೆ.ಸಿ.ಕಾರ್ಯಪ್ಪ 4.2 ಲಕ್ಷ ರೂ.ಗೆ ಹುಬ್ಬಳ್ಳಿ ಟೈಗರ್ಸ್ ಹಾಗೂ 6.8 ಲಕ್ಷ ರೂ.ಗೆ ಪ್ರವೀಣ್ ದುಬೆ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಸೇರಿದರು.

Maharaja Trophy
ಮಹಾರಾಜ ಟ್ರೋಫಿ ಹರಾಜು (Source: Maharaja Trophy)

ರಾಜ್ಯ ತಂಡ ಪ್ರತಿನಿಧಿಸಿರುವ ಆಟಗಾರರ ಬಿ ಕೆಟಗರಿಯಲ್ಲಿ‌ ಬರೋಬ್ಬರಿ 8.2 ಲಕ್ಷ ರೂ.ಗೆ ಚೇತನ್ ಎಲ್.ಆರ್. ಬೆಂಗಳೂರು ಬ್ಲಾಸ್ಟರ್ಸ್ ತಂಡದ ಪಾಲಾದರೆ, ಕಳೆದ ಸೀಸನ್‌ನ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಲವನಿತ್ ಸಿಸೋಡಿಯಾರನ್ನು 7.2 ಲಕ್ಷ ರೂ.ಗೆ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಖರೀದಿಸಿತು. ಇನ್ನುಳಿದಂತೆ, ಸ್ಪೋಟಕ ಬ್ಯಾಟ್ಸ್‌ಮನ್ ಮೊಹಮ್ಮದ್ ತಾಹಾ 6.6 ಲಕ್ಷ ರೂ.ಗೆ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಮರಳಿದರು. 23 ವರ್ಷದ ಯುವ ವೇಗಿ ವಿದ್ಯಾಧರ್ ಪಾಟೀಲ್ 6.4 ಲಕ್ಷ ರೂ.ಗೆ ಮೈಸೂರು ವಾರಿಯರ್ಸ್ ತಂಡದ ಪಾಲಾದರು.

ಸಿ ಕೆಟಗರಿಯಲ್ಲಿ ಬೌಲಿಂಗ್ ಆಲ್​ರೌಂಡರ್ ಅವಿನಾಶ್‌.ಡಿ ಅವರನ್ನು 5.4 ಲಕ್ಷ ರೂ.ಗೆ ಶಿವಮೊಗ್ಗ ಲಯನ್ಸ್ ಖರೀದಿಸಿದರೆ, 3.15 ಲಕ್ಷ ರೂ.ಗೆ ಸ್ಮರಣ್ ಆರ್. ಗುಲ್ಬರ್ಗ ಮಿಸ್ಟಿಕ್ಸ್ ತಂಡಕ್ಕೆ ಮರಳಿದರು. ಹಾಗೂ 3.4 ಲಕ್ಷ ರೂ.ಗೆ ತಿಪ್ಪಾರೆಡ್ಡಿ ಹುಬ್ಬಳ್ಳಿ ಟೈಗರ್ಸ್, 2 ಲಕ್ಷ ರೂ.ಗೆ ಗೌತಮ್ ಮಿಶ್ರಾ ಮೈಸೂರು ವಾರಿಯರ್ಸ್ ಸೇರಿದರು. ಇನ್ನುಳಿದಂತೆ ಡಿ ಕೆಟಗರಿಯಲ್ಲಿ ಲವೀಶ್ ಕೌಶಲ್ 6.2 ಲಕ್ಷ ರೂ.ಗೆ ಬೆಂಗಳೂರು ಬ್ಲಾಸ್ಟರ್ಸ್ ಸೇರುವ ಮೂಲಕ ಗಮನ ಸೆಳೆದರು.

ಎಲ್.ಆರ್.ಚೇತನ್ ಅವರನ್ನು ಗರಿಷ್ಠ ಮೊತ್ತಕ್ಕೆ ಖರೀದಿಸಿದ ಬಳಿಕ ಮಾತನಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್, ''ಮಹಾರಾಜ ಟ್ರೋಫಿಯ ಮೊದಲ ಆವೃತ್ತಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದಿಂದ ಹೊರಹೊಮ್ಮಿದ ಪ್ರತಿಭೆ ಚೇತನ್ ಅವರನ್ನು ತಂಡಕ್ಕೆ ಮರಳಿ ಕರೆತಂದಿರುವುದು ಸಂತಸ ತಂದಿದೆ. ಈ ಬಾರಿ ಚೇತನ್ ಜೊತೆ ಇನ್ನಿಂಗ್ಸ್ ಆರಂಭಿಸಲು ಉತ್ಸುಕನಾಗಿದ್ದೇನೆ'' ಎಂದರು.

