ETV Bharat / sports

ಪಂಜಾಬ್​​​ ಕಿಂಗ್ಸ್​ ವಿರುದ್ಧ  ಸನ್​ರೈಸರ್ಸ್​ಗೆ 2 ರನ್​ಗಳ ರೋಚಕ ಗೆಲುವು - SRH Beat PBKS

ಸನ್​ರೈಸರ್ಸ್​ ಹೈದರಾಬಾದ್​ ವಿರುದ್ದ ಪಂಜಾಬ್​ ಕಿಂಗ್ಸ್​ ಸೋಲು ಅನುಭವಿಸಿದೆ.

ಪಾಂಜಾಬ್​ ಕಿಂಗ್ಸ್​ ವಿರುದ್ದ ಸನ್​ರೈಸರ್ಸ್​ಗೆ 2 ರನ್​ಗಳ ರೋಚಕ ಗೆಲುವು

author img

By ETV Bharat Karnataka Team

Published : Apr 10, 2024, 6:28 AM IST

Updated : Apr 10, 2024, 7:10 AM IST

ಮೊಹಾಲಿ: ಮಂಗಳವಾರ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ (IPL​)ನ 23ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ದ ಸನ್‌ರೈಸರ್ಸ್ ಹೈದರಾಬಾದ್ (SRH) 2 ರನ್​ಗಳ ರೋಚಕ ಗೆಲುವ ಸಾಧಿಸಿದೆ. ಎಸ್​ಆರ್​ಹೆಚ್​ ನೀಡಿದ್ದ 182 ರನ್​​ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್​ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 180 ರನ್ ಗಳಿಸಿ ಸೋಲು ಅನುಭವಿಸಿದೆ.

ಮೊಹಾಲಿಯ ಮಹಾರಾಜ ಯದ್ವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಪವರ್​ ಪ್ಲೇನಲ್ಲೇ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಬ್ಯಾಟರ್​ಗಳಾದ ಟ್ರಾವಿಸ್​ ಹೆಡ್ (21), ಅಭಿಷೇಕ್​ ಶರ್ಮಾ (16), ಮಾಕ್ರಮ್​ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ​ತಂಡದ ಸ್ಕೋರ್​ 39ಕ್ಕೆ ತಲುಪಿದ್ದ ವೇಳೆ ಪ್ರಮುಖ ವಿಕೆಟ್​ಗಳನ್ನು ತಂಡ ಕೈ ಚೆಲ್ಲಿತು. ಬಳಿಕ ಬಂದ ತ್ರಿಪಾಟಿ (11), ಕ್ಲಾಸೇನ್​ (9) ಕೂಡ ಕ್ರೀಸ್​ನಲ್ಲಿ ನೆಲೆಯೂರಲು ಆಗದೇ ಬಹುಬೇಗ ನಿರ್ಗಮಿಸಿದರು.

ಈ ವೇಳೆ, ತಂಡಕ್ಕೆ ಆಸೆರೆಯಾದ ನಿತೀಶ್​ ಕುಮಾರ್​ ಬಿರುಸಿನ ಬ್ಯಾಟಿಂಗ್​ ಮೂಲಕ 37 ಎಸತಗಳಲ್ಲಿ 4 ಬೌಂಡರಿ 5 ಸಿಕ್ಸರ್​ ಸಮೇತ 64 ರನ್​ಗಳನ್ನು ಚೆಚ್ಚಿ ಎದುರಾಳಿ ಬೌಲರ್​ಗಳ ಬೆವರಿಳಿಸಿದರು. ಮತ್ತೊಂದೆಡೆ ಅಬ್ದುಲ್​ ಸಮದ್​ 12 ಎಸೆತಗಳಲ್ಲಿ 25ರನ್​ಗಳನ್ನು ಬಾರಿಸುವ ಮೂಲಕ ತಂಡದ ಸ್ಕೋರ್​182ಕ್ಕೆ ಕೊಂಡೊಯ್ಯುವಲ್ಲಿ ಸಹಾಯ ಮಾಡಿದರು. ಪಂಜಾಬ್​ ಪರ ಅರ್ಷದೀಪ್​ 4, ಸ್ಯಾಮ್​ ಕರ್ರನ್​, ಹರ್ಷಲ್​ ಪಟೇಲ್​ ತಲಾ 2 ವಿಕೆಟ್​ ಪಡೆದರು.

ಈ ಗುರಿ ಬೆನ್ನಟ್ಟಿದ್ದ ಪಂಜಾಬ್​ ಕೂಡ ಪವರ್​ ಪ್ಲೇನಲ್ಲೆ ಪ್ರಮುಖ ಮೂರು ವಿಕೆಟ್​ಗಳನ್ನು ಕಳೆದುಕೊಂಡಿತು. ನಂತರ ಬಂದ ಸ್ಯಾಮ್​ ಕರ್ರನ್​ (29), ಸಿಕಂದರ್​ ರಾಜಾ(28), ಜಿತೇಶ್​ ಶರ್ಮಾ (19) ತಂಡಕೆ ರನ್​ ಕೊಡುಗೆ ನೀಡಿ ಪವಿಲಿಯನ್​ ಸೇರಿದರು. ಈ ವೇಳೆ ಹೊಡಿಬಡಿ ಆಟವಾಡಿದ ಶಶಾಂಕ್​​ ಸಿಂಗ್​(46) ಮತ್ತು ಅಶ್ಟೋಶ್​ ಶರ್ಮಾ (35) ಅಜೇಯವಾಗಿ ಕೊನೆ ಓವರ್​ ವರೆಗೂ ಕ್ರೀಸ್​ನಲ್ಲಿ ನಿಂತು ತಂಡದ ಗೆಲುವಿಗಾಗಿ ಹೋರಾಡಿದರೂ ಶ್ರಮಕ್ಕೆ ಫಲ ಸಿಗದೇ 2 ರನ್​ಗಳಿಂದ ಪಂಜಾಬ್​ ಸೋಲೊಪ್ಪಿಕೊಂಡಿತು. ಎಸ್​ಆರ್​ಹೆಚ್​ ಪರ ಭುವನೇಶ್ವರ್​ 2 ವಿಕೆಟ್​ ಪಡೆದರು.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಸ್ಟಾಂಡ್​ಗಳಿಗೆ ದಿಗ್ಗಜ ಕ್ರಿಕೆಟಿಗರ ಹೆಸರಿಡಲು ಸಿಎಂ ಮನವಿ - Chinnaswamy Stadium

Last Updated : Apr 10, 2024, 7:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.