ಹರಾಜಿನ ಬಳಿಕ ತಂಡಗಳ ವಿವರ:

ಹುಬ್ಬಳ್ಳಿ ಟೈಗರ್ಸ್: ಮನೀಶ್ ಪಾಂಡೆ (ನಾಯಕ), ಶ್ರೀಜಿತ್ ಕೆ.ಎಲ್., ವಿಧ್ವತ್ ಕಾವೇರಪ್ಪ, ಮನ್ವಂತ್ ಕುಮಾರ್ ಎಲ್., ಕೆ.ಸಿ.ಕಾರ್ಯಪ್ಪ, ಮೊಹಮ್ಮದ್ ತಾಹಾ, ತಿಪ್ಪಾರೆಡ್ಡಿ, ಕಾರ್ತಿಕೇಯ ಕೆ.ಪಿ., ಕುಮಾರ್ ಎಲ್.ಆರ್., ಆದರ್ಶ್ ಪ್ರಜ್ವಲ್, ಕೃತಿಕ್ ಕೃಷ್ಣ, ಅನೀಶ್ವರ್ ಗೌತಮ್, ಮಾಧವ್ ಪ್ರಕಾಶ್ ಬಜಾಜ್, ಶ್ರೀಶ ಎಸ್. ಆಚಾರ್, ದಮನ್ ದೀಪ್ ಸಿಂಗ್, ಮಿತ್ರಕಾಂತ್ ಯಾದವ್ ನಿಶ್ಚಿತ್ ಪೈ, ರಿಷಿ ಬೋಪಣ್ಣ.

ಮೈಸೂರು ವಾರಿಯರ್ಸ್: ಕರುಣ್ ನಾಯರ್ (ನಾಯಕ), ಕಾರ್ತಿಕ್ ಸಿ.ಎ., ಮನೋಜ್ ಭಾಂಡಗೆ, ಕಾರ್ತಿಕ್ ಎಸ್.ಯು., ಜೆ.ಸುಚಿತ್, ಕೆ.ಗೌತಮ್, ವಿದ್ಯಾಧರ್ ಪಾಟೀಲ್, ವೆಂಕಟೇಶ್ ಎಂ., ಹರ್ಷಿಲ್ ಧರ್ಮಾನಿ, ಗೌತಮ್ ಮಿಶ್ರಾ, ಧನುಷ್ ಗೌಡ, ಸಮಿತ್ ದ್ರಾವಿಡ್, ದೀಪಕ್ ದೇವಾಡಿಗ, ಸುಮಿತ್ ಕುಮಾರ್, ಸ್ಮಯನ್ ಶ್ರೀವಾಸ್ತವ, ಜಾಸ್ಪರ್ ಇ.ಜೆ., ಪ್ರಸಿಧ್ ಕೃಷ್ಣ, ಮೊಹಮ್ಮದ್ ಸರ್ಫರಾಜ್ ಅಶ್ರಫ್.

ಶಿವಮೊಗ್ಗ ಲಯನ್ಸ್: ಅಭಿನವ್ ಮನೋಹರ್, ನಿಹಾಲ್ ಉಲ್ಲಾಳ್, ಕೌಶಿಕ್ ವಿ., ಶಿವರಾಜ್ ಎಸ್., ಪ್ರದೀಪ್ ಟಿ., ಹಾರ್ದಿಕ್ ರಾಜ್, ಧ್ರುವ ಪ್ರಭಾಕರ್, ಆನಂದ್ ದೊಡ್ಡಮನಿ, ರಾಜವೀರ್ ವಾಧ್ವಾ, ಅವಿನಾಶ್ ಡಿ., ಧೀರಜ್ ಮೋಹನ್, ಭರತ್ ಧುರಿ, ಆದಿತ್ಯ ವಿಶ್ವಕರ್ಮ, ಆದಿತ್ಯ ಮಣಿ, ರೋಹಿತ್ ಕೆ., ರೋಹನ್ ನವೀನ್, ಶರತ್ ಎಚ್.ಎಸ್., ಮೋಹಿತ್ ಬಿ.ಎ.

ಗುಲ್ಬರ್ಗ ಮಿಸ್ಟಿಕ್ಸ್: ದೇವದತ್ ಪಡಿಕ್ಕಲ್, ವೈಶಾಕ್ ವಿಜಯ್ ಕುಮಾರ್, ಸ್ಮರಣ್ ಆರ್., ಅನೀಶ್ ಕೆ.ವಿ., ಪ್ರವೀಣ್ ದುಬೆ, ಲವನಿತ್ ಸಿಸೋಡಿಯಾ, ಶರತ್ ಬಿ.ಆರ್., ಆದಿತ್ಯ ನಾಯರ್, ಮೋನಿಶ್ ರೆಡ್ಡಿ, ಶರಣ್ ಗೌಡ್, ಯಶೋವರ್ಧನ್ ಪರಂತಾಪ್, ನಾಥನ್ ಡಿಮೆಲ್ಲೋ ಜೋಚಿಮ್, ಫೈಜಾನ್ ರಿಯಾಜ್, ರಿತೇಶ್ ಭಟ್ಕಳ್, ಅಭಿಷೇಕ್ ಪ್ರಭಾಕರ್, ಪೃಥ್ವಿ ಶೇಖಾವತ್, ಶಿಮೊನ್ ಲೂಯಿಜ್

ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರ್ವಾಲ್, ಶುಭಾಂಗ್ ಹೆಗ್ಡೆ, ಮೊಹ್ಸಿನ್ ಖಾನ್, ಸೂರಜ್ ಅಹುಜಾ, ಅನಿರುದ್ಧ ಜೋಶಿ, ನವೀನ್ ಎಂ.ಜಿ., ಪ್ರತೀಕ್ ಜೈನ್, ಚೇತನ್ ಎಲ್.ಆರ್., ಮೇಲು ಕ್ರಾಂತಿಕುಮಾರ್, ಸಂತೋಖ್ ಸಿಂಗ್, ಆದಿತ್ಯ ಗೋಯಲ್, ರಕ್ಷಿತ್ ಎಸ್., ವರುಣ್ ರಾವ್ ಟಿ.ಎನ್., ನಿರಂಜನ್ ನಾಯ್ಕ್, ಲವೀಶ್ ಕೌಶಾಲ್, ವರುಣ್ ಕುಮಾರ್ ಹೆಚ್.ಸಿ., ಶಿಖರ್ ಶೆಟ್ಟಿ, ಭೀಮ್ ರಾವ್ ನವಲೆ.

ಮಂಗಳೂರು ಡ್ರಾಗನ್ಸ್: ರೋಹನ್ ಪಾಟೀಲ್, ಪಾರಸ್ ಗುರ್ಬೌಕ್ಸ್ ಆರ್ಯ, ಸಿದ್ಧಾರ್ಥ್ ಕೆ.ವಿ., ನಿಕಿನ್ ಜೋಸ್, ಶ್ರೇಯಸ್ ಗೋಪಾಲ್, ಧೀರಜ್ ಜೆ.ಗೌಡ, ದರ್ಶನ್ ಎಂ.ಬಿ., ಮ್ಯಾಕ್ನೈಲ್ ಹ್ಯಾಡ್ಲಿ ನೊರೊನ್ಹಾ, ತುಷಾರ್ ಸಿಂಗ್, ಲಂಕೇಶ್ ಕೆ.ಎಸ್., ಸಮರ್ಥ್ ನಾಗರಾಜ್, ಸಂಕಲ್ಪ್ ಎಸ್.ಎಸ್., ಅಭಿಲಾಷ್ ಶೆಟ್ಟಿ, ನಿಶ್ಚಿತ್ ರಾವ್, ಲೋಚನ್ ಎಸ್.ಗೌಡ, ಪ್ರಣವ್ ಭಾಟಿಯಾ, ಸಂಜಯ್ ಅಶ್ವಿನ್, ಸಾಗರ್ ಸೋಲಂಕಿ.

ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿಯ ಮೂರನೇ ಆವೃತ್ತಿಯು ಆಗಸ್ಟ್ 15ರಂದು ಪ್ರಾರಂಭವಾಗಲಿದೆ. ಪಂದ್ಯಾವಳಿಯನ್ನು ಸ್ಟಾರ್ ಸ್ಪೋರ್ಟ್ಸ್-2, ಸ್ಟಾರ್‌ಸ್ಪೋರ್ಟ್ಸ್ ಕನ್ನಡ ಹಾಗೂ ಫ್ಯಾನ್‌ಕೋಡ್‌ನಲ್ಲಿ ವೀಕ್ಷಿಸಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.